ಭಟ್ರಕುಮೇರು ಸ್ವಾಮಿ ಕೊರಗ ತನಿಯ ಕ್ಷೇತ್ರ : ಪ್ರತಿಷ್ಠಾವರ್ಧಂತಿ ಹಾಗೂ ಕೋಲ ಸೇವೆ ಸಂಪನ್ನ

ಶೇರ್ ಮಾಡಿ

ಮಂಗಳೂರು: ನಗರದ ಪದವಿನಂಗಡಿ ಸಮೀಪದ ಭಟ್ರಕುಮೇರು ಸ್ವಾಮಿ ಕೊರಗ ತನಿಯ ಸಾನಿಧ್ಯದಲ್ಲಿ ಸ್ವಾಮಿ ಕೊರಗ ತನಿಯ ದೈವದ ದ್ವಿತೀಯ ವರ್ಷದ ಪ್ರತಿಷ್ಠಾವರ್ಧಂತಿಹಾಗೂ ಕೋಲ ಸೇವೆಯು ಸಾನಿಧ್ಯದ ಯಜಮಾನರು ಹಾಗೂ ದೈವಾರಾಧಕರಾದ ಶ್ರೀ ಭಾಸ್ಕರ ಬಂಗೇರ ಇವರ ನೇತ್ರತ್ವದಲ್ಲಿ ತಾ| 03-12-2023ನೇ ಅದಿತ್ಯವಾರದಂದು ಬೆಳಿಗ್ಗೆ 10 ಗಂಟೆಗೆ ತಂತ್ರಿಗಳಾದ ರವಿ ಆನಂದ ಶಾಂತಿ ಆಡುಮರೋಳಿ ಇವರ ಮಾರ್ಗದರ್ಶನದಲ್ಲಿ ಜರುಗಿತು.

ಅಂದು ಬೇಳಿಗೆಯಿಂದ ಮಧ್ಯಾಹ್ನದವರೆಗೆ ನಡೆದ ಪ್ರತಿಷ್ಠಾವರ್ಧಂತಿ ಹಾಗೂ ಕೋಲ ಸೇವೆಯಲ್ಲಿ ಕೆಮಾರು ಮಠದ ಈಶ ವಿಠಲದಾಸ ಸ್ವಾಮೀಜಿ ಆಶೀರ್ವಚನ ನೀಡಿದರು. ಮಂಗಳೂರು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಯಕ್ಷದ್ರುವ ಫೌಂಡೇಶನ್ ನ ಸ್ಥಾಪಕಧ್ಯಾಕ್ಷ ಪಟ್ಲ ಸತೀಶ್ ಕುಮಾರ್ ಶೆಟ್ಟಿ, ಮಂಕಿಸ್ಟ್ಯಾಂಡ್ ಕಟೀಲ್ದಪ್ಪೆ ಸನ್ನಿದಿಯ ಅರ್ಚಕರಾದ ಪ್ರಾಣೇಶ್, ಬಿಜೆಪಿ ಮುಖಂಡ ಬ್ರಿಜೇಶ್ ಚೌಟ, ವಸಂತ್ ಪೂಜಾರಿ, ಪ್ರಮುಖರಾದ ನವನೀತ್ ಕದ್ರಿ, ಕೆ.ಕೆ. ಪೇಜಾವರ್, ಪ್ರದೀಪ್ ಕುಮಾರ್ ಆಳ್ವ,, ಲೀಲಾಕ್ಷ ಕರ್ಕೇರಾ, ಉದ್ಯಮಿಗಳಾದ ಎಂ. ಅಶೋಕ್ ಶೇಟ್, ನವೀನ್ ಕುಮಾರ್, ಶ್ರೀ ಕ್ಷೇತ್ರದ ಸೇವಾಕರ್ತರುಗಳಾದ ಮಾತಶ್ರೀ ವಿಮಲಾ ಹಾಗೂ ಶ್ರೀಮತಿ ವಿಜಯ ಭಾಸ್ಕರ ಬಂಗೇರ ಮುಂತಾದವರು ಪಾಲ್ಗೊಂಡಿದ್ದರು.

Leave a Reply

error: Content is protected !!