ಪಟ್ಟೂರಿನಲ್ಲಿ ಕೃಷಿ ತೋಟಕ್ಕೆ ಕಾಡಾನೆ ದಾಳಿ

ಶೇರ್ ಮಾಡಿ

ಕೊಕ್ಕಡ: ಬೆಳ್ತಂಗಡಿ ತಾಲೂಕಿನ ಪಟ್ರಮೆ ಗ್ರಾಮದ ಪಟ್ಟೂರುನ ಕೊಡೆಂಚಡ್ಕ ಸಮೀಪ ಜ.11ರಂದು ರಾತ್ರಿ ಕೃಷಿ ತೋಟಕ್ಕೆ ಆನೆ ದಾಳಿ ಮಾಡಿದೆ.

ಇಲ್ಲಿನ ಕೊಡೆಂಚಡ್ಕ ನಿವಾಸಿ ಕಿರಣ್ ಬಲ್ಯಾಯ ಹಾಗೂ ರಾಜು ರೈ ಎಂಬವರ ಕೃಷಿ ತೋಟಕ್ಕೆ ರಾತ್ರಿ ವೇಳೆ ನುಗ್ಗಿದ ಕಾಡಾನೆ ತೋಟದಲ್ಲಿದ್ದ ಅಡಿಕೆ ಮರ, ತೆಂಗಿನ ಮರ ಹಾಗೂ ಬಾಳೆ ಕೃಷಿಯನ್ನು ಅಪಾರ ಪ್ರಮಾಣದಲ್ಲಿ ಹಾನಿಗೊಳಿಸಿರುವುದರಿಂದ ಕೃಷಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಆನೆ ದಾಳಿ ತಡೆಯುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Leave a Reply

error: Content is protected !!