ಕಡಬ: ಪಂಚಾಯತ್ ರಾಜ್ ಜಿಲ್ಲಾ ಸಮಾವೇಶದ ಪೂರ್ವಭಾವಿ ಸಭೆ

ಶೇರ್ ಮಾಡಿ

ಕಡಬ ಬ್ಲಾಕ್ ಕಾಂಗ್ರೆಸ್ ಸಮಿತಿ ಮತ್ತು ಪಂಚಾಯತ್ ರಾಜ್ ಸಂಘಟನೆ ಕಡಬ ಬ್ಲಾಕ್ ವತಿಯಿಂದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕರ್ತರ ಸಭೆ ನಡೆಯಿತು.

ಈ ಸಭೆಯ ಅಧ್ಯಕ್ಷತೆಯನ್ನು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಸುಧೀರ್ ಶೆಟ್ಟಿ ವಹಿಸಿ ಮಾತನಾಡಿದ ಅವರು ನವೆಂಬರ್ 15ರಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಮತ್ತು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ದಕ್ಷಿಣ ಜಿಲ್ಲೆ ಇದರ ವತಿಯಿಂದ ಪಂಚಾಯತ್ ರಾಜ್ ಜಿಲ್ಲಾ ಸಮಾವೇಶ ಅತ್ಯಂತ ಯಶಸ್ವಿಯಾಗಿ ನಡೆಯುವ ಬಗ್ಗೆ ಮತ್ತು ಈ ಸಭೆಯಲ್ಲಿ ಪ್ರತಿ ಪಂಚಾಯತಿನಿಂದ ಗ್ರಾಮ ಪಂಚಾಯತ್ ಸದಸ್ಯರುಗಳು, ಮಾಜಿ ಸದಸ್ಯರುಗಳು, ಮಾಜಿ ತಾಲೂಕ್ ಮತ್ತು ಜಿಲ್ಲಾ ಪಂಚಾಯತ್ ಸದಸ್ಯರುಗಳು ಮತ್ತು ವಲಯ ಮತ್ತು ಗ್ರಾಮ ಪಂಚಾಯತ್ ಸಮಿತಿ ಅಧ್ಯಕ್ಷರು, ಪಕ್ಷದ ಕಾರ್ಯಕರ್ತರು ಭಾಗವಹಿಸಿ ಈ ಸಮಾವೇಶವನ್ನು ಯಶಸ್ವಿಗೊಳಿಸಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಕಡಬ ಬ್ಲಾಕ್ ವ್ಯಾಪ್ತಿಯ ಪ್ರತಿ ಪಂಚಾಯತ್ ವ್ಯಾಪ್ತಿಯಿಂದ ಕನಿಷ್ಠ 50ಜನ ಈ ಸಮಾವೇಶದಲ್ಲಿ ಭಾಗವಹಿಸಿ ಸಮಾವೇಶ ಯಶಸ್ವಿಗೊಳಿಸಬೇಕು ಎಂದು ವಿನಂತಿಸಿದರು.

ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಕಡಬ ಬ್ಲಾಕ್ ಮಾಜಿ ಅಧ್ಯಕ್ಷರಾದ ಬಾಲಕೃಷ್ಣ ಗೌಡ ಬಳ್ಳೇರಿ ರವರು ಮಾತನಾಡಿ ಪಂಚಾಯತ್ ರಾಜ್ ಸಮಾವೇಶವನ್ನು ಯಶಸ್ವಿಗೊಳಿಸುವ ಬಗ್ಗೆ ಪ್ರತಿಯೊಬ್ಬ ಗ್ರಾಮ ಪಂಚಾಯತ್ ಸದಸ್ಯರಿಗೂ ಜವಾಬ್ದಾರಿ ಇದೆ ತನ್ನ ಜವಾಬ್ದಾರಿಯನ್ನು ಅರಿತು ಈ ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಯೂತ್ ಕಾಂಗ್ರೆಸ್ ಅಧ್ಯಕ್ಷರಾದ ಅಭಿಲಾಶ್ ಮತ್ತು ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಮತಿ ಶಾರದಾ ಬಿಳಿನೆಲೆ ಕಾರ್ಯಕ್ರಮದ ಯಶಸ್ವಿಗಾಗಿ ಕಾರ್ಯಕರ್ತರಿಗೆ ಕರೆ ನೀಡಿದರು.

ಕಡಬ ಬ್ಲಾಕ್ ಕಾಂಗ್ರೆಸ್ ಪಂಚಾಯತ್ ರಾಜ್ ಸಂಘಟನೆಯ ಅಧ್ಯಕ್ಷರಾದ ಗಂಗಾಧರ್ ಶೆಟ್ಟಿ ಹೊಸಮನೆ ರವರು ಜಿಲ್ಲಾ ಸಮಾವೇಶದ ಬಗ್ಗೆ ಮಾಹಿತಿ ನೀಡಿದರು. ಸಮಾವೇಶದಲ್ಲಿ ಪ್ರತಿಯೊಬ್ಬ ಗ್ರಾಮ ಪಂಚಾಯತ್ ಹಾಲಿ ಸದಸ್ಯ ಮತ್ತು ಮಾಜಿ ಸದಸ್ಯರಿಗೆ ಮತ್ತು ತಾಲೂಕು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರುಗಳಿಗೆ ಸನ್ಮಾನದ ಬಗ್ಗೆ ಮಾಹಿತಿ ನೀಡಿದರು.

ಕಡಬ ಬ್ಲಾಕ್ ವತಿಯಿಂದ ಪಂಚಾಯತ್ ಕಾರ್ಯಪಡೆಯ ಸಮಿತಿಯನ್ನು ಶಿರಾಡಿ ಗ್ರಾಮ ಪಂಚಾಯಿತನ್ನು ಆಯ್ಕೆ ಮಾಡಲಾಯಿತು, 25 ಜನ ಸದಸ್ಯರನ್ನು ಒಳಗೊಂಡ ಗ್ರಾಮ ಪಂಚಾಯತ್ ಮಾಹಿತಿಯನ್ನು ಕಾರ್ಯಪಡೆ ಅತ್ಯಂತ ಯಶಸ್ವಿಯಾಗಿ ಸಂಘಟಿಸುವ ಬಗ್ಗೆ ಮತ್ತು ಕಾರ್ಯಪಡೆಯ ರೂಪುರೇಷೆಗಳ ಬಗ್ಗೆ ಸಭೆಯಲ್ಲಿ ಮಾಹಿತಿಯನ್ನು ನೀಡಲಾಯಿತು.

ಕಾರ್ಯಕ್ರಮದಲ್ಲಿ ಕಡಬ ಬ್ಲಾಕ್ ಕಾಂಗ್ರೆಸ್ಸಿನ ಪ್ರಧಾನ ಕಾರ್ಯದರ್ಶಿ ಸತೀಶ್ ಕಡಬ, ಎಸ್ ಸಿ ಎಸ್ ಟಿ ಘಟಕದ ಅಧ್ಯಕ್ಷ ,ಶಶಿಧರ್ ಬೋಟ್ಟಡ್ಕ, ಶಿರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕಾರ್ತಿಕೇಯನ್, ಉಪಾಧ್ಯಕ್ಷರಾದ ವಿನೀತ, ಪಕ್ಷದ ಮುಖಂಡರಾದ ಸತೀಶ್ ಶೆಟ್ಟಿ ಬೀರುಕು, ರಾಮಕೃಷ್ಣ ಶಿರಾಡಿ ಗ್ರಾಮ ಪಂಚಾಯಿತಿ ನ ಮಾಜಿ ಅಧ್ಯಕ್ಷರಾದ ಜಿಮ್ಸನ್ ಕೆ ಜಿ, ಕಡಬ ಬ್ಲಾಕ್ ಮುಖಂಡರಾದ ಶರೀಫ್ ಎ ಎಸ್ ಕಡಬ ಜಿಲ್ಲಾ ಸಮಿತಿ ಸದಸ್ಯರಾದ ಚರಿಯನ್. ಪಕ್ಷದ ಮುಖಂಡರಾದ ಸಾಜನ್ ಜಗದೀಶ್ ಶೆಟ್ಟಿ. ಗ್ರಾಮ ಪಂಚಾಯತ್ ಸದಸ್ಯರಾದ .ಆಲಿ ಹೊಸಮಠ, ಯಶೋಧ ಮತ್ತು ಮುಖಂಡರಾದ ಸತೀಶ್ ಕಡಬ ಮತ್ತು ಪಕ್ಷದ ಗಣ್ಯರು ಕಾರ್ಯಕರ್ತರು ಭಾಗವಹಿಸಿದ್ದರು.

ಕಡಬ ಬ್ಲಾಕ್ ಪ್ರಧಾನ ಕಾರ್ಯದರ್ಶಿಗಳಾದ ಸತೀಶ್ ಕಡಬ ಧನ್ಯವಾದ ನೀಡಿದರು. ಗಂಗಾಧರ್ ಶೆಟ್ಟಿ ಹೊಸಮನೆ ಸ್ವಾಗತಿಸಿದರು.

Leave a Reply

error: Content is protected !!