ನಿಮ್ಮದು ಯೂಟ್ಯೂಬ್ ಚಾನೆಲ್ ಇದೆಯಾ?: ಸಬ್​ಸ್ಕ್ರೈಬರ್ಸ್ ಹೆಚ್ಚಿಸಲು ಇಲ್ಲಿದೆ ಹೊಸ ಟ್ರಿಕ್ಸ್

ಶೇರ್ ಮಾಡಿ

ಇಂದು ಇಂಟರ್ನೆಟ್ ಬಳಸುವವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಕಡಿಮೆ ಬೆಲೆಗೆ ಡೇಟಾ ಸಿಗುತ್ತಿರುವುದರಿಂದ ಫ್ರೀ ಟೈಮ್​ನಲ್ಲಿ ಹೆಚ್ಚಿನವರು ಸಾಮಾಜಿಕ ಜಾಲತಾಣಗಳಲ್ಲಿ ಸಮಯ ಕಳೆಯುತ್ತಿರುತ್ತಾರೆ. ಈಗಂತು ಇನ್​ಸ್ಟಾಗ್ರಾಮ್, ಫೇಸ್​ಬುಕ್ ಜೊತೆ ಯೂಟ್ಯೂಬ್ ವೀಕ್ಷಣೆಯೂ ಹೆಚ್ಚಾಗಿದೆ. ಭಾರತದಲ್ಲಿ ಯೂಟ್ಯೂಬ್‌ ಜನಪ್ರಿಯತೆ ಗಮನಾರ್ಹ ಏರಿಕೆ ಕಂಡಿವೆ. ನಿಮ್ಮ ಕೌಶಲ್ಯದಿಂದ ಮನೆಯಲ್ಲೇ ಕುಳಿತು ಹಣವನ್ನು ಗಳಿಸಲು ಇದು ಉತ್ತಮ ಮಾರ್ಗವಾಗಿದೆ. ಹೀಗಾಗಿ ಯೂಟ್ಯೂಬ್‌ ಚಾನೆಲ್​ಗಳ ಸಂಖ್ಯೆ ಕೂಡ ಲೆಕ್ಕಕ್ಕೆ ಸಿಗದಷ್ಟಿದೆ. ಆದರೆ, ಯೂಟ್ಯೂಬ್ ಖಾತೆ ತೆರೆದು ಕೇವಲ ವಿಡಿಯೋ ಹಂಚಿಕೊಳ್ಳುತ್ತಿದ್ದರೆ ಸಾಲದು.

ಯೂಟ್ಯೂಬ್ ಖಾತೆ ತೆರೆದು ಹಣ ಗಳಿಸಬೇಕು ಎಂದರೆ ಅದಕ್ಕೆ ಒಂದಿಟ್ಟು ಮಾನದಂಡಗಳಿವೆ. ಒಂದು ಸಾವಿರ ಚಂದಾದಾರರು, ನಾಲ್ಕು ಸಾವಿರ ವೀಕ್ಷಣೆ ಹೀಗೆ ಕೆಲವೊಂದು ನಿಯಮಗಳಿವೆ. ಈ ಪೈಕಿ ಬಳಕೆದಾರರಿಗೆ ಚಂದಾದಾರರನ್ನು ಗಳಿಸುವುದೇ ದೊಡ್ಡ ಸವಾಲಾಗಿದೆ. ಹಾಗಾದರೆ, ನಿಮ್ಮ ಚಾನಲ್​ಗೆ ಚಂದಾದಾರರ ಸಂಖ್ಯೆಯನ್ನು ತ್ವರಿತವಾಗಿ ಹೆಚ್ಚಿಸಲು ಬಯಸಿದರೆ ಈ ಟ್ರಿಕ್ ಅನ್ನು ಪ್ರಯೋಗಿಸಬಹುದು.

ಕ್ರಿಯಾಶೀಲರಾಗಿರಿ
ನೀವೆಲ್ಲರೂ ಕೇಳಿರುವಂತೆ, ಯಶಸ್ಸಿಗೆ ಪರಿಶ್ರಮ ಅತ್ಯಗತ್ಯ. ಅದೇ ರೀತಿ, ಯೂಟ್ಯೂಬ್​ನಲ್ಲಿ ಚಂದಾದಾರರನ್ನು ಹೆಚ್ಚಿಸಲು, ನೀವು ನಿರಂತರವಾಗಿ ನಿಮ್ಮ ಚಾನಲ್‌ಗೆ ವಿಡಿಯೋಗಳನ್ನು ಅಪ್‌ಲೋಡ್ ಮಾಡುತ್ತಿರಬೇಕು. ಯೂಟ್ಯೂಬ್​ನಲ್ಲಿ ಯಾವ ವಿಷಯದ ಬಗ್ಗೆ ವಿಡಿಯೋಗಳನ್ನು ಮಾಡುತ್ತಿದ್ದೀರೊ, ಅದರಲ್ಲಿ ಕ್ರಿಯಾಶೀಲರಾಗಿರಬೇಕು. ವಾರದಲ್ಲಿ ಕನಿಷ್ಠ 3 ವಿಡಿಯೋಗಳನ್ನು ಯೂಟ್ಯೂಬ್​ಗೆ ಅಪ್‌ಲೋಡ್ ಮಾಡಲೇಬೇಕು.

ಗುಣಮಟ್ಟಕ್ಕೆ ಗಮನ ಕೊಡಿ
ನಿಮ್ಮ ಯೂಟ್ಯೂಬ್​ ಚಾನಲ್‌ನಲ್ಲಿ ಉತ್ತಮ ಗುಣಮಟ್ಟದ ಮಾಹಿತಿಯನ್ನು ಒದಗಿಸಬೇಕು. ನೀವು ವಿಡಿಯೋವನ್ನು ಪೋಸ್ಟ್ ಮಾಡಿದಾಗ ಅದರ ಗುಣಮಟ್ಟಕ್ಕೆ ವಿಶೇಷ ಗಮನ ನೀಡಿ. ಅದು ನಿಮ್ಮ ಚಾನಲ್ ಅನ್ನು ಇತರರಿಗಿಂತ ಭಿನ್ನವಾಗಿಸುತ್ತದೆ. ಹಾಗಾಯೆ ಹೈ ಕ್ವಾಲಿಟಿಯಲ್ಲಿ ಹಂಚಿಕೊಳ್ಳಿ.

ಶೇರ್ ಮಾಡುವುದು ಮುಖ್ಯ
ನೀವು ಯೂಟ್ಯೂಬ್​ ಚಾನಲ್ ಅನ್ನು ಪ್ರಾರಂಭಿಸಿ ಅದರಲ್ಲಿ ವಿಡಿಯೋಗಳನ್ನು ಅಪ್ಲೋಡ್ ಮಾಡಿಬಿಟ್ಟರೆ ಸಾಲದು. ನಿಮ್ಮ ನೆಟ್‌ವರ್ಕಿಂಗ್ ವಿಸ್ತಾರವಾಗಿರಬೇಕು. ಇದಕ್ಕಾಗಿ ನೀವು ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ಆ ವಿಡಿಯೋವನ್ನು ಶೇರ್ ಮಾಡಬೇಕು. ನೀವು ಎಷ್ಟು ಜನರಿಗೆ ಹತ್ತಿರವಾಗುತ್ತೀರೊ ಅಷ್ಟು ಚಂದಾದಾರರನ್ನು ಪಡೆಯುತ್ತೀರಿ.

ನಿಮ್ಮ ಯೂಟ್ಯೂಬ್​ ಚಾನಲ್ ಅನ್ನು ಶೈಕ್ಷಣಿಕ ಉದ್ದೇಶಗಳಿಗಾಗಿ ರಚಿಸಿದ್ದರೆ, ನೀವು ಅಧ್ಯಯನ ಮಾಡಬೇಕು. ಅಲ್ಲದೆ ಇತರರಿಗಿಂತ ಭಿನ್ನವಾದ ಮಾಹಿತಿ ನೀಡಬೇಕು. ಹಾಗಾದಾಗ ಜನರು ನೋಡಲು ಇಷ್ಟಪಟ್ಟು ಸಬ್​ಸ್ರೈಬ್ ಆಗುತ್ತಾರೆ. ನೀವು ಅಡುಗೆ ಚಾನೆಲ್ ಅನ್ನು ಪ್ರಾರಂಭಿಸಿದ್ದರೆ, ಅಲ್ಲಿ ಕೇವಲ ಅಡುಗೆ ಮಾಡುವ ವಿಡಿಯೋ ಮಾತ್ರವಲ್ಲ ಅದರ ಜೊತೆಗೆ ವಿಭಿನ್ನ ಸಲಹೆಗಳನ್ನು ನೀಡಬೇಕು. ಹೀಗಾದಾಗ ನಿಮ್ಮ ಯೂಟ್ಯೂಬ್​ ಚಾನೆಲ್ ಕ್ಲಿಕ್ ಆಗುತ್ತದೆ.

Leave a Reply

error: Content is protected !!
%d