ತನ್ನ ಸಹೋದರನನ್ನೇ ಪ್ರೀತಿಸಿ ಮದುವೆಯಾದ ಯುವತಿ

ಶೇರ್ ಮಾಡಿ

ಮದುವೆಗೆ ಸಂಬಂಧಿಸಿದಂತೆ ಪ್ರಪಂಚದಾದ್ಯಂತ ವಿಭಿನ್ನ ಸಂಪ್ರದಾಯಗಳು ಇವೆ. ಅವುಗಳಲ್ಲಿ ಸಾಮಾನ್ಯವಾದ ಒಂದು ವಿಷಯವೆಂದರೆ ಬಾಳಸಂಗಾತಿಯನ್ನು ಆಯ್ಕೆ ಮಾಡುವಂತಹ ಸಂದರ್ಭದಲ್ಲಿ ಅವರಿಬ್ಬರ ನಡುವೆ ಯಾವುದೇ ರಕ್ತ ಸಂಬಂಧ ಇರಬಾರದು. ಆದರೆ ಅಮೇರಿಕದ ಯುವತಿಯೊಬ್ಬಳಿಗೆ 6 ತಿಂಗಳ ಡೇಟಿಂಗ್​​ ನಂತರ ತನ್ನ ಪ್ರಿಯಕರ ಸೋದರಸಂಬಂಧಿ ಎಂದು ತಿಳಿದುಬಂದಿದೆ. ಅದರೂ ಕೂಡ ಸಂಬಂಧದಿಂದ ಹೊರಬರದೇ ಮದುವೆಯಾಗಲು ನಿರ್ಧರಿಸಿದ್ದಾರೆ. ಸ್ವತಃ ಈ ವಿಷಯವನ್ನು ಮಹಿಳೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಈ ವಿಡಿಯೋ ಇದೀಗಾ ಭಾರೀ ಟೀಕೆಗೆ ಕಾರಣವಾಗಿದೆ.

ಈ ವಿಚಿತ್ರ ಪ್ರಕರಣ ಅಮೆರಿಕದ ಉತಾಹ್‌ನಲ್ಲಿ ನಡೆದಿದ್ದು, ಕೆನಾ(20) ಎಂಬ ಯುವತಿ ವೀಡಿಯೊವನ್ನು ಹಂಚಿಕೊಂಡಿದ್ದು, ತನ್ನ ಸಂಗಾತಿಯಾಗಿ ತಾನು ಆಯ್ಕೆ ಮಾಡಿರುವ ವ್ಯಕ್ತಿ ಬೇರೆ ಯಾರೂ ಅಲ್ಲ ತನ್ನ ಸೋದರಸಂಬಂಧಿ ಎಂದು ಬಹಿರಂಗಪಡಿಸಿದ್ದಾಳೆ. ಆರು ತಿಂಗಳ ಡೇಟಿಂಗ್ ನಂತರ ಡಿಎನ್‌ಎ ಪರೀಕ್ಷೆಯ ಮೂಲಕ ಇಬ್ಬರೂ ಸೋದರಸಂಬಂಧಿಗಳು ಎಂದು ತಿಳಿಯಿತು ಎಂದು ಹೇಳಿಕೊಂಡಿದ್ದಾಳೆ. ಜೊತೆಗೆ ಆತನನ್ನು ತಬ್ಬಿಕೊಂಡು ಚುಂಬಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ವಿಡಿಯೋ ನೆಟ್ಟಿಗರನ್ನು ದಿಗ್ಭ್ರಮೆಗೊಳಿಸಿದೆ.

ವಿಡಿಯೋ ಎಲ್ಲೆಡೆ ವೈರಲ್​​ ಆಗುತ್ತಿದ್ದಂತೆ ನೆಟ್ಟಿಗರಿಂದ ಸಾಕಷ್ಟು ಟೀಕೆಗೆ ಕಾರಣವಾಗಿದೆ. ಈ ಸಂಬಂಧ ಕಾನೂನುಬಾಹಿರ ಮಾತ್ರವಲ್ಲ, ಅಂತಹ ಸಂಬಂಧದಿಂದ ಹುಟ್ಟುವ ಮಗುವಿನ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ನೆಟ್ಟಿಗರು ಬರೆದುಕೊಂಡಿದ್ದಾರೆ. ಸೋದರಸಂಬಂಧಿಗಳ ನಡುವಿನ ವಿವಾಹಗಳನ್ನು ನಿಷೇಧಿಸಲಾಗಿರುವ ಅಮೆರಿಕದ 24 ರಾಜ್ಯಗಳಲ್ಲಿ ಉತಾಹ್ ಕೂಡ ಒಂದಾಗಿದೆ . ಆದರೆ ನ್ಯೂಯಾರ್ಕ್ ಮತ್ತು ಫ್ಲೋರಿಡಾ ಸೇರಿದಂತೆ 19 ಇತರ ಸ್ಥಳಗಳಲ್ಲಿ ಇಂತಹ ಮದುವೆಗಳನ್ನು ಅನುಮತಿಸಲಾಗಿದೆ. ಅದಕ್ಕಾಗಿಯೇ ಮೂಲತಃ ಉತಾಹ್ ಮೂಲದವರಾಗಿದ್ದರೂ, ಕೆನ್ನಾ ಮತ್ತು ಆಕೆಯ ಪತಿ ಈಗ ಸನ್ಶೈನ್ ರಾಜ್ಯದಲ್ಲಿ ವಾಸಿಸುತ್ತಿದ್ದಾರೆ.

Leave a Reply

error: Content is protected !!