ಜ.21 ಸೌಹಾರ್ದ ಸಮಿತಿ ವತಿಯಿಂದ ಪಡುಬೆಟ್ಟಿನಲ್ಲಿ ಕ್ರಿಕೆಟ್ ಹಬ್ಬ

ಶೇರ್ ಮಾಡಿ

ನೆಲ್ಯಾಡಿ : ನೆಲ್ಯಾಡಿ ಗ್ರಾಮಕ್ಕೆ ಒಳಪಟ್ಟ ಪಡುಬೆಟ್ಟು ಫ್ರೌಡಶಾಲಾ ಮೈದಾನದಲ್ಲಿ ಜನವರಿ 21 ಆದಿತ್ಯವಾರ ಸೌಹಾರ್ದ ಸಮಿತಿ ವತಿಯಿಂದ ಪಡುಬೆಟ್ಟು ಪ್ರೀಮಿಯರ್ ಲೀಗ್ ಸೀಸನ್ 06 ಹಾಗು ವಿಶೇಷ ಆಕರ್ಷಣೆಯಾಗಿ 35 ವರ್ಷ ಮೇಲ್ಪಟ್ಟವರ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಕೂಟ ಲೆಜೆಂಡ್ಸ್ ಕಪ್ 2024 ನಡೆಯಲಿದೆ.

ಪಡುಬೆಟ್ಟು ಪ್ರೀಮಿಯರ್ ಲೀಗ್ ಸೀಸನ್ 06 ರಲ್ಲಿ 6 ತಂಡಗಳು ಭಾಗವಹಿಸಲಿದೆ. ವಿಶೇಷ ಆಕರ್ಷಣೆಯಾಗಿರುವ ಲೆಜೆಂಡ್ಸ್ ಕಪ್ ನಲ್ಲಿ ನೆಲ್ಯಾಡಿ ಗ್ರಾ.ಪಂ. ಅಧ್ಯಕ್ಷರಾಗಿರುವ ಸಲಾಂ ಬಿಲಾಲ್ ನೇತೃತ್ವದ ಬಿಲಾಲ್ ವಾರಿಯರ್ಸ್, ಪಂಚಾಯತ್ ಸದಸ್ಯರಾಗಿರುವ ರವಿಪ್ರಸಾದ್ ಶೆಟ್ಟಿ ನೇತೃತ್ವದ ಪ್ರಗತಿ ಕ್ರಿಕೆಟರ್ಸ್, ಮುಖ್ಯಮಂತ್ರಿ ಪದಕ ಪಡೆದ ಪೋಲಿಸ್ ಇಸಾಕ್ ನೇತೃತ್ವದ 90 ವಾರಿಯರ್ಸ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಸುಬ್ರಹ್ಮಣ್ಯ ವಲಯ ಅರಣ್ಯ ಇಲಾಖೆಯ ರವಿಚಂದ್ರ ನೇತೃತ್ವದ ಲೆಜೆಂಡ್ಸ್ ಟೈಗರ್ಸ್ ತಂಡಗಳು ಪಂದ್ಯಾಕೂಟದಲ್ಲಿ ಭಾಗವಹಿಸಲಿದೆ.

ಬೆಳಿಗ್ಗೆ 8:30 ಗಂಟೆಗೆ ಕ್ರೀಡಾಂಗಣ ಉದ್ಘಾಟನೆಯನ್ನು ಹಿರಿಯ ಆಟಗಾರ ಹನೀಫ್ ಝಂಝಂ ನೆರವೇರಿಸಲಿದ್ದಾರೆ. 10 ಗಂಟೆಗೆ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಹಿರಿಯ ಆಟಗಾರ ಗೋಪಾಲಕೃಷ್ಣ ಮಕ್ಕಿಗದ್ದೆ ಅಧ್ಯಕ್ಷತೆ ವಹಿಸಲಿದ್ದು, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತರು ಮಾಜಿ ಗ್ರಾ.ಪಂ. ಅಧ್ಯಕ್ಷರಾದ ಗಂಗಾಧರ ಶೆಟ್ಟಿಯವರು ಪ್ರಶಸ್ತಿ ಫಲಕವನ್ನು ಅನಾವರಣಗೊಳಿಸಲಿದ್ದಾರೆ. ಅಲ್ಲದೆ ಮುಖ್ಯ ಅತಿಥಿಗಳಾಗಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರವಿಚಂದ್ರ ಪಡುಬೆಟ್ಟು, ಕೌಕ್ರಾಡಿ ಗ್ರಾ. ಪಂ. ಅಧ್ಯಕ್ಷರಾದ ಲೋಕೇಶ್ ಬಾಣಜಾಲ್, ನಿವೃತ್ತ BSNL ಉದ್ಯೋಗಿ ಡಾಕಯ್ಯ, ಪಂಚಾಯತ್ ಸದಸ್ಯರಾದ ಪ್ರಕಾಶ್ ರಾಮನಗರ, ಪುಷ್ಪ ಪಡುಬೆಟ್ಟು, ಜಯಲಕ್ಮೀ ಪಡುಬೆಟ್ಟು, ಪ್ರೌಢಶಾಲಾ ದೈಹಿಕ ಶಿಕ್ಷಕರಾದ ಕುಶಾಲಪ್ಪ ಜಿ, ಶಿವಪ್ರಸಾದ್ ದುಗ್ಗಲ, ಶರೀಫ್ ತಾಜ್, ದಾವೂದ್ ಬಿಲಾಲ್, ಧನಂಜಯ, ಕೆಪಿ ಆನಂದ ರವರು ಭಾಗವಹಿಸಲಿದ್ದಾರೆ.

ಸಂಜೆ 5 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ನೆಲ್ಯಾಡಿ ಗ್ರಾ.ಪಂ. ಅಧ್ಯಕ್ಷರಾದ ಸಲಾಂ ಬಿಲಾಲ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಯುವ ಕಾಂಗ್ರೆಸ್ ಮುಖಂಡರಾದ ಪ್ರಹ್ಲಾದ್ ಬೆಳ್ಳಿಪ್ಪಾಡಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಬಾಲಕೃಷ್ಣ ಬಾಣಜಾಲ್, ಕರಾಯ ಶಾಲೆಯ ಮುಖ್ಯೋಪಾಧ್ಯಾಯ ಮಹಾಲಿಂಗ ಕೆ, ಇಸಾಕ್ ಮಂಗಳೂರು, ಪ್ರೌಢಶಾಲಾ ಎಸ್ಡಿಎಂಸಿ ಅಧ್ಯಕ್ಷರಾದ ಗುಡ್ಡಪ್ಪ ಗೌಡ, ಪ್ರೈಮರಿ ಎಸ್ಡಿಎಂಸಿ ಅಧ್ಯಕ್ಷರಾದ ಶಿವಪ್ರಸಾದ್, ಪಂಚಾಯತ್ ಸದಸ್ಯರಾದ ರವಿಪ್ರಸಾದ್ ಶೆಟ್ಟಿ, ಕರ್ನಾಟಕ ಮಾನವ ಹಕ್ಕುಗಳ ಜನಜಾಗೃತಿ ವೇದಿಕರಯ ಖಾದರ್ ಸಾಹೇಬ್, ಉದ್ಯಮಿಗಳಾದ ಬಾಲಕೃಷ್ಣ ಗೌಡ, ರಫೀಕ್ ಉಳಿತೊಟ್ಟು, ಶಿವಪ್ರಕಾಶ್, ಅಣ್ಣಿ ಎಳ್ತಿಮಾರ್, ಶಬ್ಬೀರ್ ಸಾಹೇಬ್ ರವರು ಭಾಗವಹಿಸಲಿದ್ದಾರೆ.

Leave a Reply

error: Content is protected !!