ಮದುವೆ ಮುನ್ನ ವರನಿಗೆ ಡೆಂಗ್ಯೂ: ಆಸ್ಪತ್ರೆಯನ್ನೇ ಮಂಟಪವಾಗಿಸಿ ವಿವಾಹ ಮಾಡಿಸಿದ ಕುಟುಂಬಸ್ಥರು

ಶೇರ್ ಮಾಡಿ

ಪ್ರತಿಯೊಬ್ಬರಿಗೂ ತನ್ನ ಮದುವೆಯ ಬಗ್ಗೆ ಕನಸಿರುತ್ತದೆ. ಅದ್ಧೂರಿಯಾಗಿ ಮದುವೆ ಅಲ್ಲದಿದ್ರು ಸರಳವಾಗಿ ಸಂಭ್ರಮದಲ್ಲಿ ಮದುವೆ ಆಗಬೇಕೆನ್ನುವ ಕನಸಿರುತ್ತದೆ. ಸಾಮಾನ್ಯವಾಗಿ ಮದುವೆ ಸಮಾರಂಭ ಹಾಲ್‌ ಅಥವಾ ಮನೆಗಳಲ್ಲಿ ಶಾಮಿಯಾನ, ಅಲಂಕಾರದಿಂದ ಶೃಂಗಾರಗೊಂಡ ಮಂಟಪದಲ್ಲಿ ಜರಗುತ್ತದೆ. ಆದರೆ ಇಲ್ಲೊಂದು ಮದುವೆ ಆಸ್ಪತ್ರೆಯಲ್ಲೇ ನಡೆದಿದೆ.!

ಉತ್ತರ ಪ್ರದೇಶದ ಗಾಜಿಯಾಬಾದ್ ಮೂಲದ ಜೋಡಿಯೊಂದರ ವಿವಾಹ ಅಂದುಕೊಂಡ ದಿನಕ್ಕೆ ನಡೆಯಬೇಕಿತ್ತು. ಆದರೆ ಇನ್ನೇನು ಮದುವೆ ವಿವಾಹ ಮುಹೂರ್ತದಲ್ಲಿ ತಾಳಿ ಕಟ್ಟಲು ದಿನಗಣನೆ ಇರುವಾಗ ವರನಿಗೆ ಅನಾರೋಗ್ಯ ಕಾಣಿಸಿಕೊಂಡಿತು. ಈ ಕಾರಣದಿಂದ ವರ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿದ್ದಾರೆ. ಆಗ ಅವರಿಗೆ ಡೆಂಗ್ಯೂ ಇರುವುದು ಗೊತ್ತಾಗಿದೆ. ಇದರಿಂದ ವರ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ನ.27 ರಂದು ವಿವಾಹ ನಡೆಯಬೇಕಿತ್ತು. ಆದರೆ ವರ ಆಸ್ಪತ್ರೆ ದಾಖಲಾಗಿದ್ದರಿಂದ ವಧು – ವರನ ಕುಟುಂಬಸ್ಥರು ನಿಗದಿಪಡಿಸಿದ ದಿನವೇ ವಿವಾಹ ಮಾಡಿಸುವ ಸಲುವಾಗಿ. ಅಸ್ಪತ್ರೆಯನ್ನೇ ಮದುವೆ ಮಂಟಪವನ್ನಾಗಿ ಮಾಡಲು ಹೊರಟಿದ್ದಾರೆ. ಆಸ್ಪತ್ರೆಗೆ ದಾಖಲಾದ ಎರಡು ದಿನದ ಬಳಿಕ ಎರಡೂ ಮನೆಯವರು ಆಸ್ಪತ್ರೆಯಲ್ಲಿ ಮಾತನಾಡಿಕೊಂಡು ವರ ದಾಖಲಾಗಿರುವ ಕೋಣೆಯನ್ನು ಮದುವೆ ಮಂಟಪದಂತೆ ಶೃಂಗಾರಿಸಿ, ವಧುವನ್ನು ಕರೆತಂದು ಕುಟುಂಬದವರ ಸಮ್ಮುಖದಲ್ಲಿ ಹಾರ ಬದಲಾಯಿಸಿಕೊಳ್ಳುವ ಮೂಲಕ ನಿಗದಿಪಡಿಸಿದ ಮಹೂರ್ತದಲ್ಲೇ ವಿವಾಹ ಮಾಡಿಸಿದ್ದಾರೆ.

ಗಾಜಿಯಾಬಾದ್‌ನಲ್ಲಿರುವ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಈ ವಿಶೇಷ ವಿವಾಹ ನೆರವೇರಿದೆ. ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ಮದುವೆಯ ವಿಡಿಯೋ ವೈರಲ್‌ ಆಗಿದೆ.

Leave a Reply

error: Content is protected !!