ಉಜಿರೆ:ಸರಣಿ ಅಪಘಾತ

ಶೇರ್ ಮಾಡಿ

ಬೈಕ್ ಸವಾರನ ಪ್ರಾಣ ಉಳಿಸಲು ಬಸ್ ಚಾಲಕ ಹಠಾತ್ ಬ್ರೇಕ್ ಹಾಕಿದ ಪರಿಣಾಮ ಉಜಿರೆಯಲ್ಲಿ ಸರಣಿ ಅಪಘಾತ ಸಂಭವಿಸಿದ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.

ಉಜಿರೆ-ಬೆಳ್ತಂಗಡಿ ರಸ್ತೆಯ ಪೆಟ್ರೋಲ್ ಪಂಪ್ ಬಳಿ ಸರಕಾರಿ ಬಸ್ಸಿಗೆ ಮುಂಭಾಗದಿಂದ ಬೈಕ್ ಸವಾರ ಏಕಾಏಕಿ ಅಡ್ಡ ಬಂದ ರಭಸಕ್ಕೆ ಬಸ್ ಚಾಲಕ ಬ್ರೇಕ್ ಹಾಕಿದ್ದು ಈ ವೇಳೆ ಹಿಂಬದಿಯಿಂದ ಸಂಚರಿಸುತ್ತಿದ್ದ ಮಿನಿ ಬಸ್ ಸರಕಾರಿ ಬಸ್ ಗೆ ಡಿಕ್ಕಿ ಹೊಡೆಯಿತು. ಮಿನಿ ಬಸ್ ನ ಹಿಂಭಾಗ ಬರುತ್ತಿದ್ದ ಪಿಕಪ್ ವಾಹನವು ಮಿನಿ ಬಸ್ ಗೆ ಡಿಕ್ಕಿ ಹೊಡೆಯಿತು. ಅಪಘಾತದಲ್ಲಿ ಯಾರಿಗೂ ಹೆಚ್ಚಿನ ಗಾಯಗಳಾಗಿಲ್ಲ. ಮೂರು ವಾಹನಗಳು ಜಖಂ ಗೊಂಡಿವೆ.
ಘಟನೆಯಿಂದ ಕೆಲ ಹೊತ್ತು ಟ್ರಾಫಿಕ್ ಜಾಮ್ ಉಂಟಾಯಿತು.

ಸಂಚಾರಿ ಪೊಲೀಸರು ಹಾಗೂ ಸ್ಥಳೀಯರು ಸುಗಮ ಸಂಚಾರಕ್ಕೆ ಸಹಕಾರ ನೀಡಿದರು.

Leave a Reply

error: Content is protected !!