ಒಂದೇ ದಿನ ಯುವಕ- ಯುವತಿ ನಾಪತ್ತೆ

ಶೇರ್ ಮಾಡಿ

ಸಜೀಪಮುನ್ನೂರು ಗ್ರಾಮದಲ್ಲಿ ಅಕ್ಕ ಪಕ್ಕದ ಮನೆಯ ಯುವಕ ಹಾಗೂ ಯುವತಿ ಒಂದೇ ದಿನ ನಾಪತ್ತೆ ಯಾಗಿದ್ದು, ಎರಡೂ ಮನೆಯವರು ನೀಡಿದ ದೂರಿನಂತೆ ಬಂಟ್ವಾಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಜೀಪಮುನ್ನೂರು ಗ್ರಾಮದ ಉದ್ದೊಟ್ಟು ನಿವಾಸಿ ಅಬ್ದುಲ್‌ ಹಮೀದ್‌ ಅವರ ಪುತ್ರಿ ಆಯಿಷತ್‌ ರಸ್ಮಾ(18) ಹಾಗೂ ಹೈದರ್‌ ಅವರ ಪುತ್ರ ಮಹಮ್ಮದ್‌ ಸಿನಾನ್‌(23) ನಾಪತ್ತೆಯಾದವರು.

ರಸ್ಮಾ ನಡುಪದವು ಖಾಸಗಿ ಕಾಲೇಜಿನಲ್ಲಿ ಫಾರ್ಮಸಿ ವಿದ್ಯಾರ್ಥಿನಿಯಾಗಿದ್ದರು ಅವರು ನ.23ರ ರಾತ್ರಿ ಊಟ ಮುಗಿಸಿ ಮನೆಯಲ್ಲಿ ಮಲಗಿದ್ದು, ಮರುದಿನ ಬೆಳಗ್ಗೆ ಎದ್ದು ನೋಡಿದಾಗ ನಾಪತ್ತೆಯಾಗಿದ್ದರು.

ಸಿನಾನ್‌ ಕೆಲವು ವರ್ಷಗಳ ಕಾಲ ವಿದೇಶದಲ್ಲಿ ಉದ್ಯೋಗದಲ್ಲಿದ್ದು, ಬಳಿಕ ಊರಿಗೆ ಬಂದು ಕೂಲಿ ಕೆಲಸ ಮಾಡಿಕೊಂಡಿದ್ದರು. ಅವರು ನ.23ರ ರಾತ್ರಿ ಊಟ ಮಾಡಿ ಮಲಗಿದವರು ಮರುದಿನ ನಾಪತ್ತೆಯಾಗಿದ್ದರು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

Leave a Reply

error: Content is protected !!