ಯುವಕನೊಂದಿಗೆ ಮಹಿಳೆ ಅಕ್ರಮ ಸಂಬಂಧ, ಮನೆ ಬಿಟ್ಟು ಓಡಿಹೋಗಿ ನೇಣಿಗೆ ಶರಣಾದರು

ಶೇರ್ ಮಾಡಿ

ಅಕ್ರಮ ಸಂಬಂಧ ಹೊಂದಿದ್ದ ಯುವಕ ಹಾಗೂ ಮಹಿಳೆ ಒಂದೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂದಿದ್ದಾರೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕು ಎಸ್.ಜೀಡಮಾಕಲಪಲ್ಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅನಸೂಯ(35) ಹಾಗೂ ವಿಜಯ್ ಕುಮಾರ್(28) ಆತ್ಮಹತ್ಯೆ ಮಾಡಿಕೊಂಡವರು. ಅನಸೂಯಗೆ ಮದುವೆಯಾಗಿ ಎರಡು ಮಕ್ಕಳು ಇದ್ದರೂ ಸಹ ಸಹ ಅವಿವಾಹಿತ ಯುವಕ ವಿಜಯ್ ಕುಮಾರ್​ನೊಂದಿಗೆ ಅಕ್ರಮ ಸಂಬಂಧವಿತ್ತು. ಅಲ್ಲದೇ ಇವರಿಬ್ಬರು ಕಳೆದ ಎರಡು ತಿಂಗಳ ಹಿಂದೆ ಊರು ಬಿಟ್ಟು ನಾಪತ್ತೆಯಾಗಿದ್ದರು. ಆದ್ರೆ, ಇದೀಗ ಗ್ರಾಮಕ್ಕೆ ಬಂದು ಏಕಾಏಕಿ ಒಂದೇ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಅನಸೂಯ, ಮಂಜುನಾಥ್ ಎನ್ನುವರೊಂದಿಗೆ ಮದುವೆಯಾಗಿದ್ದು, ಈಗಾಗಲೇ ದಂಪತಿಗೆ ಇಬ್ಬರು ಮಕ್ಕಳು ಇದ್ದಾರೆ. ಇನ್ನು ವಿಜಯ್ ಕುಮಾರ್​ ಮದುವೆಯಾಗಿರಲಿಲ್ಲ. ಅನಸೂಯ ಮತ್ತು ವಿಜಯ್ ಕುಮಾರ್​ ನಡುವೆ ಅಕ್ರಮ ಸಂಬಂಧವಿತ್ತು. ಅಲ್ಲದೇ ಈ ಜೋಡಿ ಮನೆ ಬಿಟ್ಟು ಓಡಿ ಹೋಗಿತ್ತು. ಈಗ ಇಬ್ಬರು ಕಳೆದ ರಾತ್ರಿ ಗ್ರಾಮದ ಹೊರಗಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ರಾಯಲ್ಪಾಡು ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

Leave a Reply

error: Content is protected !!