ಗಂಡನ ಗುಪ್ತಾಂಗ ಕತ್ತರಿಸಿ ಟಾಯ್ಲೆಟ್​​​​ನಲ್ಲಿ ಫ್ಲಶ್ ಮಾಡಿದ ಪತ್ನಿ;ಅಷ್ಟಕ್ಕೂ ಆತ ಮಾಡಿದ ತಪ್ಪೇನು?

ಶೇರ್ ಮಾಡಿ

ಗಂಡ ಮಾಡಿದ ತಪ್ಪಿಗೆ ಪತ್ನಿ ಆತನ ಗುಪ್ತಾಂಗವನ್ನೇ ಕತ್ತರಿಸಿದ ಘಟನೆ ಬ್ರೆಜಿಲ್​​ನಲ್ಲಿ ನಡೆದಿದೆ. ಬಳಿಕ ತಾನು ಈ ರೀತಿ ಮಾಡಿರುವುದಕ್ಕೆ ಕಾರಣಗಳನ್ನು ತಿಳಿಸಿ ಪೊಲೀಸರ ಮುಂದೆ ಶರಣಾಗಿದ್ದಾಳೆ. 15 ವರ್ಷ ಹದಿಹರೆಯದ ತನ್ನ ಸಂಬಂಧಿ ಯುವತಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದಾನೆ ಎಂಬ ಸತ್ಯ ತಿಳಿದ ನಂತರ ಪತ್ನಿ ಆತನ ಗುಪ್ತಾಂಗವನ್ನು ಕತ್ತರಿಸಿ ಶೌಚಾಲಯಕ್ಕೆ ಹಾಕಿದ್ದಾಳೆ. ಇದಲ್ಲದೇ ಗಂಡನ ಖಾಸಗಿ ಅಂಗಗಳನ್ನು ಫ್ಲಶ್ ಮಾಡುವ ಮುನ್ನ ಫೋಟೋ ಕೂಡ ತೆಗೆದುಕೊಂಡಿದ್ದಾಳೆ.

ಮಂಚಕ್ಕೆ ಪತಿಯ ಕೈ ಕಾಲುಗಳನ್ನು ಕಟ್ಟಿ ಕೃತ್ಯ:
ತನ್ನ ರಕ್ತಸಂಬಂಧಿಯಾಗಿರುವ ಹದಿಹರೆಯದ ಯುವತಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದರಿಂದ ಕೋಪಗೊಂಡಿದ್ದ ಪತ್ನಿ ತನ್ನ ಪತಿಯನ್ನು ಪ್ರೀತಿಯಿಂದ ಲೈಂಗಿಕ ಕ್ರಿಯೆಗೆ ಕರೆದಿದ್ದಾಳೆ. ಬಳಿಕ ಆತನ ಕೈ ಕಾಲುಗಳನ್ನು ಬಲವಾಗಿ ಹಾಸಿಗೆಗೆ ಕಟ್ಟಿದ್ದಾಳೆ. ಬಳಿಕ ಚಾಕುವಿನ ಸಹಾಯದಿಂದ ಆತನ ಗುಪ್ತಾಂಗವನ್ನು ಕತ್ತರಿಸಿದ್ದಾಳೆ. ಬಳಿಕ ಕತ್ತರಿಸಿದ ಅಂಗದ ಪೋಟೋ ತೆಗೆದು ಅದನ್ನು ಶೌಚಾಲಯದಲ್ಲಿ ಹಾಕಿ ಫ್ಲಶ್​​ ಮಾಡಿದ್ದಾಳೆ. ಬಳಿಕ ಪೊಲೀಸ್ ಠಾಣೆಗೆ ತೆರಳಿ, ತಾನು ಮಾಡಿದ ಕೃತ್ಯವನ್ನು ಪೊಲೀಸರಿಗೆ ತಿಳಿಸಿ ಶರಣಾಗಿದ್ದಾಳೆ.

ಗುಪ್ತಾಂಗವನ್ನು ಟಾಯ್ಲೆಟ್​​​​ಗೆ ಎಸೆದಿದ್ದು ಏಕೆ?
ಅಂಗಾಂಗವನ್ನು ಶೌಚಾಲಯದಲ್ಲಿ ಏಕೆ ಎಸೆದಿದ್ದೀರಿ ಎಂದು ಪೊಲೀಸರು ಆಕೆಯನ್ನು ಪ್ರಶ್ನಿಸಿದಾಗ, ಅದನ್ನು ಮತ್ತೆ ಜೋಡಿಸಬಹುದು ಎಂದು ಎಲ್ಲೋ ನೋಡಿದ್ದೆ, ಅದಕ್ಕಾಗಿ ಈ ರೀತಿ ಮಾಡಿರುವುದಾಗಿ ಹೇಳಿಕೊಂಡಿದ್ದಾಳೆ.

Leave a Reply

error: Content is protected !!