ನೆಲ್ಯಾಡಿ ಹೆದ್ದಾರಿ ಅಭಿವೃದ್ಧಿ ಕಾರಣ ನೆಲ್ಯಾಡಿ-ಕೌಕ್ರಾಡಿ ಪೇಟೆ ಎರಡು ಭಾಗವಾಗುತ್ತಿದ್ದು ಇದರಿಂದ ಸಾರ್ವಜನಿಕರಿಗೆ,ಶಾಲಾ ಮಕ್ಕಳಿಗೆ, ಸಾರ್ವಜನಿಕರಿಗೆ ಸಾಕಷ್ಟು ತೊಂದರೆಗಳು ಉಂಟಾಗುತ್ತಿವೆ.
ಈ ಕಾರಣದಿಂದ ಈ ಪೇಟೆ ಪ್ರದೇಶಗಳಲ್ಲಿ ಮೇಲ್ಸೇತುವೆ ನಿರ್ಮಿಸಬೇಕೆಂದು ಆ ಗ್ರಹಿಸಿ ನೆಲ್ಯಾಡಿ – ಕೌಕ್ರಾಡಿ ಪೇಟೆ ಉಳಿಸಿ ಹೋರಾಟ ಸಮಿತಿ ವತಿಯಿಂದ ಮಂಗಳವಾರ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸಭಾಪತಿ ಯು.ಟಿ.ಖಾದರ್ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ ಮನವಿ ಸಲ್ಲಿಸಲಾಯಿತು.
ಹೋರಾಟ ಸಮಿತಿ ಅಧ್ಯಕ್ಷ ಎ.ಕೆ.ವರ್ಗೀಸ್, ಉಪಾಧ್ಯಕ್ಷ ಬಾಲಕೃಷ್ಣ ಬಾಣಜಾಲು,ಕಾರ್ಯದರ್ಶಿ ಪ್ರಶಾಂತ್ ಸಿ. ಎಚ್, ಜತೆ ಕಾರ್ಯದರ್ಶಿ ಉಷಾ ಅಂಚನ್, ಕೋಶಾಧಿಕಾರಿ ಸತೀಶ್. ಕೆ.ಎಸ್., ದುರ್ಗಾಶ್ರೀ, ಸದಸ್ಯರುಗಳಾದ ಪಿ.ಪಿ.ವರ್ಗೀಸ್, ಎಂ.ಕೆ.ಇಬ್ರಾಹಿಂ, ನಾಜಿಂ ಸಾಹೇಬ್, ರವಿಕುಮಾರ್ ಸುರಕ್ಷಾ,ವಿ.ಜೆ.ಜೋಸೆಫ್, ವಿಜೇಶ್ ಪಿ.ಎಸ್. ಉಪಸ್ಥಿತರಿದ್ದರು.