ಉಜಿರೆ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಸಿರಿಧಾನ್ಯಗಳ ಆಹಾರ ಬಳಕೆಯ ಕ್ರಾಂತಿಯು ನಡೆಯುತ್ತಿದೆ. ಹಲವಾರು ರೈತರು ತಮ್ಮ ಮೂಲ ಬೆಳೆಗಳಿಗೆ ಪರ್ಯಾಯವಾಗಿ ಸಿರಿಧಾನ್ಯ ಬೆಳೆಯುವತ್ತ ಮನಸ್ಸು ಮಾಡುತ್ತಿದ್ದಾರೆ. ತನ್ಮೂಲಕ ರೈತರ ಸಬಲೀಕರಕರಣ ಸಾಧ್ಯವಾಗುತ್ತಿದೆ. ಸಾಮಾನ್ಯ ವ್ಯಕ್ತಿಗೂ ಸಹ ಸಿರಿಧಾನ್ಯಗಳ ಬಳಕೆಯ ಅರಿವು ಹೆಚ್ಚಾಗುತ್ತಿದೆ. ಒಟ್ಟಾರೆ ಇದು ಆರೋಗವರ್ಧಕವಾಗಿದ್ದು, ಔಷಧ ರೂಪದಲ್ಲಿ ಸಿರಿಧಾನ್ಯ ಆಹಾರವಾಗುತ್ತಿವೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಿರಿಧಾನ್ಯಗಳ ದ.ಕ ಜಿಲ್ಲಾ ಮಾರುಕಟ್ಟೆ ಅಧಿಕಾರಿ ಸಂದೀಪ್ ಭಟ್ ಹೇಳಿದರು.
ಇವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಜಾಗೃತಿ ಸಪ್ತಾಹದ ಅಂಗವಾಗಿ ನಡೆಯುತ್ತಿರುವ ‘ಸಿರಿಧಾನ್ಯದಿಂದ ಆರೋಗ್ಯ ಸಿರಿ’ ಎಂಬ ಸಿರಿಧಾನ್ಯ ಜಾಗೃತಿಯ ಬಗ್ಗೆ ಮಾತನಾಡಿದರು.
ನಮ್ಮ ಆಹಾರದ ಕಾಳಜಿ ನಾವೇ ಮಾಡಿಕೊಳ್ಳಬೇಕು. ಅಧಿಕ ಪೌಷ್ಠಿಕಾಂಶ ಇರುವ ಆಹಾರಕ್ರಮ ನಮ್ಮದಾಗಬೇಕಾದರೆ ಸಿರಿಧಾನ್ಯಗಳ ಬಳಕೆ ಹೆಚ್ಚು ಮಾಡಿಕೊಳ್ಳಬೇಕೆಂದು ಈ ಸಂದರ್ಭದಲ್ಲಿ ಸಲಹೆ ನೀಡಿದರು.
ರಾ. ಸೇ. ಯೋಜನಾಧಿಕಾರಿ ಡಾ.ಪ್ರಸನ್ನಕುಮಾರ ಐತಾಳ್ ಗೌರವಿಸಿದರು. ಸ್ವಯಂ ಸೇವಕ ಬೋರೇಶ್ ಸ್ವಾಗತಿಸಿದರು. ಸರಣ್ಯಾ ನಿರೂಪಿಸಿ, ವಂದಿಸಿದರು.