ಮಹಿಳೆಯ ತಲೆ ತುಳಿದು ಕೊಂದ ಕಾಡಾನೆ

ಶೇರ್ ಮಾಡಿ

ಕಾಡಾನೆ ದಾಳಿಗೆ ಮಹಿಳೆ ಬಲಿಯಾದ ಘಟನೆ ಜಿಲ್ಲೆಯ ಆಲ್ದೂರು ಸಮೀಪದ ಹೆಡೆದಾಳು ಗ್ರಾಮದಲ್ಲಿ ನಡೆದಿದೆ.

ಮೃತ ಮಹಿಳೆಯನ್ನು ವೀಣಾ (45) ಎಂದು ಗುರುತಿಸಲಾಗಿದೆ. ಮಹಿಳೆ ಕಾಫಿ ತೋಟಕ್ಕೆ ಕೆಲಸಕ್ಕೆ ಹೋಗುವ ವೇಳೆ ಆನೆ ದಾಳಿ ನಡೆಸಿದೆ. ಈ ವೇಳೆ ಮಹಿಳೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾಳೆ. ಆದರೆ ಸಾಧ್ಯವಾಗಿಲ್ಲ. ಈ ವೇಳೆ ಆನೆ ದಾಳಿ ನಡೆಸಿ ಮಹಿಳೆಯ ತಲೆಯನ್ನು ತುಳಿದಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಮಹಿಳೆ ಸ್ಥಳದಲ್ಲೇ ಸಾವಿಗೀಡಾಗಿದ್ದಾಳೆ.

ಕಳೆದ ಕೆಲವು ದಿನಗಳಿಂದ ಸುಮಾರು 7 ಕಾಡಾನೆಗಳು ಕಾಫಿ ತೋಟದ ಸುತ್ತಮುತ್ತವೇ ಬೀಡು ಬಿಟ್ಟಿವೆ. ಇದರಿಂದ ಗ್ರಾಮಸ್ಥರು ಹಾಗೂ ಕೂಲಿ ಕಾರ್ಮಿಕರು ಓಡಾಡುವುದು ಕಷ್ಟವಾಗಿದೆ. ಆನೆಗಳನ್ನು ಸ್ಥಳದಿಂದ ಓಡಿಸುವಂತೆ ಸ್ಥಳೀಯರು ಅರಣ್ಯ ಇಲಾಖೆಗೆ ಒತ್ತಾಯಿಸಿದ್ದಾರೆ.

ಈ ಭಾಗದಲ್ಲಿ ಕಳೆದ ಎರಡು ತಿಂಗಳಲ್ಲಿ ಆನೆ ದಾಳಿಗೆ ಇದು ಎರಡನೇ ಬಲಿಯಾಗಿದೆ.

Leave a Reply

error: Content is protected !!
%d bloggers like this: