ಇಚ್ಲಂಪಾಡಿ ಶ್ರೀ ಉಳ್ಳಾಕ್ಲು ಮಾಡದ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕೋತ್ಸವ-ಧಾರ್ಮಿಕ ಸಭೆ,ಪ್ರಶಸ್ತಿ ಪ್ರದಾನ

ಶೇರ್ ಮಾಡಿ

ಪ್ರಶಸ್ತಿ ಪ್ರದಾನ:
ಯುವರಾಜ ಬಳ್ಳಾಲ್ ಗುತ್ತಿನಮನೆಯವರಿಗೆ “ಉದ್ಯಪ್ಪ ಅರಸು ಪ್ರಶಸ್ತಿ” , ನಿಕಟಪೂರ್ವ ಅಧ್ಯಕ್ಷ ಗೋವಿಂದ ರಾಜ ಭಟ್ ರವರಿಗೆ ಹಾಗೂ ಕೊರಮೇರು ದಿ.ಕುಕ್ಕಣ್ಣ  ಗೌಡರ ಸ್ಮರಣಾರ್ಥ ಅವರ ಪುತ್ರ ರಮೇಶ ಗೌಡ ಕೊರಮೇರು ರವರಿಗೆ “ಶ್ರೀ ಉಳ್ಳಾಕ್ಲು ಪ್ರಶಸ್ತಿ” ನೀಡಿ ಗೌರವಿಸಲಾಯಿತು. ಪ್ರಶಸ್ತಿ ಸ್ವೀಕರಿಸಿದ ವರ ಪರವಾಗಿ ರಮೇಶ ಗೌಡ ಕೊರಮೇರುರವರು ಕೃತಜ್ಞತೆ ಸಲ್ಲಿಸಿ ಮಾತನಾಡಿದರು.

ನೇಸರ ಫೆ.04: ಕಡಬ ತಾಲೂಕು ಇಚ್ಲಂಪಾಡಿ ಬೀಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಶ್ರೀ ಉಳ್ಳಾಕ್ಲು ಮಾಡದ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕೋತ್ಸವದ ಅಂಗವಾಗಿ ಫೆ.3 ರಂದು ಬೆಳಿಗ್ಗೆ ಮಹಾಗಣಪತಿ ಹೋಮ,ಬ್ರಹ್ಮಕಲಶಪೂಜೆ ನಡೆದು 9.17ರಿಂದ 10 ಗಂಟೆಯ ಮೀನ ಲಗ್ನದ ಶುಭಮುಹೂರ್ತದಲ್ಲಿ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಯವರ ನೇತೃತ್ವದಲ್ಲಿ ಶ್ರೀ ಉಳ್ಳಾಕ್ಲು ದೈವಗಳ ಮಾಡದ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ ನಡೆಯಿತು. ಬಳಿಕ ತಂಬಿಲ ಸೇವೆ,ನಾಗಬನದಲ್ಲಿ ತಂಬಿಲ ಸೇವೆ,ಮಹಾ ಮಂಗಳಾರತಿ,ಪ್ರಸಾದ ವಿತರಣೆ,ಅನ್ನಸಂತರ್ಪಣೆ ನಡೆಯಿತು.

ಮಧ್ಯಾಹ್ನ ಧಾರ್ಮಿಕ ಸಭೆ, ಪ್ರಶಸ್ತಿ ಪ್ರದಾನ ನಡೆಯಿತು.
ಆಡಳಿತ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಗೌಡ ಕೆರ್ನಡ್ಕರವರು ಪ್ರಾಸ್ತಾವಿಕವಾಗಿ ಮಾತನಾಡಿ,2008ರಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸ ವ ನಡೆದಿದೆ.ಬಳಿಕ 2014ರಲ್ಲಿ ಚಾವಡಿ, ಪೆರ್ಗಡೆ ಪಟ್ಟಾಭಿಷೇಕ, ಬೂಡು ಉದ್ಘಾಟನೆ, ದೈವೊಂಕ್ಲು ಗುಡ್ಡೆಯಲ್ಲಿ ದೈವಗಳ ಚಾವಡಿಯ ಜೀರ್ಣೋ ದ್ಧಾರಗೊಂಡು ಪ್ರತಿಷ್ಠೆ ನಡೆದಿದೆ.ಕಂಡದ ಕೋರಿ,ಉಳ್ಳಾಕ್ಲು ದೈವಕ್ಕೆ ಕುದುರೆ ಸಮರ್ಪಣೆಯೂ ನಡೆದಿದೆ. ಶುಭಾಕರ ಹೆಗ್ಗಡೆಯವರು ಕ್ಷೇತ್ರಕ್ಕೆ ಪೆರ್ಗಡೆಯಾಗಿ ಬಂದ ಬಳಿಕ ಹಲವಾರು ಅಭಿವೃದ್ಧಿ ಕಾರ್ಯಗಳು ನಡೆದಿವೆ ಎಂದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಭಾಸ್ಕರ ಎಸ್.ಗೌಡ ಒಡ್ಯೆತ್ತಡ್ಕರವರು ಮಾತನಾಡಿ,ಪ್ರಶ್ನಾ ಚಿಂತನೆಯಲ್ಲಿ ಕಂಡುಬಂದಂತೆ ಶ್ರೀ ಉಳ್ಳಾಕ್ಲು ಮಾಡದ ಜೀರ್ಣೋ ದ್ಧಾರ ಕೆಲಸಗಳಿಗೆ 2019 ರಲ್ಲಿಯೇ ಚಾಲನೆ ನೀಡಲಾಗಿತ್ತು.ಹಿರಿಯರ, ದೈವ, ದೇವರ ಆಶೀರ್ವಾದದಿಂದ ಅಭಿವೃದ್ಧಿ ಕೆಲಸಗಳು ನಡೆದಿವೆ. ಇಚ್ಲಂಪಾಡಿ ಗ್ರಾಮ ದಲ್ಲಿ 312 ಹಿಂದೂಗಳ ಮನೆಯಿದ್ದು ಪ್ರತಿ ಮನೆಯಿಂದಲೂ ಕನಿಷ್ಠ 5 ಸಾವಿರ ರೂ.,ದೇಣಿಗೆ ನೀಡುವಂತೆ ಮನವಿ ಮಾಡಲಾಗಿತ್ತು. ಛಾವಡಿ, ಗೋಪುರ ನಿರ್ಮಾಣಕ್ಕೆ ಸುಮಾರು 33 ಲಕ್ಷ ರೂ.ವೆಚ್ಚವಾಗಿದೆ. ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾಗಿರುವ ಮಾಯಿಲಪ್ಪ ಶೆಟ್ಟಿಯವರು ಹೆಚ್ಚಿನ ಸಹಕಾರ ನೀಡಿ ದ್ದಾರೆ. ಸಂಕಷ್ಟದ ಸಂದರ್ಭದಲ್ಲಿ ಯುವರಾಜ ಬಳ್ಳಾಲರು ದೇವಸ್ಥಾನ, ದೈವಸ್ಥಾನವನ್ನು ಉಳಿಸಿದ್ದಾರೆ. ದೈವಸ್ಥಾನದ ಸುತ್ತಲಿನ ಜಾಗ ಅತಿಕ್ರಮಣ ತಡೆಯುವ ನಿಟ್ಟಿ ನಲ್ಲಿಯೂ ಅವರ ಶ್ರಮ ಅಪಾರವಾಗಿದೆ. ಜೀರ್ಣೋದ್ಧಾರ ಕೆಲಸದಲ್ಲಿ ಕೈಜೋಡಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
ಆಡಳಿತ ಸಮಿತಿ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಗಿರೀಶ್ ಸಾಲಿಯಾನ್ ಬದನೆ ಮಾತನಾಡಿ, ಇದೊಂದು ಕಾರ್ಣಿಕ ಸ್ಥಳವಾಗಿದ್ದು ನಂಬಿದವರ ಕಷ್ಟ ಕಾರ್ಪಣ್ಯಗಳ ನಿವಾರಿಸಿದ ಕ್ಷೇತ್ರವಾಗಿದೆ.ಇಂತಹ ಕ್ಷೇತ್ರ ಜೀರ್ಣೋದ್ಧಾರಗೊಂಡು ಬ್ರಹ್ಮಕಲಶೋತ್ಸವ ನೆರವೇರಿದೆ.ಎಲ್ಲರ ಸಹಕಾರದಿಂದ ಬ್ರಹ್ಮಕಲಶೋತ್ಸವ ಯಶಸ್ವಿಯಾಗಿ ನಡೆದಿದೆ ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಆಡಳಿತ ಮೊಕ್ತೇಸರರೂ,ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷರೂ ಆದ ಶುಭಾಕರ ಹೆಗ್ಗಡೆಯವರು ಮಾತನಾಡಿ,ದೇವಾ ಲಯ,ದೈವಾಲಯಗಳು ನಮ್ಮ ಬದುಕಿಗೆ ಪ್ರೇರಣೆಯಾಗಿವೆ. ಇವುಗಳ ಜೀರ್ಣೋದ್ಧಾರದ ಕೆಲಸ ಪುಣ್ಯದ ಕೆಲಸವಾಗಿದೆ. ಇದರ ಜೀರ್ಣೋದ್ದಾರ ಕೆಲಸಗಳಿಗೆ ದೊಡ್ಡ ದೊಡ್ಡ ಕಂಪನಿಗಳು ಮುಂದೆ ಬರಬೇಕು.ಈ ನಿಟ್ಟಿನಲ್ಲಿ ಅವ್ಯಕ್ತ ಬುಲೆಟಿನ್ ಡಾಟ್ ಕಾಮ್ ಆರಂಭಿಸುವುದಾಗಿ ಹೇಳಿದರು. ದೇವಾಲಯ, ದೈವಾಲಯಗಳು ಭಕ್ತರನ್ನು ಸನ್ಮಾರ್ಗದಲ್ಲಿ ಮುನ್ನಡೆಸುತ್ತವೆ. ಎಂದು ಹೇಳಿದರು.

ಗೌರವಾರ್ಪಣೆ:
ದೈವಗಳ ಮಾಡದ ಕೆಲಸ ನಿರ್ವಹಿಸಿದ ಶಿಲ್ಪಿ ಶಂಕರ್, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಭಾಸ್ಕರ ಎಸ್.ಗೌಡ ಒಡ್ಯೆತ್ತಡ್ಕ, ಕಾರ್ಯದರ್ಶಿ ದಿನೇಶ್ ಗೌಡ ಕಲ್ಯರ ವರಿಗೆ ಶಾಲು,ಸ್ಮರಣಿಕೆ,ಫಲತಾಂಬೂಲ ನೀಡಿ ಗೌರವಿಸಲಾಯಿತು. ಮಲ್ಲಿಕಾರ್ಜುನ ಕಟ್ಟೆಯ ಸೇವಾಕರ್ತರಾದ ಇಚ್ಲಂಪಾಡಿ ಬಂಟರ ಸಂಘದ ಪರವಾಗಿ ಸಂಘ ದ ಅಧ್ಯಕ್ಷ ಜಯಾನಂದ ಶೆಟ್ಟಿ ಗುತ್ತಿನಮನೆ, ಹಲ್ಲತ್ತಾಯ ಕಟ್ಟೆಯ ಸೇವಾಕರ್ತರಾದ ಬಿಲ್ಲವ ಸಂಘದ ಪರವಾಗಿ ಇಚ್ಲಂಪಾಡಿ ಬ್ರಹ್ಮಶ್ರೀ ನಾರಾಯಣಗುರು ಸ್ವಾಮಿ ಬಿಲ್ಲವ ಸಂಘದ ಅಧ್ಯಕ್ಷ ನವೀನ ಪೂಜಾರಿ ಬರಮೇಲು ಹಾಗೂ ಪಟ್ಟಾ ಹರಕೆ ಕಟ್ಟೆಯ ಸೇವಾಕರ್ತರಾದ ಒಕ್ಕಲಿಗ ಗೌಡ ಸೇವಾ ಸಂಘದ ಪರವಾಗಿ ಇಚ್ಲಂಪಾಡಿ ಒಕ್ಕಲಿಗ ಗೌಡ ಸೇವಾ ಸಂಘದ ಕಾರ್ಯದರ್ಶಿ ವಿಶ್ವನಾಥ ಗೌಡ ಕೊರಮೇರುರವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಸ್ವಯಂ ಸೇವಕರಾಗಿ ದುಡಿದ ಕಾರ್ಯಕರ್ತರಿಗೆ ಶಾಲು ಹಾಕಿ ಗೌರವಿಸಲಾಯಿತು.

ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಮಾಯಿಲಪ್ಪ ಶೆಟ್ಟಿ ಹೊಸಮನೆ, ಕಾರ್ಯದರ್ಶಿ ದಿನೇಶ ಗೌಡ ಕಲ್ಯ, ಬ್ರಹ್ಮಕಲಶ ಸಮಿತಿ ಅಧ್ಯಕ್ಷ ನಾರಾಯಣ ಪೂಜಾರಿ ಬರಮೇಲು, ಶ್ರೀ ಉಳ್ಳಾಕ್ಲು ಸೇವಾ ಸಮಿತಿ ಅಧ್ಯಕ್ಷ ಹರೀಶ ಗೌಡ ನೇರ್ಲ, ಕಾರ್ಯದರ್ಶಿ ಆನಂದ ಶೆಟ್ಟಿ ಕಂಚಿನಡ್ಕ, ಭಜನಾ ಮಂಡಳಿ ಅಧ್ಯಕ್ಷ ಜಾಣಪ್ಪ ಪೂಜಾರಿ ಪಟ್ಟೆಗುಡ್ಡೆ, ಕಾರ್ಯದರ್ಶಿ ಶಾಂತರಾಮ ಕುಡಾಲ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆಡಳಿತ ಮೊಕ್ತೇಸರರಾದ ಶುಭಾಕರ ಹೆಗ್ಗಡೆಯವರಿಗೆ ಸಮಿತಿಯವರು ಫಲತಾಂಬೂಲ ನೀಡಿ ಗೌರವಾರ್ಪಣೆ ಸಲ್ಲಿಸಿದರು. ನವೀನ್ ಪೂಜಾರಿ ಇಚ್ಲಂಪಾಡಿ, ಜಯರಾಜ್ ಕೊರಮೇರು, ಹರೀಶ್ ಶೆಟ್ಟಿ ನೇರ್ಲ, ವಿಶ್ವನಾಥ ಗೌಡ, ಜನಾರ್ದನ ಕೆರ್ನಡ್ಕ, ಉದಯಕುಮಾರ್ ಹೊಸಮನೆ, ಅಚ್ಚುತ ಗೌಡ ದೇರಾಜೆ, ಲೋಕೇಶ್ ಶೆಟ್ಟಿ, ದಿನೇಶ್ ಪೂಜಾರಿ ಬರಮೇಲು, ರಾಜೇಶ್ ಮಡಿವಾಳರವರು ಅತಿಥಿಗಳನ್ನು ಶಾಲು ಹಾಕಿ ಗೌರವಿಸಿದರು.
ನಂದಕುಮಾರಿ ಪಾದೆ, ರವೀಂದ್ರ ಗೌಡ ಬಿಜೇರು, ಮರಿಯಪ್ಪ ಗೌಡ ಕೆರ್ನಡ್ಕರವರು ಪ್ರಶಸ್ತಿ ಪುರಸ್ಕತರನ್ನು ಸಭೆಗೆ ಪರಿಚಯಿಸಿದರು,ಜೋಸ್ನಾ ಸತೀಶ್ ಮಾನಡ್ಕ ಪ್ರಾರ್ಥಿಸಿದರು,ಆಡಳಿತ ಸಮಿತಿ ಕೋಶಾಧಿಕಾರಿ ಕೇಶವ ಗೌಡ ಅಲೆಕ್ಕಿ ಸ್ವಾಗತಿಸಿ, ಸಭಾ ಕಾರ್ಯಕ್ರಮ ಸಂಚಾಲಕ ಉದಯಕುಮಾರ್ ಹೊಸಮನೆ ವಂದಿಸಿ ದರು. ಸತೀಶ್ ಪೂಜಾರಿ ಕಾಯರ್ತಡ್ಕ ನಿರೂಪಿಸಿದರು.

🔔🔔 ಆಮಂತ್ರಣ 🔔🔔

🔔🔔 ಜಾಹೀರಾತು 🔔🔔

Leave a Reply

error: Content is protected !!