ದೀಪಾವಳಿ ಹಬ್ಬದ ಮಧ್ಯೆ ಭರ್ಜರಿ ಜೂಜಾಟ; ಪೊಲೀಸ್​ ದಾಳಿ, 20 ಜನರ ಬಂಧನ

ಶೇರ್ ಮಾಡಿ

ದೀಪಾವಳಿ ಸಮಯದಲ್ಲಿ ಉತ್ತರ ಕರ್ನಾಟಕ ಭಾಗಗಳಲ್ಲಿ ಜೂಜು ಆಡುವ ಸಂಪ್ರದಾಯವಿತ್ತು. ಬಳಿಕ ಇದನ್ನು ಸಂಪೂರ್ಣ ನಿಷೇಧಿಸಲಾಯಿತು. ಆದರೆ, ಅಲ್ಲಲ್ಲಿ ಕೆಲವೊಂದು ಪ್ರಕರಣಗಳು ಕಂಡು ಬರುತ್ತವೆ. ಅದರಂತೆ ಇಂದು ಧಾರವಾಡ ತಾಲೂಕಿನ 3 ಜೂಜು ಅಡ್ಡೆಗಳ ಮೇಲೆ ಪೊಲೀಸರು ದಾಳಿ ಮಾಡಿದ ಘಟನೆ ಧಾರವಾಡ ತಾಲೂಕಿನ ಗರಗದಲ್ಲಿ ನಡೆದಿದೆ. ಇನ್ನು ಈ ವೇಳೆ ಪೊಲೀಸರಿಂದ ಒಟ್ಟು 20 ಜೂಜುಕೋರರನ್ನು ಬಂಧಿಸಲಾಗಿದ್ದು, 24 ಸಾವಿರ ರೂಪಾಯಿಯನ್ನು ವಶಕ್ಕೆ ಪಡೆಯಲಾಗಿದೆ. ಶಿಂಗನಳ್ಳಿಯಲ್ಲಿ ನಾಲ್ವರು, ಕೊಟಬಾಗಿ ಹಾಗೂ ಲಕಮಾಪುರ ಗ್ರಾಮದಲ್ಲಿ ತಲಾ 8 ಜೂಜುಕೋರರನ್ನು ಬಂಧಿತರು, ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು‌ ಮಾಡಲಾಗಿದೆ.

Leave a Reply

error: Content is protected !!