
ತ್ಯಾಜ್ಯ ನೀರು ಸಾಗುವ ಒಳಚರಂಡಿ ಸ್ಲ್ಯಾಬ್ ತುಂಡಾದ ಪರಿಣಾಮ ಹಸುವೊಂದು ಅದರೊಳಗಡೆ ಸಿಲುಕಿಕೊಂಡ ಘಟನೆ ನ.6ರಂದು ನಡೆದಿದೆ.
ಬೆಳ್ತಂಗಡಿ ಕೃಷಿ ಇಲಾಖೆಯ ಜಾಗದಲ್ಲಿ ಪ.ಪಂ. ವ್ಯಾಪ್ತಿಯ ತ್ಯಾಜ್ಯ ನೀರು ಸಾಗುವ ಒಳಚರಂಡಿ ವ್ಯವಸ್ಥೆಯಿದೆ. ಇದರ ಸ್ಲ್ಯಾಬ್ ಬಹಳಷ್ಟು ಹಳೆಯದಾಗಿದ್ದು, ಬಹುತೇಕ ತುಂಡಾಗಿತ್ತು. ಹಸುವೊಂದು ಹುಲ್ಲು ಮೇಯುತ್ತಾ ಈ ಚರಂಡಿಗೆ ಬಿದ್ದಿದೆ. ಮೇಲೇಳಲಾಗದೆ ಚರಂಡಿಯೊಳಗೆ ಸಾಗಿದ್ದರಿಂದ 10 ಮೀಟರ್ ಒಳಗೆ ಸಿಲುಕಿಕೊಂಡಿತ್ತು. ಸ್ಥಳೀಯರು ಪ.ಪಂ. ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು.
ಸ್ಥಳೀಯರು ಪ್ರಯತ್ನಿಸಿದರಾದರೂ ಚರಂಡಿಯೊಳಕ್ಕೆ ನುಸುಳಲು ಸಾಧ್ಯ ವಾಗದೇ ಇರುವುದರಿಂದ ಹಸು ವನ್ನು ಮೇಲಕ್ಕೆತ್ತಲಾಗಲಿಲ್ಲ.
ಬಳಿಕ ಪಟ್ಟಣ ಪಂಚಾಯತ್ ಸಹಕಾರದಿಂದ ಜೆಸಿಬಿ ತರಿಸಿ ಹಸುವನ್ನು ಮೇಲಕ್ಕೆತ್ತಲಾಯಿತು. ಸುಮಾರು 2 ತಾಸು ಕಾರ್ಯಾಚರಣೆ ಬಳಿಕ ಹಸು ಮೇಲಕೆತ್ತಲಾಯಿತು. ಹಸು ಜೀವಹಾನಿ ಸಂಭವಿಸಿಲ್ಲ.

