ಕನ್ನಡಿಗರು ಅಭಿಮಾನದಿಂದ ನಾನು ಕನ್ನಡಿಗನೆಂದು ಹೇಳಿಕೊಳ್ಳಬೇಕು -ಗಣರಾಜ್ ಕುಂಬ್ಳೆ

ಶೇರ್ ಮಾಡಿ

ನೆಲ್ಯಾಡಿ: ಬೆಥನಿ ವಿದ್ಯಾಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಕರ್ನಾಟಕ ಪತಾಕೆಯನ್ನು ಹಾರಿಸಿ, ಕನ್ನಡದ ವೈಭವವನ್ನು ಸಾರುವ ಸಂದೇಶವನ್ನು ನೀಡುವುದರ ಮೂಲಕ ಹಾಗೂ ತಾಯಿ ಭುವನೇಶ್ವರಿ ದೇವಿಗೆ ಪುಷ್ಪಾರ್ಚನೆಯನ್ನು ಮಾಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಅಧ್ಯಕ್ಷತೆಯನ್ನು ವಿದ್ಯಾಸಂಸ್ಥೆಯ ಪ್ರಾಂಶುಪಾಲರಾದ ರೆ.ಫಾ.ತೋಮಸ್ ಬಿಜಿಲಿ ಅವರು ವಹಿಸಿ ಕನ್ನಡಿಗರು ನಾಡು ನುಡಿ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕು, ಈ ಕೆಲಸ ವಿದ್ಯಾರ್ಥಿಗಳಿಂದಲೇ ಆರಂಭಗೊಳ್ಳಬೇಕೆಂದು ನುಡಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಶ್ರೀರಾಮಕುಂಜೇಶ್ವರ ಮಹಾ ವಿಶ್ವವಿದ್ಯಾನಿಲಯದ ಪ್ರಾಂಶುಪಾಲರಾದ ಗಣರಾಜ್ ಕುಂಬ್ಳೆ ಅವರು ಕನ್ನಡಿಗರು ಅಭಿಮಾನದಿಂದ ನಾನು ಕನ್ನಡಿಗನೆಂದು ಹೇಳಿಕೊಳ್ಳಬೇಕು, ನಮ್ಮಲ್ಲಿ ಭಾವೈಕ್ಯತೆಯನ್ನು ಬೆಳೆಸಿಕೊಳ್ಳಬೇಕು, ನಮ್ಮ ನಾಡಿನ ಸಾಹಿತ್ಯ ಇತಿಹಾಸವನ್ನು ತಿಳಿದುಕೊಂಡು ಜ್ಞಾನವನ್ನು ಬೆಳೆಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.

ಕನ್ನಡ ಸಾಹಿತ್ಯ ಸಂಘದ ವಿದ್ಯಾರ್ಥಿಗಳಿಂದ ವಿವಿಧ ಮನೋರಂಜನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ವೇದಿಕೆಯಲ್ಲಿ ಉಪಪ್ರಾಂಶುಪಾಲರಾದ ಜೋಸ್ ಎಮ್.ಜೆ, ಮುಖ್ಯೋಪಾಧ್ಯಾಯರಾದ ಜಾರ್ಜ್.ಕೆ.ತೋಮಸ್, ಜೋಸ್ ಪ್ರಕಾಶ್ ಉಪಸ್ಥಿತರಿದ್ದರು.

ಕುಮಾರಿ ಅಶ್ವಿನಿ ಸ್ವಾಗತಿಸಿ, ಕುಮಾರಿ ಸಾನ್ವಿ ವಂದಿಸಿದರು, ಕುಮಾರಿ ದನ್ವಿ ಸುಧೀರ್ ನಿರೂಪಿಸಿದರು

Leave a Reply

error: Content is protected !!