ಜೈನ ಧರ್ಮ ವಿರುದ್ಧ, ಗಿರೀಶ್ ಮಟ್ಟಣ್ಣವನವರ್ ಹಾಗೂ ರಾಧಿಕಾ ಕಾಸರಗೋಡು ಅವಹೇಳನಕಾರಿ ಹೇಳಿಕೆ ಆರೋಪ: ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲು

ಶೇರ್ ಮಾಡಿ

ಜೈನ ಧರ್ಮ ಹಾಗೂ ಡಾ.ಡಿ ವೀರೇಂದ್ರ ಹೆಗ್ಗಡೆ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೆಗಳನ್ನು ನೀಡಿ ದರು ಬಗ್ಗೆ ಗಿರೀಶ್ ಮಟ್ಟಣ್ಣನವರ್ ಹಾಗೂ ರಾಧಿಕಾ ಕಾಸರಗೋಡು ಯಾನೆ ಅನಿತಾ ಕಾಸರಗೋಡು ಎಂಬವರ ವಿರುದ್ಧ ಭಾರತೀಯ ಜೈನ್ ಮಿಲನ್ ಅಧ್ಯಕ್ಷ ಡಾ.ನವೀನ್ ಕುಮಾರ್ ಮತ್ತು ಸದಸ್ಯರು ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಮಂಗಳೂರಿನ ಯೂಟ್ಯೂಬ್ ಚಾನಲ್ ನಲ್ಲಿ ಗಿರೀಶ್ ಮಟ್ಟಣ್ಣನವರ ಸಂದರ್ಶನ ಮಾಡಿದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಜೈನ ಧರ್ಮದ ಜನರನ್ನು ನಿಂದಿಸಿ ಒಂದು ಧರ್ಮವನ್ನು ಇನ್ನೊಂದು ಧರ್ಮದ ವಿರುದ್ಧ ಎತ್ತಿಕಟ್ಟಿ ಸಮಾಜದ ಸ್ವಾಸ್ಥವನ್ನು ಕೆಡಿಸುವ ವಿಡಿಯೋವನ್ನು ಹರಿಬಿಟ್ಟು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುವ ಗಿರೀಶ್ ಮಟ್ಟಣ್ಣವನವರ್ ವಿರುದ್ಧ ಹಾಗೂ ರಾಧಿಕಾ ಕಾಸರಗೋಡು ಯಾನೆ ಅನಿತಾ ಕಾಸರಗೋಡು ಕೂಡ ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಅಲ್ಲಿ ಅಡಳಿತ ನಡೆಸುತ್ತಿರುವ ಹೆಗ್ಗಡೆ ಬಗ್ಗೆ, ಅವರ ಕುಟುಂಬದ ಬಗ್ಗೆ ಹಾಗೂ ಜೈನ ಧರ್ಮದ ಆಚರಣೆಯ ಬಗ್ಗೆ ಅವಹೇಳಕಾರಿಯಾಗಿ ಮಾತನಾಡಿದ್ದು, ಅವರ ವಿರುದ್ಧ ಸೂಕ್ತ ಕ್ರಮಕೈ ಗೊಳ್ಳಬೇಕಾಗಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ಭಾರತೀಯ ಜೈನ್ ಮಿಲನ್ ಅಧ್ಯಕ್ಷ ಡಾ.ನವೀನ್ ಕುಮಾರ್ ಮತ್ತು ಸದಸ್ಯರು ದೂರು ನೀಡಿದ್ದರು ಅದರಂತೆ ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Leave a Reply

error: Content is protected !!