ಏಕಕಾಲಕ್ಕೆ ಒಂದಲ್ಲ, ಎರಡಲ್ಲ 4 ಯುವತಿಯರ ಜೊತೆ ಸಪ್ತಪದಿ ತುಳಿದ ವ್ಯಕ್ತಿ, ಜನರ ರಿಯಾಕ್ಷನ್ ವೈರಲ್!

ಶೇರ್ ಮಾಡಿ

ದೇಶಾದ್ಯಂತ ಮದುವೆ ಸೀಸನ್ ನಡೆಯುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ಮದುವೆಯ ವಿಡಿಯೋಗಳು ಹರಿದಾಡುತ್ತಿವೆ. ಜನರನ್ನು ನಗಿಸುವ ಕೆಲವು ವಿಡಿಯೋಗಳಿವೆ. ಅಂತಹುದೇ ಒಂದು ವಿಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಒಬ್ಬ ವ್ಯಕ್ತಿ ಏಕಕಾಲಕ್ಕೆ ನಾಲ್ಕು ಹುಡುಗಿಯರನ್ನು ಮದುವೆಯಾಗುತ್ತಿದ್ದಾನೆ. ಈ ವಿಡಿಯೋ ನೋಡಿ ಜನರಿಗೆ ನಂಬಿಕೆಯ ಆಗುತ್ತಿಲ್ಲ. ಇದೇ ವೇಳೆ, ವೀಡಿಯೋ ವೈರಲ್ ಆದ ಬಳಿಕ ಅನೇಕರು ತಮ್ಮ ಪ್ರತಿಕ್ರಿಯೆಯನ್ನು ಸಹ ಕೊಡುತ್ತಿದ್ದಾರೆ. ಇಂತಹ ವೀಡಿಯೊ ಕಾಣಿಸಿಕೊಂಡಿರುವುದು ಇದೇ ಮೊದಲಲ್ಲ ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ. ಆದರೆ, ಈ ವಿಡಿಯೋ ನೋಡಿದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಲು ಇಂತಹದೊಂದು ವಿಡಿಯೋ ತಯಾರಿಸಿ ಹಂಚಿಕೊಂಡಿದ್ದಾರೆ ಎಂದೂ ಸಹ ಜನ ಹೇಳುತ್ತಿದ್ದಾರೆ.

ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ವರನೊಬ್ಬ ತನ್ನ ನಾಲ್ವರು ವಧುಗಳೊಂದಿಗೆ ಮದುವೆ ಮಂಟಪದಲ್ಲಿ ಸಪ್ತಪದಿ ತುಳಿಯುತ್ತಿರುವುದನ್ನು ನೀವು ನೋಡಬಹುದು. ವರನು ಮುಂದೆ ನಡೆಯುತ್ತಿದ್ದಾನೆ ಮತ್ತು ಎಲ್ಲಾ ವಧುಗಳು ಅವನನ್ನು ಅನುಸರಿಸುತ್ತಿದ್ದಾರೆ. ಈ ವೀಡಿಯೋ ನೋಡಿದ ಜನರಿಗೆ ತಮ್ಮ ಕಣ್ಣುಗಳೆ ನಂಬಲು ಆಗುತ್ತಿಲ್ಲ. ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಹಂಚಿಕೊಳ್ಳಲಾಗಿದೆ, ಇದನ್ನು ಇದುವರೆಗೆ 11 ಸಾವಿರಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ಇದೇ ವೇಳೆ, ಅನೇಕ ಜನರು ಈ ಬಗ್ಗೆ ತಮ್ಮ ಪ್ರತಿಕ್ರಿಯೆಯನ್ನು ಸಹ ನೀಡುತ್ತಿದ್ದಾರೆ. ಆ ವ್ಯಕ್ತಿಯ ಸ್ಥಿತಿ ನೋಡಿ ಜನರೂ ಖುಷಿ ಪಡುತ್ತಿದ್ದಾರೆ.

ವಿಡಿಯೋಗೇ ಜನರ ಪ್ರತಿಕ್ರಿಯೆ ಹೇಗಿದೆ?
ವೈರಲ್ ಆಗುತ್ತಿರುವ ಈ ವಿಡಿಯೋಗೆ ಹಲವರು ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಒಬ್ಬ ಬಳಕೆದಾರ, ‘ನಂಬಲು ಸಾಧ್ಯವಿಲ್ಲ’ ಎಂದು ಬರೆದಿದ್ದಾರೆ. ಮತ್ತೊಬ್ಬ ಬಳಕೆದಾರ, ‘ಅದೃಷ್ಟ ಎಂದರೆ ಹೀಗಿರಬೇಕು’ ಎಂದು ಬರೆದಿದ್ದಾರೆ. ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ, ‘ಈ ವೀಡಿಯೊ ನಕಲಿಯಾಗಿದೆ’ ಎಂದಿದ್ದಾರೆ.

Leave a Reply

error: Content is protected !!