ಮಲೆಬೆಟ್ಟು ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಸದಸ್ಯರುಗಳ ಮುತ್ತಿಗೆ; ನಿರ್ದೇಶಕರುಗಳು ರಾಜೀನಾಮೆ ನೀಡುವ ನಿರ್ಣಯ

ಶೇರ್ ಮಾಡಿ

ಬೆಳ್ತಂಗಡಿ: ಮಲೆಬೆಟ್ಟು ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ನಿರ್ದೇಶಕರು ಮತ್ತು ಸದಸ್ಯರ ನಡುವೆ ಇದ್ದ ವಿವಾದ ಬುಧವಾರ ತಾರಕ್ಕೇರಿದ್ದು ನಿರ್ದೇಶಕರ ಸಭೆ ನಡೆಯುತ್ತಿದ್ದಲ್ಲಿಗೆ ಸದಸ್ಯರುಗಳು ಮುತ್ತಿಗೆ ಹಾಕಿದ ಘಟನೆ‌ ನಡೆಯಿತು.

ಕೆಲ ದಿನಗಳ ಹಿಂದೆ ನಿರ್ದೇಶಕರುಗಳ ನಡುವಿನ ವಿವಾದ ಹಾಗೂ ನಿರ್ದೇಶಕರುಗಳು ಮತ್ತು ಸದಸ್ಯರ ನಡುವೆ ಜಟಾಪಟಿ ನಡೆದು ಬೆಳ್ತಂಗಡಿ ಠಾಣೆಗೂ ದೂರು ನೀಡಲಾಗಿತ್ತು.
ಇಂದು‌ ವಿಸ್ತರಣಾಧಿಕಾರಿ ರಾಜೇಶ್ ಕಾಮತ್ ರವರ ಉಪಸ್ಥಿತಿಯಲ್ಲಿ ಆಡಳಿತ ಮಂಡಳಿಯ ನಿರ್ದೇಶಕರ ಸಭೆ ಆರಂಭವಾಗುತ್ತಿದ್ದಂತೆಯೇ ಸದಸ್ಯರುಗಳು ಹಾಗೂ ಗ್ರಾಮಸ್ಥರು ಸಂಘದ ಕಚೇರಿಯ ಮುಂದೆ ಜಮಾಯಿಸಿದರು. ಆಡಳಿತ ಮಂಡಳಿ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು.

ಮಾಹಿತಿ ತಿಳಿದು ಕೂಡಲೇ ಬೆಳ್ತಂಗಡಿ ಪೊಲೀಸರು‌ ಸ್ಥಳಕ್ಕೆ ಧಾವಿಸಿದರು. ಗಲಾಟೆಯ ನಡುವೆಯೇ ನಡೆದ ಸಭೆಯಲ್ಲಿ ಎಲ್ಲ ನಿರ್ದೇಶಕರುಗಳು ರಾಜೀನಾಮೆ ನೀಡುವ ನಿರ್ಣಯಕ್ಕೆ ನಿರ್ದೇಶಕರುಗಳು ಬಂದರು ಎನ್ನಲಾಗಿದೆ. ಈ ವಿಚಾರವನ್ನು ವಿಸ್ತರಣಾಧಿಕಾರಿ ಸೇರಿದ್ದ ಜನರಿಗೆ ತಿಳಿಸಿದರು, ಬಳಿಕ ಪೊಲೀಸರ ಸೂಚನೆಯಂತೆ ಜನರು ಅಲ್ಲಿಂದ ತೆರಳಿದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಧ್ಯಕ್ಷ ಪ್ರಮೋದ್ ಇಂದಿನ ಸಭೆಯಲ್ಲಿ ಸಂಘದಲ್ಲಿ ನಡೆಯುವ ನಿರಂತರ ಕಿರಿಕಿರಿಯಿಂದಾಗಿ ಬೇಸತ್ತು ರಾಜೀನಾಮೆ ನೀಡುವ ನಿರ್ಧಾರಕ್ಕೆ ಬಂದಿದ್ದೇವೆ ರಾಜೀನಾಮೆ ನೀಡುವುದಾಗಲಿ ಅಂಗೀಕಾರವಾಗುವುದಾಗಲಿ ನಡೆದಿಲ್ಲ. ಈ ಬಗ್ಗೆ ಮುಂದಿನ ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Leave a Reply

error: Content is protected !!