ಎರಡು ಮಕ್ಕಳನ್ನ ಬೆನ್ನಿಗೆ ಕಟ್ಟಿಕೊಂಡು ಬಾವಿಗೆ ಹಾರಿದ ಮಹಿಳೆ!

ಶೇರ್ ಮಾಡಿ

ಇಬ್ಬರು ಮಕ್ಕಳೊಂದಿಗೆ ತಾಯಿ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಸುಲ್ತಾನಪುರ ಗ್ರಾಮದಲ್ಲಿ ನಡೆದಿದೆ. ತಾಯಿ ಸರಸ್ವತಿ ಕಿರವೆ(27), ದೀಪಿಕಾ(7), ರೀತಿಕಾ(4) ಮೃತರು.ತಾಯಿ ಸರಸ್ವತಿ ಎರಡು ಮಕ್ಕಳನ್ನ ಬೆನ್ನಿಗೆ ಕಟ್ಟಿಕೊಂಡು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

2016ರಲ್ಲಿ ಸಾಂಗ್ಲಿಯ ನಿತಿನ್ ಕಿರವೆ ಜೊತೆ ಮದುವೆ ಆಗಿತ್ತು. ಆದ್ರೆ, ಗಂಡನ ಕಿರುಕುಳ ತಾಳಲಾರದೆ ಸರಸ್ವತಿ ತವರು ಮನೆ ಸೇರಿದ್ದಳು. ಆದರೂ ಸಹ ಕೌಟುಂಬಿಕ ಸಮಸ್ಯೆಗಳಿಂದ ತೊಂದರೆ ಅನುಭವಿಸುತ್ತಿದ್ದ ಆಕೆ ಕೊನೆಗೆ ಸಾವೇ ದಾರಿಯೆಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು. ಬಳಿಕ ಸೂಚನೆ ಮೇರೆಗೆ ಸ್ಥಳೀಯರು ಮೂರು ಮೃತದೇಹಗಳನ್ನು ಬಾವಿಯಿಂದ ಹೊರ ತೆಗೆದಿದ್ದಾರೆ. ಈ ಬಗ್ಗೆ ಹಾರೂಗೇರಿ ಪೊಲೀಸರ ಭೇಟಿ ನೀಡಿ ಪ್ರಕರಣ ದಾಖಲು ಮಾಡಿಕೊಂಡಿದ್ದು, ಪೊಲೀಸರು ಮೃತ ಕುಟುಂಬಸ್ಥರ ವಿಚಾರಣೆ ನಡೆಸಿದ್ದಾರೆ.

Leave a Reply

error: Content is protected !!