ಕೊಕ್ಕಡ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರಕ್ತದಾನ ಶಿಬಿರ

ಶೇರ್ ಮಾಡಿ

ಕೊಕ್ಕಡ: ಸಾವು ಬದುಕಿನ ಮಧ್ಯೆ ಹೋರಾಟ ನಡೆಸುವವರನ್ನು ಬದುಕಿಸಲು ರಕ್ತದಾನ ಮಾಡುವುದು ಸಮಾಜಮುಖಿ ಕಾರ್ಯಗಳಲ್ಲಿ ಒಂದು. ರಕ್ತದಾನ ಮಹಾದಾನ, ಒಂದು ಹನಿರಕ್ತ ಅಮೂಲ್ಯ ಜೀವದ ಉಳಿಯುವಿಕೆಗೆ ನೆರವಾಗಲಿದೆ. ರಕ್ತದಾನ ಮಾಡಬೇಕಾದರೆ ಗಂಡು ಹೆಣ್ಣು ಭೇದವಿಲ್ಲದೆ ರಕ್ತದಾನ ಮಾಡಬಹುದು. ರಕ್ತದಾನ ಮಾಡುವುದರಿಂದ ನಮ್ಮ ದೇಹದಲ್ಲಿ ಹೊಸ ರಕ್ತದ ಸಂಚಲನವಾಗುತ್ತದೆ. ಅದರೊಂದಿಗೆ ಉತ್ತಮ ಆರೋಗ್ಯವಂತರಾಗಿದ್ದು ಧೈರ್ಯವಂತರಾಗಿರಬೇಕೆಂದು ಕೊಕ್ಕಡ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ತುಷಾರ ಕುಮಾರಿ ಹೇಳಿದರು.

ಇವರು ಇನ್ಸಸೈರ್ ಸ್ಪೋರ್ಟ್ಸ್ ಕ್ಲಬ್ ಕೊಕ್ಕಡ, ಸಮುದಾಯ ಆರೋಗ್ಯ ಕೇಂದ್ರ ಕೊಕ್ಕಡ, ವೆನ್ಲಾಕ್ ಆಸ್ಪತ್ರೆ ಮಂಗಳೂರು ಇದರ ಸಹಭಾಗಿತ್ವದಲ್ಲಿ ಜ.7 ರಂದು ಕೊಕ್ಕಡ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.

ಅಧ್ಯಕ್ಷತೆಯನ್ನು ಇನ್ಸಸೈರ್ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷರಾದ ಮುನೀರ್ ಎಂ.ಎಚ್., ವಹಿಸಿದರು. ವೇದಿಕೆಯಲ್ಲಿ ಬದ್ರಿಯಾ ಜುಮಾ ಮಸೀದಿಯ ಖತೀಬ್ ಅಬ್ದುಲ್ ಸಮ್ಮದ್ ಬಖಾವಿ, ಕೊಕ್ಕಡ ಬದ್ರಿಯ ಜುಮಾ ಮಸೀದಿಯ ಅಧ್ಯಕ್ಷರಾದ ಹೈದರ್ ಎಂ. ಎಸ್., ಮಂಗಳೂರು ವೆನ್ಲಾಕ್ ಆಸ್ಪತ್ರೆ ಬ್ಲಡ್ ಬ್ಯಾಂಕ್ ನ ಕಾರ್ಯನಿರ್ವಹಣಾಧಿಕಾರಿ ಅಶೋಕ್ ಉಪಸ್ಥಿತರಿದ್ದರು.

ಜುಬೇರ್ ಕೊಕ್ಕಡ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು, ಅನ್ಸರ್ ಕೊಕ್ಕಡ ವಂದಿಸಿದರು.
ಸುಮಾರು 30 ಯುನಿಟ್ ರಕ್ತವನ್ನು ಸಂಗ್ರಹಿಸಲಾಯಿತು.

Leave a Reply

error: Content is protected !!