ಪಡುಬೆಟ್ಟು 33 ಕೆವಿ ವಿದ್ಯುತ್ ಪರಿವರ್ತಕ ಉದ್ಘಾಟನೆ, ಸನ್ಮಾನ ಕಾರ್ಯಕ್ರಮ.

ಶೇರ್ ಮಾಡಿ

ನೇಸರ ಫೆ.07: ನೆಲ್ಯಾಡಿ ಗ್ರಾಮದ ಪಡುಬೆಟ್ಟು ಬೀದಿಮಜಲು ಎಂಬಲ್ಲಿ ಮೆಸ್ಕಾಂ ವತಿಯಿಂದ ನೂತನವಾಗಿ ಕೃಷಿಕರ ಅನುಕೂಲಕ್ಕಾಗಿ 33 ಕೆವಿ ವಿದ್ಯುತ್ ಪರಿವರ್ತಕವನ್ನು ಉದ್ಘಾಟಿಸಲಾಯಿತು.

ನೆಲ್ಯಾಡಿ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷ ಗಂಗಾಧರ ಶೆಟ್ಟಿ ಹೊಸಮನೆ ನೂತನ ಪರಿವರ್ತಕವನ್ನು ತೆಂಗಿನಕಾಯಿ ಒಡೆಯುವ ಮೂಲಕ ಉದ್ಘಾಟಿಸಿದರು, ಬಳಿಕ ಮಾತನಾಡಿ ಮೆಸ್ಕಾಂ ಇಲಾಖೆಯು ಜನಸಾಮಾನ್ಯರ ಮತ್ತು ಕೃಷಿಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ ಬಹುತೇಕ ವಿದ್ಯುತ್ ಸಮಸ್ಯೆಯನ್ನು ನೀಗಿಸಿದೆ. ಜನಮೆಚ್ಚಿದ ಅಧಿಕಾರಿಗಳಾದ ಕಡಬ ಮೆಸ್ಕಾಂನ ಅಸಿಸ್ಟೆಂಟ್ ಇಂಜಿನಿಯರ್ ಸಜಿಕುಮಾರ್ ಮತ್ತು ನೆಲ್ಯಾಡಿ ಮೆಸ್ಕಾಂನ ಜೂನಿಯರ್ ಇಂಜಿನಿಯರ್ ರಮೇಶ್ ರವರ ಕಾರ್ಯದಕ್ಷತೆಯಿಂದ ಮೆಸ್ಕಾಂ ಇಲಾಖೆಯ ಗೌರವ ಹೆಚ್ಚಾಗಿದೆ.ಈ ಇಬ್ಬರು ಅಧಿಕಾರಿಗಳಿಗೆ ಮತ್ತು ಎಲ್ಲಾ ಸಿಬ್ಬಂದಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದರು
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಜೂನಿಯರ್ ಇಂಜಿನಿಯರ್ ರಮೇಶ ರವರನ್ನು ಗ್ರಾಮಸ್ಥರ ವತಿಯಿಂದ ಸನ್ಮಾನಿಸಿ,ಬಳಿಕ ಮಾತನಾಡಿದ ನೆಲ್ಯಾಡಿ ತಾಲೂಕು ಪಂಚಾಯತ್ ನ ಮಾಜಿ ಸದಸ್ಯೆ ಶ್ರೀಮತಿ ಉಷಾ ಅಂಚನ್ ಅವರು ತನ್ನ ಕರ್ತವ್ಯವನ್ನು ಪ್ರಾಮಾಣಿಕತೆ ಮತ್ತು ನಿಷ್ಠೆಯಿಂದ ಮಾಡಿದಾಗ ದೇವರ ಆಶೀರ್ವಾದ ಗ್ರಾಮಸ್ಥರ ಮೂಲಕ ಸಲ್ಲುತ್ತದೆ. ಇಲಾಖೆಗಳಿಗೆ ಅಧಿಕಾರಿಗಳು ಬರುತ್ತಾರೆ ಆದರೆ ಜನರ ನೆನಪಲ್ಲಿ ಶಾಶ್ವತವಾಗಿ ಉಳಿಯುವ ಅಂತವರು ಬೆರಳೆಣಿಕೆಯಲ್ಲಿ ಕಾಣಬಹುದು, ದಕ್ಷ ಅಧಿಕಾರಿಯಾಗಿ ತಾಳ್ಮೆಯಿಂದ ಪ್ರೀತಿಯಿಂದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಇವರ ಸೇವೆ ಮೆಚ್ಚುವಂತದ್ದು ಎಂದು ನುಡಿದರು.ನೆಲ್ಯಾಡಿ ಗ್ರಾಮ ಪಂಚಾಯತ್ ಸದಸ್ಯರಾದ ಸಲಾಂ ಪಡುಬೆಟ್ಟು,ಶ್ರೀಮತಿ ಜಯಲಕ್ಷ್ಮಿ,ಶ್ರೀಮತಿ ಪುಷ್ಪ,ಪಿಡಬ್ಲ್ಯುಡಿ ಗುತ್ತಿಗೆದಾರ ಶಿವಪ್ರಕಾಶ್ ಬೀದಿಮಜಲು,ಹಿರಿಯ ರಾಜಕೀಯ ಮುಖಂಡ ಚಂದ್ರಶೇಖರ,ಮಹಮ್ಮದ್ ಮುಸ್ಲಿಯಾರ್,ಶ್ರೀಮತಿ ಸುಮಲತಾ, ಮೆಸ್ಕಾಂನ ಸಿಬ್ಬಂದಿಗಳಾದ ರಮೇಶ್,ವಿಠಲ ಹಾಗೂ ಅನೇಕ ಕೃಷಿಕ ಬಂಧುಗಳು ಭಾಗವಹಿಸಿದರು.ನೆಲ್ಯಾಡಿ ಗ್ರಾಮ ಪಂಚಾಯತ್ ಸದಸ್ಯ ಸಲಾಂ ಪಡುಬೆಟ್ಟು ವಂದಿಸಿದರು

Leave a Reply

error: Content is protected !!