ಸೌತಡ್ಕ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ಗೆ ದಾಮೋದರ ಶೆಟ್ಟಿ ನೂಜೆ ರಾಜೀನಾಮೆ

ಶೇರ್ ಮಾಡಿ

ಸುಮಾರು 25 ವರ್ಷಗಳಿಂದ ಕ್ಷೇತ್ರದ ಅಭಿವೃದ್ಧಿಗಾಗಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸಿದ ದಾಮೋದರ ಶೆಟ್ಟಿ

ನೆಲ್ಯಾಡಿ: ಸೌತಡ್ಕ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ನ ಟ್ರಸ್ಟಿ ಸ್ಥಾನಕ್ಕೆ ನೂಜೆ ದಾಮೋದರ ಶೆಟ್ಟಿ ಅವರು ರಾಜೀನಾಮೆ ನೀಡಿದ್ದಾರೆ.

ರಾಜೀನಾಮೆ ಪತ್ರವನ್ನು ಅವರು ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ನ ಅಧ್ಯಕ್ಷರಿಗೆ ಸಲ್ಲಿಸಿದ್ದಾರೆ. ಶ್ರೀ ಕ್ಷೇತ್ರ ಸೌತಡ್ಕದ ವ್ಯವಸ್ಥಾಪನಾ ಸಮಿತಿ ಸದಸ್ಯನಾಗಿ ಸುಮಾರು 25 ವರ್ಷಗಳಿಂದ ಕ್ಷೇತ್ರದ ಅಭಿವೃದ್ಧಿಗೆ ನಿಸ್ವಾರ್ಥವಾಗಿ ಹಾಗೂ ಕಪ್ಪುಚುಕ್ಕೆ ಇಲ್ಲದಂತೆ ಸೇವೆ ಸಲ್ಲಿಸಿದ್ದೇನೆ. ಶ್ರೀ ಗಣಪತಿ ದೇವರ ಪ್ರತಿಷ್ಠಾ ದಿವಸ ಪ್ರತಿವರ್ಷ ಕಟೀಲು ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯ ಯಕ್ಷಗಾನ ಬಯಲಾಟವನ್ನು ಆಡಿಸಬೇಕೆಂಬ ದೇವಳದ ನೌಕರರ, ಭಕ್ತಾದಿಗಳ ಕೋರಿಕೆಯ ಮೇರೆಗೆ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಸೇವಾ ಟ್ರಸ್ಟ್(ರಿ.)ಎಂಬ ಸಂಸ್ಥೆಯನ್ನು ಹುಟ್ಟುಹಾಕಿ ಸದಸ್ಯರಿಂದ ತಲಾ ರೂ.2000 ಠೇವಣಿ ಸಂಗ್ರಹ ಮಾಡಲಾಗಿದೆ. ಕಳೆದ 11 ವರ್ಷಗಳಿಂದ ದೇವರ ಸಮ್ಮುಖದಲ್ಲಿ ಬಯಲಾಟ ನಡೆಯುತ್ತಿದೆ. ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಸೇವಾ ಟ್ರಸ್ಟ್ ರಚನೆಯಾದಾಗದಿಂದಲೂ ಈ ಟ್ರಸ್ಟ್ ನ ಅಧ್ಯಕ್ಷನಾಗಿ ದುಡಿಯುತ್ತಿದ್ದೇನೆ. ಪ್ರತಿ ವರ್ಷ ಈ ಟ್ರಸ್ಟ್‍ಗೆ ತಮ್ಮ ಮಹಾಗಣಪತಿ ಸೇವಾ ಟ್ರಸ್ಟ್‍ನಿಂದ ಸಹಾಯಧನವಾಗಿ ರೂ.25.000 ಕೊಡುತ್ತಾ ಬರಲಾಗುತ್ತಿದೆ. ಪ್ರಕೃತ 2 ವರ್ಷ ಈ ಬಯಲಾಟ ಸಮಿತಿಗೆ ಮಹಾಗಣಪತಿ ಸವಾ ಟ್ರಸ್ಟಿನಿಂದ ಕೊಡುವ 25 ಸಾವಿರ ವನ್ನು ಒಬ್ಬ ಟ್ರಸ್ಟಿಯ ಒತ್ತಡಕ್ಕೆ ಮಣಿದು ನಿಲ್ಲಿಸಲಾಗಿದೆ. ದೇವಳದ ಅಭಿವೃದ್ಧಿಗೆ ಹಾಗೂ ಕೆಲಸ ಕಾರ್ಯಗಳಿಗೆ ಪೂರಕವಾಗಿ ರಚಿತವಾದ ಮಹಾಗಣಪತಿ ಸೇವಾ ಟ್ರಸ್ಟ್ ದೇವಳದಲ್ಲಿ ನಡೆಯುವ ಚಟುವಟಿಕೆಗಳಿಗೆ ಪ್ರೋತ್ಸಾಹವನ್ನು ನೀಡದೆ ಪರವೂರ ಸಂಘ ಸಂಸ್ಥೆಗಳ ಚಟುವಟಿಕೆಗಳಿಗೆ ಹೆಚ್ಚು ಪ್ರೋತ್ಸಾಹ ನೀಡುವುದು ಮನಸ್ಸಿಗೆ ಬೇಸರವನ್ನುಂಟು ಮಾಡಿದೆ. ಈ ಕಾರಣದಿಂದ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್‍ನ ಟ್ರಸ್ಟಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ. ಈ ರಾಜೀನಾಮೆ ಅಂಗೀಕರಿಸಿ ಶ್ರೀ ಮಹಾಗಣಪತಿ ಸೇವಾ ಟ್ರಸ್ ಸದಸ್ಯತ್ವದಿಂದ ನನ್ನನ್ನು ಬಿಡುಗಡೆಗೊಳಿಸುವಂತೆ ಅವರು ರಾಜೀನಾಮೆ ಪ್ರತದಲ್ಲಿ ವಿನಂತಿಸಿದ್ದಾರೆ.

Leave a Reply

error: Content is protected !!