ಉಜಿರೆ : ಜಾಗೃತಿ ಸಪ್ತಾಹದ ಅಂಗವಾಗಿ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕರು ವಿಶೇಷ ಚೇತನ – ವಿಶಿಷ್ಠ ಚೇತನ ಎಂಬ ಜಾಗೃತಿಯ ಸಂದೇಶದೊಂದಿಗೆ ಉಜಿರೆಯ ಸಾನಿಧ್ಯ ವಿಶೇಷ ಮಕ್ಕಳ ಕೌಶಲ್ಯ ತರಬೇತಿ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕುವುದರೊಂದಿಗೆ ವಿವಿಧ ಕಾರ್ಯಕ್ರಮಗಳನ್ನು ಸಂಘಟಿಸಿದರು.
ಕೇಂದ್ರದ ಮೇಲ್ವಿಚಾರಕಿ ಮಲ್ಲಿಕಾ ಹಾಗೂ ಸಿಬಂದಿಯವರು ಕೇಂದ್ರದ ಹಾಗೂ ಅಲ್ಲಿನ ಮಕ್ಕಳ ವಿಶೇಷತೆ ಬಗ್ಗೆ ಮಾಹಿತಿ ನೀಡಿದರು.
ರಾ.ಸೇ.ಯೋಜನೆಯ ಯೋಜನಾಧಿಕಾರಿ ಡಾ.ಪ್ರಸನ್ನಕುಮಾರ ಐತಾಳ್ ನೇತೃತ್ವದಲ್ಲಿ ಘಟಕದ ನಾಯಕರಾದ ಸುದರ್ಶನ ನಾಯಕ್ ಹಾಗೂ ದಕ್ಷಾ ಕಾರ್ಯಕ್ರಮ ಸಂಘಟಿಸಿದರು.
ಡಯಾನಾ ಸ್ವಾಗತಿಸಿ, ಭೂಮಿಕಾ ವಂದಿಸಿದರು.ಅಕ್ಷತಾ ಎಂ ಜಿ ನಿರೂಪಿಸಿದರು.