ಮುಂಡಾಜೆ ಪ.ಪೂ. ಕಾಲೇಜು – ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮ:

ಶೇರ್ ಮಾಡಿ

ದಿನಾಂಕ 11-01-2024ರಿಂದ 17-01-2024ರ ವರೆಗೆ ದೇಶದಾದ್ಯಂತ ನಡೆಯುತ್ತಿರುವ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ 2024 ರ ಅಂಗವಾಗಿ ಮುಂಡಾಜೆ ಪದವಿ ಪೂರ್ವ ಕಾಲೇಜು, ಮುಂಡಾಜೆ ಇಲ್ಲಿನ ರೋವರ್ಸ್ & ರೇಂಜರ್ಸ್ ವಿಭಾಗದ ವತಿಯಿಂದ ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯ ASI ಹರಿಪ್ರಸಾದ್ ಇವರು ರಸ್ತೆ ಸುರಕ್ಷತೆಯ ಪಾಲನೆ ಹಾಗೂ ಸಂಚಾರಿ ನಿಯಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ವಿವರವಾಗಿ ತಿಳಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಜಾಲಿ ಓ ಎ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ವಿವೇಕಾನಂದ ಶಿಕ್ಷಣ ಸಂಸ್ಥೆಗಳು ಮುಂಡಾಜೆಯ ಸಂಚಾಲಕರಾದ ನಾರಾಯಣ ಗೌಡ ಕೊಳಂಬೆ, ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಸುನಿಲ್, ರೇಂಜರ್ ಲೀಡರ್ ವಸಂತಿ, ರೋವರ್ ಸ್ಕೌಟ್ ಲೀಡರ್ ಕೃಷ್ಣ ಕಿರಣ್ ಕೆ ಉಪಸ್ಥಿತರಿದ್ದರು.

ರೇಂಜರ್ ವಿದ್ಯಾರ್ಥಿನಿಯರಾದ ಮಧುಶ್ರೀ ಸ್ವಾಗತಿಸಿ, ಸಂಪದಾ ಕಾರ್ಯಕ್ರಮವನ್ನು ನಿರೂಪಿಸಿ, ಶ್ರಾವ್ಯ ಧನ್ಯವಾದಗೈದರು.

Leave a Reply

error: Content is protected !!