ಬೈಕ್ ಅಪಘಾತ; ಗ್ರಾ.ಪಂ ಸಿಬ್ಬಂದಿಗೆ ಗಾಯ

ಶೇರ್ ಮಾಡಿ

ಬೈಕ್ ಸ್ಕಿಡ್ ಆಗಿ ಉಪ್ಪಿನಂಗಡಿ ಗ್ರಾ.ಪಂ.ಸಿಬ್ಬಂದಿ ಗಾಯಗೊಂಡ ಘಟನೆ ಡಿ.31 ಮಧ್ಯರಾತ್ರಿ ನೆಕ್ಕಿಲಾಡಿಯ ಬೊಳಂತಿಲ ಬಳಿಯ ತಿರುವಿನಲ್ಲಿ ನಡೆದಿದೆ.

ಗಾಯಾಳುವನ್ನು ಲಕ್ಷ್ಮೀ ನಗರ ನಿವಾಸಿ ರಕ್ಷಿತ್ ಎಂದು ಗುರುತಿಸಲಾಗಿದೆ. ಪುತ್ತೂರು ಕಡೆಯಿಂದ ಬರುತ್ತಿದ್ದ ಇವರು ಬೈಕ್ ಸ್ಕಿಡ್ ಆಗಿ ಬಿದ್ದಿದ್ದರು. ಇದನ್ನು ಗಮನಿಸಿದ ರಾತ್ರಿ ಪಾಳಿಯಲ್ಲಿ ಗಸ್ತು ನಡೆಸುತ್ತಿದ್ದ ಉಪ್ಪಿನಂಗಡಿ ಹೈವೇ ಪಟ್ರೋಲ್ ನ ಪೊಲೀಸರ ನೆರವಿನೊಂದಿಗೆ ಪುತ್ತೂರು ಆಸ್ಪತ್ರೆಯಲ್ಲಿ ಚಿಕಿತ್ಸೆಕೊಡಿಸಲಾಯಿತು. ಸಕಾಲಕ್ಕೆ ಧಾವಿಸಿದ ಫಾರೂಕ್ ಹಾಗೂ ರಕ್ಷಿತ್ ಅವರ ಸಹೋದ್ಯೋಗಿ ಶ್ರೀನಿವಾಸ್ ಅವರು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದರು ಎಂದು ತಿಳಿದು ಬಂದಿದೆ.

Leave a Reply

error: Content is protected !!