ಹೋಮಿಯೋಪತಿ ವೈದ್ಯಕೀಯ ಚಿಕಿತ್ಸೆ ಜನ ಸಾಮಾನ್ಯರಿಗೆ ತಲುಪಲು ಸರ್ಕಾರದ ಬೆಂಬಲ ಅತ್ಯಗತ್ಯ – ಡಾ.ಪ್ರವೀಣ್ ರಾಜ್ ಆಳ್ವ

ಶೇರ್ ಮಾಡಿ

ಹೋಮಿಯೊಪತಿ ಚಿಕಿತ್ಸೆ ಗುಣವಾಗಲಾರದೆಂದು ಕೊಂಡಿರುವ ಹಲವಾರು ಕಾಯಿಲೆ ಗಳನ್ನು ಗುಣಪಡಿಸುತ್ತಿದೆ. ಅದರಲ್ಲಿ ಒಂದು ಬಂಜೆತನ ಕೂಡ. ಹೋಮಿಯೋಪತಿ ಚಿಕಿತ್ಸಾ ಸಾಫಲ್ಯದ‌ ದಾಖಲೀಕರಣ ಲಭ್ಯವಿದೆ. ಕೇರಳದಲ್ಲಿ ಇದಕ್ಕಾಗಿ ‘ಜನನಿ’ ಎಂಬ‌ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ, ಆದೆ ರೀತಿ ಕರ್ನಾಟಕದಲ್ಲಿ ಸರಕಾರದ ವತಿಯಿಂದ ಹೋಮಿಯೋಪತಿ ವೈದ್ಯಕೀಯ ಚಿಕಿತ್ಸೆಗೆ ಈ ನಿಟ್ಟಿನಲ್ಲಿ ಹೆಚ್ಚಿನ ಬೆಂಬಲ ಸಿಗಬೇಕು.

ಮಾಧ್ಯಮಗಳು ಈ ನಿಟ್ಟಿನಲ್ಲಿ ಸರಕಾರದ ಗಮನಕ್ಕೆ ತರಬೇಕೆಂದು ಹೋಮಿಯೋಪತಿ ವೈದ್ಯರ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಭಾರತೀಯ ವೈದ್ಯರ ಸಂಘ ಕರ್ನಾಟಕದ ಅಧ್ಯಕ್ಷರಾದ ಡಾ.ಪ್ರವೀಣ್ ರಾಜ್ ಆಳ್ವ ಹೇಳಿದರು.

ಭಾರತೀಯ ಹೋಮೀಯೊಪತಿ ವೈದ್ಯರ ಸಂಘ(IHMA) ಕರ್ನಾಟಕ ಮತ್ತು ಮಂಗಳೂರು ಘಟಕದ ಆಶ್ರಯದಲ್ಲಿ ನ.26ರಂದು ನಗರದ ವೆನ್ಲಾಕ್ ಆಸ್ಪತ್ರೆ ಆವರಣದಲ್ಲಿರುವ ಆಯುಷ್ ಇಂಟಗ್ರೇಟೆಡ್ ಆಸ್ಪತ್ರೆ ಬಳಿಯ ವಿವೇಕಾನಂದ ಪ್ರಭು (RAPCC) ಸಭಾಂಗಣದಲ್ಲಿ ಒಂದು ದಿನದ ಹೋಮೀಯೊಪತಿ ವೈದ್ಯರ ವಿಚಾರ ಸಂಕಿರಣವನ್ನು ಆಯೋಜಿಸಲಾಗಿತ್ತು.

ಪ್ರತಿ ದಂಪತಿಗಳು ತಮ್ಮ ಸಂತಾನವನ್ನು ಹೊಂದಲು ಬಯಸುತ್ತಾರೆ, ಹೆಚ್ಚುತ್ತಿರುವ ಕೆಲಸದ ಒತ್ತಡ, ಅನಿಯಮಿತ ಜೀವನ ಶೈಲಿಯಿಂದಾಗಿ ಹಲವು ದಂಪತಿಗಳಲ್ಲಿ ಬಂಜೆತನ ಉಂಟಾಗಿ ಮಕ್ಕಳನ್ನು ಪಡೆಯುವುದು ಅಸಾಧ್ಯವಾಗಿದೆ. ಈ ನಿಟ್ಟಿನಲ್ಲಿ ಹೋಮೀಯೊಪತಿ ಸಾಕ್ಷ್ಯ ಆಧಾರಿತ ಬಂಜೆತನ ನಿವಾರಣೆ ಎಂಬ ವೈಜ್ಞಾನಿಕ ವಿಚಾರ ಸಂಕಿರಣವನ್ನು ಜಿಲ್ಲೆಯ ಹಾಗೂ ರಾಜ್ಯದ ಹೋಮೀಯೊಪತಿ ವೈದ್ಯರಿಗಾಗಿ ಹಮ್ಮಿಕೊಳ್ಳಲಾಗಿತ್ತು. ಹಲವಾರು ದಂಪತಿಗಳು ಹೋಮಿಯೋಪತಿ ವೈದ್ಯಕೀಯ ಚಿಕಿತ್ಸೆ ಪಡೆದು ಸಂತಾನ ಭಾಗ್ಯ ಪಡೆದಿದ್ದಾರೆ. ಮಾಧ್ಯಮಗಳು ಜನಸಾಮಾನ್ಯರಿಗೆ ಈ ವರದಿಗಳು ತಲುಪುವಂತೆ ಮಾಡಿದಲ್ಲಿ ಸಾವಿರಾರು ದಂಪತಿಗಳಿಗೆ ಆಶಾಕಿರಣವಾದೀತು ಎಂದು ಈ ಸಂದರ್ಭದಲ್ಲಿ ಆಶಿಸಿದರು.

ಕೇರಳದ ಕೊಚ್ಚಿನ್ ನ ಖ್ಯಾತ ಹೋಮೀಯೊಪತಿ ತಜ್ಞ ವೈದ್ಯೆ ಡಾ.ಜಸಲಿನ್ ಸಜೀಲ್ ಇವರು ಸಂಪನ್ಮೂಲ ವ್ಯಕ್ತಿಯಾಗಿ ಬಂದು ವೈದ್ಯರನ್ನು ಉದ್ದೇಶಿಸಿ ಉಪನ್ಯಾಸ ನೀಡಿದರು.
ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಹೋಮಿಯೋಪತಿ ಮಂಡಳಿಯ ಚುನಾಯಿತ ಸದಸ್ಯರಾದ ಡಾ.ಪ್ರವೀಣ್ ಕುಮಾರ್ ರೈ ಸ್ವಾಗತಿಸಿದರು. ಮಂಗಳೂರು ಘಟಕದ ಅಧ್ಯಕ್ಷ ಡಾ.ಅವಿನಾಶ್ ವಿ.ಎಸ್ ಇವರು ವಂದಿಸಿದರು. ಸಂಘದ ಕೋಶಾಧಿಕಾರಿ ಡಾ.ಅನೀಶ್ ಕುಮಾರ್ ಸಹಕರಿಸಿದರು.

ಜಿಲ್ಲಾ ಹಾಗೂ ಸುತ್ತ ಮುತ್ತಲಿನ ಜಿಲ್ಲೆಯ 50 ಕ್ಕೂ ಹೆಚ್ಚಿನ ಹೋಮಿಯೋಪತಿ ವೈದ್ಯರು ಈ ಕಾರ್ಯಾಗಾರದಲ್ಲಿ ಭಾಗವಹಿಸಿದರು.

Leave a Reply

error: Content is protected !!