ಮನೆ ಬಳಿ ಮೇಯಲು ಬಂದ ಹಸುಗಳ ಮೇಲೆ ಆ್ಯಸಿಡ್‌ ಎರಚಿದ ವೃದ್ಧೆ

ಶೇರ್ ಮಾಡಿ

ಮನೆ ಬಳಿ ಮೇಯಲು ಬಂದ ಹಸುಗಳ ಮೇಲೆ ಆ್ಯಸಿಡ್‌ ಎರಚಿ ವಿಕೃತಿ ಮೆರೆದಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಗುಣಿ ಅಗ್ರಹಾರ ಗ್ರಾಮದಲ್ಲಿ ನಡೆದಿದೆ. ವೃದ್ಧೆ ಜೋಸೆಫ್ ಗ್ರೇಸ್ (76 ವರ್ಷ) ಎಂಬುವವರು ಕೃತ್ಯ ಎಸಗಿದಿದ್ದಾರೆ. ಜೋಸೆಫ್ ಗ್ರೇಸ್ ಆ್ಯಸಿಡ್‌ ಎರಚಿದ್ದರಿಂದ 18 ಹಸುಗಳಿಗೆ ಸುಟ್ಟ ಗಾಯಗಳಾಗಿವೆ. ಜೋಸೆಫ್ ಗ್ರೇಸ್ ಮನೆ ಬಳಿಯಿರುವ ಖಾಲಿ ಜಾಗದಲ್ಲಿ ಕಳೆದ ಮೂರು ದಿನಗಳಿಂದ ಹಸುಗಳು ಮೇಯಲು ಬರುತ್ತಿದ್ದವು. ಹೀಗಾಗಿ ಜೋಸೆಫ್ ಗ್ರೇಸ್ ನಿರಂತರವಾಗಿ ಆ್ಯಸಿಡ್‌ ಎರಚುತ್ತಿದ್ದಾರೆ.

ನಾಗಣ್ಣ ಎಂಬುವರಿಗೆ ಸೇರಿದ ನಾಲ್ಕು ಹಸು, ಶ್ರೀರಾಮ, ಕೃಷ್ಣಾ, ಪ್ರಕಾಶ್‌ ಎಂಬುವರಿಗೆ ಸೇರಿದ ತಲಾ ಮೂರು ಹಸು, ರಾಜಣ್ಣ, ಗಂಗಮ್ಮ ಎಂಬುವರಿಗೆ ಸೇರಿದ ತಲಾ ಎರಡು ಹಸು, ಮದನ್‌ ಎಂಬುವರಿಗೆ ಸೇರಿದ ಒಂದು ಹಸುಗೆ ಗಾಯವಾಗಿದೆ. ಈ ಬಗ್ಗೆ ಹಸುಗಳ ಮಾಲಿಕರು ಜೋಸೆಫ್ ಗ್ರೇಸ್ ಅವರನ್ನು ಪ್ರಶ್ನಿಸಿದಾಗ ಬಾತ್‌ ರೂಂಗೆ ಬಳಸುವ ಆ್ಯಸಿಡ್‌ ಎರಚಿದ್ದೇನೆ ಎಂದು ಸಬೂಬು ನೀಡಿದ್ದಾರೆ.

ಸುಟ್ಟ ಗಾಯಗಳಿಂದ ಹಸುಗಳು ಹಾಲು ಕೊಡುತ್ತಿಲ್ಲ, ನೋವಿನಿಂದ ಬಳಲುತ್ತಿವೆ. ನಮಗೆ ನ್ಯಾಯ ಕೊಡಿಸಿ ಎಂದು ಹಸುಗಳ ಮಾಲಿಕರು ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

error: Content is protected !!