ಚಿಕ್ಕಪ್ಪನ ಕಾರಿನ ಚಕ್ರದಡಿಗೆ ಸಿಲುಕಿ ಮಗು ಮೃತ್ಯು

ಶೇರ್ ಮಾಡಿ

ಮಗವೊಂದು ಕಾರಿನ ಚಕ್ರದಡಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಮಂಗಳೂರಿನ ಗಡಿ ಭಾಗವಾದ ಕಾಸರಗೋಡಿನಲ್ಲಿ ನಡೆದಿದೆ.

ಪುಟ್ಟ ಮಗುವೊಂದು ಕಾರಿನೊಳಗಿದ್ದ ಚಿಕ್ಕಪ್ಪನ್ನು ಹಿಂಬಾಲಿಸಲು ಹೋಗಿ ಕಾರಿನ ಚಕ್ರದಡಿ ಸಿಲುಕಿಕೊಂಡು ಸಾವನ್ನಪ್ಪಿದೆ. ಕಾಸರಗೋಡಿನ ಉಪ್ಪಳದ ಸೋಂಕಾಲ್ ಮಗು ಎಂದು ಹೇಳಲಾಗಿದೆ.

ಇನ್ನು ಸಾವನ್ನಪ್ಪಿರುವ ಮಗುವನ್ನು ಸೋಂಕಾಲ್ ನಿವಾಸಿ ನಿಝಾರ್ ತಸ್ರೀಫಾ ಎಂಬುವವರ ಒಂದೂವರೆ ವರ್ಷದ ಪುತ್ರ ಮಸ್ತುಲ್ ಜಿಶಾನ್ ಎಂದು ಹೇಳಲಾಗಿದೆ. ಮನೆಯಲ್ಲಿ ಪಾರ್ಕಿಂಗ್​​ ಮಾಡುವ ಜಾಗದಲ್ಲಿ ಮಸ್ತುಲ್ ಜಿಶಾನ್ ಆಟವಾಡುತ್ತಿದ್ದ. ಈ ವೇಳೆ ಜಿಶಾನ್ ಚಿಕ್ಕಪ್ಪ ಹೊರಗಿನಿಂದ ಬಂದು ಪಾರ್ಕಿಂಗ್​​ ಮಾಡುವ ಜಾಗಕ್ಕೆ ಕಾರನ್ನು ತಂದಿದ್ದಾರೆ.

ಚಿಕ್ಕಪ್ಪನ ಕಾರು ಬರುವುದನ್ನು ನೋಡಿ ಕಾರಿನ ಬಳಿ ಮಗು ಜಿಶಾನ್ ಓಡಿ ಹೋಗಿದ್ದಾನೆ. ಇದನ್ನು ಗಮನಿಸದ ಜಿಶಾನ್ ಚಿಕ್ಕಪ್ಪ ಮುಂದೆ ಬಂದಿದ್ದಾರೆ. ಮಗು ಜಿಶಾನ್ ಕಾರಿನ ಮುಂಭಾಗದ ಚಕ್ರಕ್ಕೆ ಸಿಲುಕಿಕೊಂಡಿದ್ದು, ಕಾರು ಮಗುವಿನ ಮೇಲೆ ಹರಿದ ಕಾರಣ ಸ್ಥಳದಲ್ಲಿ ಸಾವನ್ನಪ್ಪಿದ್ದಾನೆ.

Leave a Reply

error: Content is protected !!