ಕಡಬ ತಾಲ್ಲೂಕು ಕಲ್ಲುಗುಡ್ಡೆ ಶಾಂತಿಗುರಿ ನಿವಾಸಿ ಸುಮಾರು 75 ವರ್ಷ ಪ್ರಾಯದ ಬಾಬು ಗೌಡರು ಎಂಬ ಹಿರಿಯ ನಾಗರಿಕರು 06/01/2024, ರಂದು ಖಾಸಗಿ ಕಾರ್ಯಕ್ರಮಕ್ಕೆ ಕಲ್ಲುಗುಡ್ಡೆ ಯಿಂದ ಕಾಂಚನ ಎಂಬಲ್ಲಿಗೆ ತೆರಳಲು ಕಲ್ಲುಗುಡ್ಡೆ ಎಂಬಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ ಹತ್ತಿದ್ದಾರೆ. ಬೆಳಿಗ್ಗೆ ಒಂಬತ್ತು ಗಂಟೆಗೆ ಕಲ್ಲುಗುಡ್ಡೆ ಯಿಂದ ಹೊರಡುವ ಬಸ್ ಸಂಖ್ಯೆ KA19F3044 ಇದರ ನಿರ್ವಾಹಕರು ಟಿಕೆಟ್ ಗೆ ದುಡ್ಡು ಕೇಳುವಾಗ 200ರೂ ನೀಡಿದ್ದಾರೆ ಈ ಸಂದರ್ಭದಲ್ಲಿ ಚಿಲ್ಲರೆ ಇಲ್ಲ ಎಂಬ ಕಾರಣಕ್ಕೆ ನಿರ್ವಾಹಕ ಹಿರಿಯ ನಾಗರಿಕರಾದ ಬಾಬು ಗೌಡ ಅವರನ್ನು ಕಲ್ಲುಗುಡ್ಡೆ ಯಿಂದ ಎರಡು ಕಿ.ಮೀ ದೂರದಲ್ಲಿ ಗೋಳಿಯಡ್ಕ ಎಂಬಲ್ಲಿ ಬಲವಂತವಾಗಿ ಇಳಿಸಿ ಹಿರಿಯರಿಗೆ ಅಗೌರವ ತೋರಿದ್ದಾರೆ.
ನಾವು ಇಲ್ಲಿ ಹೇಳಬೇಕದಾ ಇನ್ನೊಂದು ಬಹು ಮುಖ್ಯ ವಿಚಾರ ನಮ್ಮ ದೇಶಕಾಯುವ ಯೋಧರೊಬ್ಬರ ತಂದೆಯವರು, ಅದೂ ಅಲ್ಲದೆ ಸುಮಾರು 75 ವರ್ಷ ಅವರಿಗೆ ಪ್ರಾಯ ಆಗಿದೆ ಎಂದು ತಿಳಿದು ಬಂದಿದೆ.
ನಿರ್ವಹಕನ ಈ ನಡೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಾಕ ಆಕ್ರೋಶ ವ್ಯಕ್ತವಾಗಿದೆ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಬಾಬು ಗೌಡ ಅವರು ಮಾತನಾಡಿದ ವಿಡಿಯೋ ಒಂದು ವೈರಲ್ ಆಗಿದೆ.
ಇಲಾಖೆ ಈ ಬಗ್ಗೆ ಗಮನಹರಿಸಿ ನಿರ್ವಾಹಕನ ಮೇಲೆ ಕ್ರಮ ಕೈಗೊಳ್ಳಬೇಕು ಹಾಗೂ ಇನ್ನು ಮುಂದೆ ಈ ರೀತಿ ನಡೆಯದಂತೆ ಜಾಗ್ರತೆ ವಹಿಸಬೇಕು ಎಂದು ಚಂದ್ರಶೇಖರ ಕುರಿಯಾಳ ಕೊಪ್ಪ, ಹಾಗೂ ಸಾಮಾಜಿಕ ಕಾರ್ಯಕರ್ತ ಮಹೇಶ್ ಕಡಬ ಅವರು ಅಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಸಚಿವರು ಈ ಬಗ್ಗೆ ವಿಶೇಷವಾದ ಗಮನವನ್ನು ಹರಿಸುವುದರೊಂದಿಗೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದೆಂದು ತಿಳಿಸಿದರು
ಹೋರಾಟ ಸಮಿತಿ ಅಧ್ಯಕ್ಷ ಎ.ಕೆ.ವರ್ಗೀಸ್, ಉಪಾಧ್ಯಕ್ಷ ಬಾಲಕೃಷ್ಣ ಬಾಣಜಾಲು, ಕಾರ್ಯದರ್ಶಿ ಪ್ರಶಾಂತ್ ಸಿ.ಎಚ್, ಜತೆ ಕಾರ್ಯದರ್ಶಿ ಉಷಾ ಅಂಚನ್, ಕೋಶಾಧಿಕಾರಿ ಸತೀಶ್.ಕೆ.ಎಸ್., ದುರ್ಗಾಶ್ರೀ, ಸದಸ್ಯರುಗಳಾದ ಪಿ.ಪಿ.ವರ್ಗೀಸ್, ಎಂ.ಕೆ., ಇಬ್ರಾಹಿಂ, ನಾಜಿಂ ಸಾಹೇಬ್, ರವಿಕುಮಾರ್ ಸುರಕ್ಷಾ, ವಿ.ಜೆ. ಜೋಸೆಫ್, ವಿಜೇಶ್ ಪಿ.ಎಸ್. ಉಪಸ್ಥಿತರಿದ್ದರು.