ತಲವಾರಿನಿಂದ ದಾಳಿ ಮಾಡಿ ಅಡಿಕೆ ಕಳ್ಳತನಕ್ಕೆ ಯತ್ನ ಆರೋಪ; ಪ್ರಕರಣ ದಾಖಲು

ಶೇರ್ ಮಾಡಿ

ಸವಣೂರು ಗ್ರಾಮದ ಪಣೆಮಜಲು ಎಡಪತ್ಯ ಫಾರ್ಮ್ಸ್ ಎಂಬಲ್ಲಿ ತಲವಾರಿನಿಂದ ದಾಳಿ ಮಾಡಿ ಅಡಿಕೆ ಕಳ್ಳತನಕ್ಕೆ ಯತ್ನಿಸಿದ ಘಟನೆ ನಡೆದಿದ್ದು, ಈ ಕುರಿತು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎಡಪತ್ಯ ಫಾರ್ಮ್‌‌ನಲ್ಲಿ ಎ.ಆರ್.ಚಂದ್ರ ಎಂಬವರು ಅಡಿಕೆ, ತೆಂಗು ಮತ್ತಿತರ ಕೃಷಿಯನ್ನು ಹೊಂದಿದ್ದು,ಅವರು ತೋಟದಲ್ಲಿ ಬೆಳೆದ ಅಡಿಕೆಯನ್ನು ತಮ್ಮ ಮನೆಯ ಅಂಗಳದಲ್ಲಿರುವ ಸೋಲಾರ್ ಡ್ರೈಯರ್ ನಲ್ಲಿ ಒಣಗಿಸುತ್ತಿದ್ದು, ಒಣಗಿದ ಅಡಿಕೆಯನ್ನು ಮನೆಯ ಹಿಂಬದಿಯ ಗೋಡೌನ್‌ನಲ್ಲಿ ಸಂಗ್ರಹಿಸಿಡುತ್ತಿದ್ದರು. ನ.25ರಂದು ಮುಂಜಾನೆ 3 ಗಂಟೆಯ ವೇಳೆಗೆ ಎ.ಆರ್.ಚಂದ್ರ ಅವರ ಮಗ ನಿಷ್ಕಲ್ ರಾಮ ಅವರು ಮೈಸೂರಿನಿಂದ ಬೈಕಿನಲ್ಲಿ ಮನೆಗೆ ಬರುತ್ತಿರುವಾಗ ತಮ್ಮ ಮನೆಯ ಅಂಗಳದಲ್ಲಿ ಒಂದು ಕಾರು ಮತ್ತು ಒಂದು ಸ್ಕೂಟರ್ ನಿಂತಿದ್ದು, ಆ ಪೈಕಿ ಸ್ಕೂಟರಿನಲ್ಲಿ 2 ಗೋಣಿಚೀಲದಲ್ಲಿ ಸುಲಿದ ಅಡಿಕೆಯನ್ನು ತುಂಬಿಸಿ ಇಟ್ಟಿರುವುದು ಕಂಡು ಬಂದಿದ್ದು, ಮನೆಯ ಅಂಗಳದಲ್ಲಿರುವ ಸೋಲಾರ್ ಡ್ರೈಯರಿನ ಒಳಗಿನಿಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಗೋಣಿ ಚೀಲದಲ್ಲಿ ಒಣಗಿದ ಅಡಿಕೆಯನ್ನು ಗೋಣಿ ಚೀಲದಲ್ಲಿ ತುಂಬಿಸಿ ಅಂಗಳದಲ್ಲಿದ್ದ ಕಾರಿಗೆ ತುಂಬಿಸುತ್ತಿರುವುದು ಕಂಡು ಬಂದಿದ್ದು ಆ ವೇಳೆ ನಿಷ್ಕಲ್ ರಾಮ ಅವರು ಅಪರಿಚಿತ ವ್ಯಕ್ತಿಗಳಲ್ಲಿ “ಅಡಿಕೆಯನ್ನು ಯಾಕೆ ಕಾರಿನಲ್ಲಿ ತುಂಬಿಸುತ್ತಿದ್ದೀರಿ?” ಎಂದು ಕೇಳಿದಾಗ ಓರ್ವ ಅಪರಿಚಿತ ವ್ಯಕ್ತಿ “ನಾವು ಅಡಿಕೆಯನ್ನು ತೆಗೆದುಕೊಂಡು ಹೋಗುತ್ತೇವೆ, ನೀನೇನಾದರೂ ಅಡ್ಡ ಬಂದರೆ ನಿನ್ನನ್ನು ಇಲ್ಲಿಯೇ ಕೊಂದು ಬಿಡುತ್ತೇವೆ” ಎಂದು ಕೈಯಲ್ಲಿದ್ದ ತಲವಾರನ್ನು ತೋರಿಸಿದ್ದು, ಈ ವೇಳೆ ನಿಷ್ಕಲ್ ರಾಮ್ ನು ಭಯದಿಂದ ಜೋರಾಗಿ ಬೊಬ್ಬೆ ಹಾಕಿದಾಗ, ಎ.ಆರ್.ಚಂದ್ರ ಮತ್ತು ಅವರ ಪತ್ನಿ ಬಂದಾಗ ಅವರ ಪೈಕಿ ಒಬ್ಬ ವ್ಯಕ್ತಿಯು “ನೀವು ಹತ್ತಿರ ಬಂದರೆ ನಿಮ್ಮ ಮಗನನ್ನು ಕೊಂದು ಬಿಡುತ್ತೇವೆ ಎಂದು ಹೇಳಿ ನಿಷ್ಕಲ್ ರಾಮ ಅವರಿಗೆ ತಲವಾರಿನಿಂದ ಹಲ್ಲೆ ನಡೆಸಿದ್ದು ಇದರಿಂದಾಗಿ ಆತನ ಎಡ ಕೈಗೆ ಗಾಯವಾಗಿದೆ.

ಈ ವೇಳೆ ಅಪರಿಚಿತ ವ್ಯಕ್ತಿಗಳ ಪೈಕಿ ಒಬ್ಬ ಎರಡು ಗೋಣಿ ಚೀಲದಲ್ಲಿ ಸುಲಿದ ಅಡಿಕೆಯನ್ನು ತುಂಬಿಸಿಟ್ಟಿದ್ದ ಸ್ಕೂಟರನ್ನು ಚಲಾಯಿಸಿಕೊಂಡು ಸ್ಥಳದಿಂದ ತೆರಳಿದ್ದು, ಬಳಿಕ ಸ್ಥಳದಲ್ಲಿದ್ದ ಇನ್ನೊಬ್ಬ ಕೂಡಾ ಅಡಿಕೆಯನ್ನು ತುಂಬಿಸಿಟ್ಟಿದ್ದ ಕಾರಿನೊಂದಿಗೆ ಸ್ಥಳದಿಂದ ಪರಾರಿಯಾಗಲು ಪ್ರಯತ್ನಿಸಿದಾಗ ಎ.ಆರ್.ಚಂದ್ರ ಹಾಗೂ ಮತ್ತು ಇತರರು ಆತನನ್ನು ತಡೆದು ನಿಲ್ಲಿಸಿ ವಿಚಾರಿಸಿದಾಗ ಆತನು ತನ್ನ ಹೆಸರು ಬಶೀರ್ ಎಂಬುದಾಗಿ ಹೇಳಿದ್ದಾನೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

Leave a Reply

error: Content is protected !!