ಕೋಪದಲ್ಲಿ ಗಂಡನ ಕಿವಿ ಕಚ್ಚಿ ತುಂಡರಿಸಿದ ಪತ್ನಿ, ದೂರು ದಾಖಲು

ಶೇರ್ ಮಾಡಿ

ಕೋಪದಲ್ಲಿ ಮಹಿಳೆಯೊಬ್ಬಳು ಗಂಡನ ಕಿವಿಯನ್ನು ಕಚ್ಚಿರುವ ಘಟನೆ ದೆಹಲಿಯ ಸುಲ್ತಾನ್​ಪುರಿ ಪ್ರದೇಶದಲ್ಲಿ ನಡೆದಿದೆ.ಮಹಿಳೆಯು ಬಲವಾಗಿ ಪತಿಯ ಕಿವಿಯನ್ನು ಕಚ್ಚಿರುವ ಕಾರಣ ಬಲ ಕಿವಿಯ ಮೇಲ್ಭಾಗ ತುಂಡಾಗಿದೆ. ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ, ಚಿಕಿತ್ಸೆ ಬಳಿಕ ಪತ್ನಿ ವಿರುದ್ಧ ದೂರು ದಾಖಲಿಸಿದ್ದಾರೆ. ದೂರಿನ ನಂತರ ಮಹಿಳೆ ವಿರುದ್ಧ ಐಪಿಸಿ ಸೆಕ್ಷನ್ 324 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಮತ್ತು ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನ.20ರಂದು ಬೆಳಗ್ಗೆ 9.20ರ ಸುಮಾರಿಗೆ ಮನೆಯ ಹೊರಗೆ ಕಸ ಎಸೆಯಲು ಹೋಗಿದ್ದೆ, ಮನೆ ಸ್ವಚ್ಛಗೊಳಿಸುವಂತೆ ಪತ್ನಿಗೆ ಹೇಳಿದ್ದೆ, ಮನೆಗೆ ಬಂದ ಕೂಡಲೇ ಪತ್ನಿ ಜಗಳವಾಡಿದ್ದಾಳೆ ಎಂದು ದೂರುದಾರರು ಪೊಲೀಸರಿಗೆ ತಿಳಿಸಿದ್ದಾರೆ. ಮಕ್ಕಳೊಂದಿಗೆ ಪ್ರತ್ಯೇಕವಾಗಿ ವಾಸಿಸಲು ಮನೆಯನ್ನು ಮಾರಿ ತನಗೆ ಪಾಲು ನೀಡುವಂತೆ ಪತ್ನಿ ಕೇಳಿಕೊಂಡಿದ್ದಾಳೆ ಎಂದು ಆಕೆಯ ಪತಿ ಪೊಲೀಸರಿಗೆ ತಿಳಿಸಿದ್ದಾರೆ.

ನಾನು ಅವಳಿಗೆ ಅರ್ಥ ಮಾಡಿಸಲು ಪ್ರಯತ್ನಿಸಿದೆ, ವಾಗ್ವಾದ ನಡೆಯಿತು, ಆಕೆ ಹೊಡೆಯಲು ಬಂದಳು ನಾನು ದೂರ ತಳ್ಳಿದೆ, ಆಗ ಹಿಂದಿನಿಂದ ಬಂದು ಕಿವಿಯನ್ನು ಕಚ್ಚಿದ್ದಾಳೆ. ಆಗ ನನ್ನ ಕಿವಿಯ ಮೇಲ್ಭಾಗ ತುಂಡಾಗಿದೆ ಎಂದು ಹೇಳಿದ್ದಾರೆ.

ನವೆಂಬರ್ 22ರಂದು ಪೊಲೀಸರಿಗೆ ಬಂದು ಲಿಖಿತ ದೂರು ನೀಡಿದ್ದು, ನಾವು ದಾಖಲಿಸಿಕೊಂಡಿದ್ದೇವೆ. ಈ ವಿಷಯದ ಬಗ್ಗೆ ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Leave a Reply

error: Content is protected !!