ಓಮನ್ ನಲ್ಲಿ ಮಿಸ್ಟರ್ ಮದಿಮಯೆಗೆ ಅದ್ದೂರಿ ಸ್ವಾಗತ

ಶೇರ್ ಮಾಡಿ

ವೆಂಚರ್ ಎಂಟರ್ ಟೈನ್ ಮೆಂಟ್ಸ್ ಸಾರಥ್ಯದಲ್ಲಿ, ಎಂ.ಎಂ.ಎಂ. ಗ್ರೂಪ್ಸ್ ನಿರ್ಮಾಣದ “ಮಿಸ್ಟರ್ ಮದಿಮಯೆ” ಚಿತ್ರ ಮಸ್ಕತ್ ನ ವೋಕ್ಸ್ ಚಿತ್ರಮಂದಿರ ಮತ್ತು ಸಲಲಾ ದ ಸಿನಿಪೋಲಿಸ್ ಚಿತ್ರಮಂದಿರದಲ್ಲಿ ಪ್ರದರ್ಶನಗೊಂಡು ನಿರೀಕ್ಷೆಗೂ ಮೀರಿ ಜನ ಮೆಚ್ಚುಗೆಗೆ ಪಾತ್ರವಾಯಿತು.

ಸ್ಪೆಷಲ್ ಪ್ರೀಮಿಯರ್ ಶೋ ನಲ್ಲಿ ನಾಯಕ ನಟ ಸಾಯಿ ಕೃಷ್ಣ ಕುಡ್ಲ, ರವಿಕಾಂತ್ ಪೂಜಾರಿ, ರವಿ ರಾಮಕುಂಜ, ಸುನಿಲ್ ನೆಲ್ಲಿಗುಡ್ಡೆ ಮೊದಲಾದವರು ಭಾಗವಹಿಸಿದ್ದರು. ಶ್ವೇತ ಸುವರ್ಣ, ಮನೋಜ್ ಡಿಸೋಜ, ಮಾಧುರಿ ಸುವರ್ಣ, ಸುನಿಲ್ ಮಿನೇಜಸ್ , ಎಲ್ಸನ್ ಡಿಕೋಸ್ತ ರವರನ್ನು ಒಳಗೊಂಡ ವೆಂಚರ್ ಎಂಟರ್ ಟೈನ್ ಮೆಂಟ್ಸ್ ಸಾರಥ್ಯದಲ್ಲಿ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.

ಮಿಸ್ಟರ್ ಮದಿಮೆಯೆ ಜನವರಿ 5 ರಂದು ಕರಾವಳಿ ಜಿಲ್ಲೆಯಾದ್ಯಂತ ಪ್ರದರ್ಶನಗೊಳ್ಳಲಿದೆ.
ಮಸ್ಕತ್ ನಲ್ಲಿ ಸಿನಿಮಾ ನೋಡಿದವರು ಬಹಳಷ್ಟು ಮೆಚ್ಚುಗೆ ವ್ಯಕ್ತಪಡಿಸಿದರು. ಸಂಪೂರ್ಣ ಹಾಸ್ಯ ಚಿತ್ರದಲ್ಲಿ ಒಳ್ಳೆಯ ಕತೆ ಇದೆ. ಸಮಾಜಕ್ಕೆ ಸಂದೇಶವೂ ಇದೆ. ಕುಟುಂಬ ಸಮೇತ ವೀಕ್ಷಿಸ ಬಹುದಾದ ಸಿನಿಮಾ ಇದಾಗಿದ್ದು, ಮುಂದಿನ ದಿನಗಳಲ್ಲಿ ಬೇರೆ ಬೇರೆ ತಾಣಗಳಲ್ಲಿ ಸಿನಿಮಾದ ಪ್ರೀಮಿಯರ್ ಶೋ ನಡೆಯಲಿದೆ.

ಬಹುತೇಕ ಹೊಸ ಕಲಾವಿದರನ್ನು ಒಳಗೊಂಡಿರುವ ಈ ಚಿತ್ರಕ್ಕೆ ನವ ನಿರ್ದೇಶಕ ನವೀನ್ ಜಿ ಪೂಜಾರಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರದ ಹಾಡುಗಳು ಈಗಾಗಲೇ ಸೂಪರ್ ಹಿಟ್ ಆಗಿದ್ದು, ಚಿತ್ರವು ಜ.5 ರಂದು ಎಲ್ಲಾ ಕಡೆಗಳಲ್ಲಿ ಬಿಡುಗಡೆಗೊಳ್ಳಲಿದೆ. ಅದಕ್ಕಿಂತ ಮುಂಚಿತವಾಗಿ ಪ್ರಪಂಚಾದ್ಯಾದಂತ ವಿವಿಧ ಸ್ಥಳಗಳಲ್ಲಿ ಪ್ರೀಮಿಯರ್ ಶೋ ಗಳನ್ನು ನಡೆಸಲು ತಂಡ ಯೋಜನೆ ಹಾಕುತ್ತಿದೆ.

Leave a Reply

error: Content is protected !!