ಮಂಗಳೂರು ವಿವಿ ಕಬಡ್ಡಿ ಪಂದ್ಯಾಟ: ಉಜಿರೆ ಎಸ್‌ಡಿಎಂಗೆ ಪ್ರಶಸ್ತಿ

ಶೇರ್ ಮಾಡಿ

ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತ್ತಕೋತ್ತರ ಅಧ್ಯಯನ ಕೇಂದ್ರದ ಆಶ್ರಯ ದಲ್ಲಿ ಸೋಮವಾರ ಹಮ್ಮಿಕೊಳ್ಳಲಾದ ಮಂಗಳೂರು ವಿ.ವಿ ಅಂತರ್ ವಲಯ ಪುರುಷರ ಕಬಡ್ಡಿ ಪಂದ್ಯಾಟದಲ್ಲಿ ಉಜಿರೆಯ ಎಸ್.ಡಿ.ಎಂ ಕಾಲೇಜು ತಂಡ ಪ್ರಶಸ್ತಿಯೊಂದಿಗೆ ರತ್ನವರ್ಮ ಹೆಗ್ಗಡೆ ಸ್ಮಾರಕ ಪರ್ಯಾಯ ಫಲಕವನ್ನು ಗೆದ್ದುಕೊಂಡಿದೆ.

ಅಜ್ಜರಕಾಡು ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯಾಟದ ಫೈನಲ್‌ನಲ್ಲಿ ಎಸ್‌ಡಿಎಂ ಕಾಲೇಜು ತಂಡವು, ಮೂಡಬಿದ್ರೆ ಆಳ್ವಾಸ್ ಕಾಲೇಜು ತಂಡವನ್ನು 52-28 ಅಂಕಗಳಿಂದ ಸೋಲಿಸಿ ಸತತ ಎರಡನೇ ಬಾರಿಗೆ ಪ್ರಶಸ್ತಿಯನ್ನು ತನ್ನದಾಗಿಸಿದೆ. ಸೆಮೀಫೈನಲ್ ಪಂದ್ಯಗಳಲ್ಲಿ ಎಸ್‌ಡಿಎಂ ಕಾಲೇಜು ತಂಡವು ಸರಕಾರಿ ಪ್ರಥಮ ದರ್ಜೆ ಕಾಲೇಜು ತೆಂಕನಿಡಿಯೂರು ತಂಡವನ್ನು ಹಾಗೂ ಆಳ್ವಾಸ್ ತಂಡವು ಮಂಗಳೂರಿನ ಪ್ರೇರಣ ಕಾಲೇಜು ತಂಡವನ್ನು ಸೋಲಿಸಿತು.

ಅತಿಥೇಯ ತೆಂಕನಿಡಿಯೂರು ತಂಡ ತೃತೀಯ ಹಾಗೂ ಪ್ರೇರಣ ತಂಡ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿತು. ಆಳ್ವಾಸ್ ತಂಡದ ಶ್ರೀನಿವಾಸ್ ಉತ್ತಮ ರೈಡರ್ ಪ್ರಶಸ್ತಿಯನ್ನು, ಎಸ್‌ಡಿಎಂ ಕಾಲೇಜು ತಂಡದ ಸುಶಾಂತ್ ಉತ್ತಮ ಕ್ಯಾಚರ್ ಹಾಗೂ ಎಸ್‌ಡಿಎಂ ಕಾಲೇಜು ತಂಡದ ಪ್ರಜ್ವಲ್ ಸರ್ವಾಂಗೀಣ ಆಟಗಾರ ಪ್ರಶಸ್ತಿಯನ್ನು ಪಡೆದುಕೊಂಡರು.

ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಕಬಡ್ಡಿ ಅಸೋಸಿಯೇಷನ್ ಅದ್ಯಕ್ಷ ದಿನೇಶ್ ಪುತ್ರನ್, ವಿ.ವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಜೆರಾಲ್ಡ್ ಡಿಸೋಜಾ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ, ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ, ಡಾ.ಜಿ.ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ.ರಾಮಚಂದ್ರ ಪಾಟ್ಕರ್ ಉಪಸ್ಥಿತರಿದ್ದರು.

Leave a Reply

error: Content is protected !!