ಪಿಕ್ಸೆಲ್ ಕ್ರಿಯೇಟಿವ್ಸ್ ಸಂಸ್ಥೆಯ ಪಾಲುದಾರ ಎಲ್.ಇ.ಡಿ ಪ್ರಶಾಂತಣ್ಣ ಪಲ್ಲತ್ತಡ್ಕ ನಿಧನ

ಶೇರ್ ಮಾಡಿ

ಪುತ್ತೂರು: ಪಿಕ್ಸೆಲ್‌ ಕ್ರಿಯೇಟಿವ್‌ ಸಂಸ್ಥೆಯ ಪಾಲುದಾರ ಪ್ರಶಾಂತ್‌ ಪಲ್ಲತ್ತಡ್ಕ (32.ವ) ಅಲ್ಪಕಾಲದ ಅನಾರೋಗ್ಯದಿಂದ ಅ.31ರಂದು ಮುಂಜಾನೆ ಮಂಗಳೂರಿನ ಖಾಸಾಗಿ ಆಸ್ಪತ್ರೆಯಲ್ಲಿ ನಿಧನರಾದರು.

ಸಮಾರಂಭಕ್ಕೆ ಎಲ್ಇಡಿ ಹಾಗೂ ನೇರಪ್ರಸಾರಕ್ಕೆ ಬೇಕಾಗುವ ಪರಿಕರಗಳನ್ನುಅಳವಡಿಸುವ ಕಾರ್ಯ ಮಾಡುತ್ತಿದ್ದ ಪ್ರಶಾಂತ್‌ ರವರು ಕೆಲ ದಿನಗಳಿಂದ ಅನಾರೋಗ್ಯದಿಂದಿದ್ದರು.

ಎಲ್ಲರೊಂದಿಗೆ ಆತ್ಮೀಯತೆಯಿಂದ ಬೆರೆಯುತ್ತಿದ್ದ ಇವರನ್ನು ಎಲ್.ಇ.ಡಿ ಪ್ರಶಾಂತಣ್ಣ ಎಂದೇ ಚಿರಪರಿಚಿತರಾಗಿದ್ದರು.

ಮೃತರು ಪತ್ನಿ, ತಂದೆ-ತಾಯಿ, ಅಕ್ಕಂದಿರು, ಸಿಬ್ಬಂದಿ ವರ್ಗ ಹಾಗೂ ಬಂಧು-ಮಿತ್ರರನ್ನು ಅಗಲಿದ್ದಾರೆ.

Leave a Reply

error: Content is protected !!