ನೆಲ್ಯಾಡಿ: ವರ್ಷಮ್ ಪ್ರತಿ ನಡೆಯುವ ಪ್ರತಿಷ್ಟಿತ ನೆಲ್ಯಾಡಿ ಸಂಯುಕ್ತ ಕ್ರಿಸ್ಮಸ್ 2023 ಡಿ.17ರ ಬಾನುವಾರ ದಂದು ವಿಜೃಂಭಣೆಯಿಂದ ನಡೆಯಿತು.
ನೆಲ್ಯಾಡಿ ಮತ್ತು ಆಸುಪಾಸಿನ ಸುಮಾರು ಇಪ್ಪತ್ತಾರು ಚರ್ಚ್ ಗಳ ಎರಡುವರೆ ಸಾವಿರಕ್ಕಿಂತಲೂ ಆದಿಕ ಸಂಖ್ಯೆಯ ಜನರು ಬಾಗಿಯಾದ ಈ ಸಂಭ್ರಮ, ಆಕರ್ಷಕ ಮೆರವಣಿಗೆ, ಚಿತ್ತಾಕರ್ಷಕ ಸ್ಥಬ್ದ ಚಿತ್ರಗಳು, ಶಿಸ್ತು, ಸಂಯಮ, ವರ್ಣರಂಜಿತ ಶೋಭಾ ಯಾತ್ರೆಗಳಿಂದ ನೋಡುವರ ಮನಸ್ಸನ್ನು ಮುದಗೊಳಿಸುವ ಕಾರ್ಯಕ್ರಮವಾಗಿ ಯಶಸ್ಸನ್ನು ಕಂಡಿತು.
ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಗಾರರಾಗಿ ಬೆಳ್ತಂಗಡಿ ಧರ್ಮ ಪ್ರಾಂತ್ಯ ದ ಪರಮ ಪೂಜ್ಯ ಅತಿವಂದನಿಯ ಮಾರ್ ಲಾರೆನ್ಸ್ ಮುಕ್ಕುಯಿ ಕ್ರಿಸ್ಮಸ್ ಶಾಂತಿ, ಸಹ ಬಾಳ್ವೆ ವಿನಯ ಶೀಲತೆ, ನಂಬಿಕೆ ಮತ್ತು ನಿರೀಕ್ಷೆ ಗಳ ಹಬ್ಬ ಎಂದು ಕರೆ ನೀಡಿದರು. ಮುಖ್ಯ ಅತಿಥಿ ಯಾಗಿ ಬಾಗವಹಿಸಿದ ಶ್ರೀ ಐವನ್ ಡಿಸೋಜಾ ಅವರು ಜನಸಂಖ್ಯೆ ಯಲ್ಲಿ ನಗಣ್ಯ ವಾದ ಕ್ರೈಸ್ತ ಸಮಾಜ ರಾಷ್ಟ್ರ ನಿರ್ಮಾಣ ದಲ್ಲಿ ಕ್ರಿಯಾತ್ಮ ಕವಾಗಿ ತೊಡಗಿಸಿ ದೇಶಕ್ಕೆ ಶಿಕ್ಷಣ ಮತ್ತು ಸಮಾಜ ಸೇವೆಯಲ್ಲಿ ಮಾದರಿಯ ಸೇವೆ ಯನ್ನು ನೀಡುತ್ತಿದೆ ಎಂದು ತಿಳಿಸಿದರು. ಅಧ್ಯಕ್ಷತೆ ಯನ್ನು ವಂದನಿಯ ಕೋರ್ ಎಪಿಸ್ಕೊಪ ಪಿ.ಕೆ ಅಬ್ರಹಾಂ ವಹಿಸಿದ್ದರು. ಮುಖ್ಯ ಸಂಘಟಕರಾಗಿ ವಂದನಿಯ ಫಾ.ಜೋಸೆಫ್ ಪಾ೦ಪಕ್ಕಲ್, ಜೋಸೆಫ್ ವಿ.ಜೆ. ನಯನ್ ಟ್ರೇಡರ್ಸ್, ಮನೋಜ್ ಬಿಲ್ಡ್ ಟೆಕ್, ,ಅಬ್ರಹಾಂ ಕೆ.ಪಿ, ವಂದನಿಯ ಫಾ.ಸಕ್ಕರಿಯ, ಕೆ.ಪಿ ತೋಮಸ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರಾಲಿ ಮತ್ತು ಸ್ಥಬ್ದ ಚಿತ್ರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಸಮಗ್ರ ಪ್ರಶಸ್ತಿಗೆ ಅರ್ಹವಾಯಿತು. ಉದನೆ ದ್ವಿತೀಯ ಸಮಗ್ರ ಪ್ರಶಸ್ತಿಯನ್ನು, ಕೊಣಾಲು ಸೆಂಟ್ ಮೇರಿಸ್ ಚರ್ಚ್ ತೃತೀಯ ಸ್ಥಾನವನ್ನು ಪಡೆದುಕೊಂಡಿತು.