ಶೀಘ್ರವೇ ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ವಿಚ್ಛೇದನ? ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ

ಶೇರ್ ಮಾಡಿ

ಸ್ವಘೋಷಿತ ಚಿತ್ರ ವಿಶ್ಲೇಷಕ ಉಮೈರ್ ಸಂಧು ಇತ್ತೀಚೆಗೆ ಟ್ವೀಟ್ ಮಾಡಿದ್ದರು. ಐಶ್ವರ್ಯಾ-ಅಭಿಷೇಕ್ ವಿಚ್ಛೇದನದ ಬಗ್ಗೆ ಬರೆದುಕೊಂಡಿದ್ದರು. ಇದರ ಜೊತೆಗೆ ಅವರು ಕಳೆದ ಕೆಲವು ದಿನಗಳಿಂದ ಒಟ್ಟಾಗಿ ಕಾಣಿಸಿಕೊಂಡಿಲ್ಲ.

ಸೆಲೆಬ್ರಿಟಿ ದಂಪತಿಗಳ ಮಧ್ಯೆ ವೈಮನಸ್ಸು ಮೂಡುವುದು, ಅವರು ವಿಚ್ಛೇದನ ಪಡೆಯುವುದು ಹೊಸದಲ್ಲ. ಈ ರೀತಿ ವಿಚ್ಛೇದನ ಪಡೆದ ಅನೇಕ ಸೆಲೆಬ್ರಿಟಿಗಳಿದ್ದಾರೆ. ಈಗ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ದಂಪತಿ ಇದೇ ವಿಚಾರಕ್ಕೆ ಸುದ್ದಿ ಆಗುತ್ತಿದ್ದಾರೆ. ಇವರು ವಿಚ್ಛೇದನ ಪಡೆಯಲಿದ್ದಾರೆಯೇ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಭರ್ಜರಿ ಚರ್ಚೆ ಆಗುತ್ತಿದೆ.

ಅಭಿಷೇಕ್ ಬಚ್ಚನ್ ಮತ್ತು ನಟಿ ಐಶ್ವರ್ಯಾ ರೈ ಬಚ್ಚನ್ ಅವರ ಸಂಬಂಧ ಯಾವಾಗಲೂ ಚರ್ಚೆಯಲ್ಲಿರುವ ವಿಷಯ. ಕಳೆದ ಕೆಲವು ದಿನಗಳಿಂದ ಅಭಿಷೇಕ್-ಐಶ್ವರ್ಯಾ ವಿಚ್ಛೇದನದ ಕುರಿತು ಚರ್ಚೆಯಾಗುತ್ತಿದೆ. ಐಶ್ವರ್ಯಾ ಮತ್ತು ಅಭಿಷೇಕ್ ಕಳೆದ ಹಲವು ದಿನಗಳಿಂದ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಇತ್ತೀಚೆಗೆ ಐಶ್ವರ್ಯಾ ರೈ ಹುಟ್ಟುಹಬ್ಬವಿತ್ತು. ಆಗ ಐಶ್ವರ್ಯಾ ಜೊತೆಗಿದ್ದಿದ್ದು ಅವರ ತಾಯಿ ಮತ್ತು ಮಗಳು ಮಾತ್ರ. ಅವರ ಬರ್ತ್​ಡೇ ದಿನ ಅಭಿಷೇಕ್ ಅವರು ಐಶ್ವರ್ಯಾ ಅವರ ಫೋಟೋನ ಗೂಗಲ್​ನಲ್ಲಿ ಹುಡುಕಿ ಡೌನ್​ಲೋಡ್​ ಮಾಡಿ ಪೋಸ್ಟ್ ಮಾಡಿದ್ದರು. ಹ್ಯಾಪಿ ಬರ್ತ್​ಡೇ ಎಂದಷ್ಟೇ ಬರೆದಿದ್ದರು. ಇಬ್ಬರ ನಡುವೆ ವಿಚ್ಛೇದನದ ಮಾತುಕತೆ ಶುರುವಾಗಿದೆ ಎಂದು ಹೇಳಲಾಗುತ್ತಿದೆ. ಈ ನಡುವೆ ಹಳೆಯ ಸಂದರ್ಶನವೊಂದು ವೈರಲ್ ಆಗಿದೆ.

2010ರಲ್ಲಿ ನಡೆದ ಸಂದರ್ಶನವೊಂದರಲ್ಲಿ ಐಶ್ವರ್ಯಾ ಅವರು ‘ಅಭಿಷೇಕ್ ಮತ್ತು ನಾನು ಪ್ರತಿದಿನ ಜಗಳವಾಡುತ್ತೇವೆ…’ ಎಂದು ಹೇಳಿದ್ದರು. ‘ನಮ್ಮ ನಡುವೆ ಭಿನ್ನಾಭಿಪ್ರಾಯವಿದೆ. ಈ ಭಿನ್ನಾಭಿಪ್ರಾಯ ಬೇಗ ಇತ್ಯರ್ಥವಾಗುತ್ತವೆ. ನಮ್ಮ ಸಂಬಂಧದಲ್ಲಿ ಏರಿಳಿತ ಇದೆ. ಅವರಿಲ್ಲದಿದ್ದರೆ ಜೀವನವು ಸಂಪೂರ್ಣವಾಗಿ ನೀರಸವಾಗಿರುತ್ತದೆ. ನಾವು ನಮ್ಮ ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು ಪ್ರಯತ್ನಿಸುತ್ತೇವೆ’ ಎಂದು ಹೇಳಿದ್ದರು. ಈಗ ಅಭಿಷೇಕ್ ಹಾಗೂ ಐಶ್ವರ್ಯಾ ಮಧ್ಯೆ ಮೂಡಿರುವ ಭಿನ್ನಾಭಿಪ್ರಾಯ ವಿಚ್ಛೇದನದವರೆಗೆ ಬಂದಿದೆ ಎನ್ನಲಾಗುತ್ತಿದೆ.

ಉಮೈರ್​ ಸಂಧು ಪೋಸ್ಟ್
ಸ್ವಘೋಷಿತ ಚಿತ್ರ ವಿಶ್ಲೇಷಕ ಉಮೈರ್ ಸಂಧು ಇತ್ತೀಚೆಗೆ ಟ್ವೀಟ್ ಮಾಡಿದ್ದರು. ಐಶ್ವರ್ಯಾ-ಅಭಿಷೇಕ್ ವಿಚ್ಛೇದನದ ಬಗ್ಗೆ ಬರೆದುಕೊಂಡಿದ್ದರು. ‘ಅಭಿಷೇಕ್-ಐಶ್ವರ್ಯಾ ಅಧಿಕೃತವಾಗಿ ವಿಚ್ಛೇದನ ಪಡೆದಿದ್ದಾರೆ’ ಎಂದು ಉಮೈರ್ ಟ್ವೀಟ್ ಮಾಡಿದ್ದರು. ಈ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇವರು ಪೋಸ್ಟ್ ಮಾಡುವ ಬಹುತೇಕ ಎಲ್ಲಾ ಟ್ವೀಟ್​ಗಳು ಫೇಕ್ ಆಗಿರುತ್ತವೆ. ಹೀಗಾಗಿ, ಇವರ ಟ್ವೀಟ್​ನ ಜನ ಗಂಭೀರವಾಗಿ ಸ್ವೀಕರಿಸಿಲ್ಲ.

ಐಶ್ವರ್ಯಾ-ಅಭಿಷೇಕ್ ಸಂಬಂಧ
ನಟ ಸಲ್ಮಾನ್ ಖಾನ್ ಜೊತೆಗಿನ ಬ್ರೇಕಪ್​ ನಂತರ ಐಶ್ವರ್ಯಾ ರೈ ಸುಮ್ಮನೆ ಇದ್ದರು. ಆ ಬಳಿಕ ಅವರು ಅಭಿಷೇಕ್​ ಜೊತೆ ಪ್ರೀತಿಯಲ್ಲಿ ಬಿದ್ದರು. 2007ರಲ್ಲಿ ಕೆಲವೇ ಜನರ ಸಮ್ಮುಖದಲ್ಲಿ ಐಶ್ವರ್ಯ-ಅಭಿಷೇಕ್ ಮದುವೆಯಾದರು. 2011ರಲ್ಲಿ ಐಶ್ವರ್ಯಾ ಆರಾಧ್ಯಗೆ ಜನ್ಮ ನೀಡಿದರು. ಈಗ ಇಬ್ಬರ ವಿಚ್ಛೇದನದ ವಿಚಾರ ಎಲ್ಲೆಡೆ ಚರ್ಚೆಯಾಗುತ್ತಿದೆ. ಇದು ನಿಜ ಆಗದಿರಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.

Leave a Reply

error: Content is protected !!