ಪುರುಷನಾಗಿ ಬದಲಾಗಿದ್ದ ಮಹಿಳಾ ಪೊಲೀಸ್‌ ಪೇದೆ; ಈಗ ಗಂಡು ಮಗುವಿನ ತಂದೆ!

ಶೇರ್ ಮಾಡಿ

ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡು ಮಹಿಳೆಯಿಂದ ಪುರುಷನಾಗಿದ್ದ ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಪೊಲೀಸ್ ಪೇದೆ ಗಂಡು ಮಗುವಿಗೆ ತಂದೆಯಾಗಿದ್ದಾರೆ.

ಮಹಾರಾಷ್ಟ್ರದ ಮಜಲಗಾಂವ್ ತಾಲೂಕಿನ ರಾಜೇಗಾಂವ್ ನಿವಾಸಿ ಲಲಿತ್ ಕುಮಾರ್ ಸಾಳ್ವೆ ಅವರು ಜನವರಿ 15 ರಂದು ಗಂಡು ಮಗುವಿಗೆ ತಂದೆಯಾಗಿದ್ದಾರೆ ಎಂದು ವರದಿಯಾಗಿದೆ.

1988 ರ ಜೂನ್ ನಲ್ಲಿ ಜನಿಸಿದ ಲಲಿತಾ ಸಾಳ್ವೆ(ಹಿಂದಿನ ಹೆಸರು) 2010 ರಲ್ಲಿ ಪೊಲೀಸ್‌ ಇಲಾಖೆಗೆ ಸೇರಿದರು. 2013 ರಲ್ಲಿ ಲಲಿತಾ ಅವರು ತನ್ನ ದೇಹದಲ್ಲಿ ಕೆಲ ಬದಲಾವಣೆಯನ್ನು ಕಂಡುಕೊಂಡಿದ್ದಾರೆ. ಈ ಕಾರಣದಿಂದ ವೈದ್ಯಕೀಯ ಪರೀಕ್ಷೆಗಳಿಗೆ ಒಳಗಾದ ಅವರಿಗೆ, ವೈ ಕ್ರೋಮೋಸೋಮ್ ಇರುವುದು ದೃಢವಾಗಿದೆ.

ಸಾಳ್ವೆಗೆ ಲಿಂಗ ಡಿಸ್ಫೋರಿಯಾ ಇದೆ ಎಂದು ವೈದ್ಯರು ಹೇಳಿದ್ದರು. ಹೀಗಾಗಿ ಲಿಂಗ ರಿಸೈನ್‌ ಮೆಂಟ್‌ ಶಸ್ತ್ರಚಿಕಿತ್ಸೆ ಮಾಡಲು ಸಲಹೆ ನೀಡಿದ್ದರು.

ಅದರಂತೆ ಲಲಿತಾ ಅವರು, 2018 ರಲ್ಲಿ ರಾಜ್ಯ ಸರ್ಕಾರದಿಂದ ಅನುಮತಿ ಪಡೆದು, ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೆ ಒಳಗಾದರು. 2018 ಮತ್ತು 2020 ರ ನಡುವೆ ಮೂರು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು.

ಶಸ್ತ್ರ ಚಿಕಿತ್ಸೆಯ ಬಳಿಕ ಅವರ ಹೆಸರನ್ನು ಲಲಿತ್‌ ಎಂದು ಬದಲಾಯಿಸಿಕೊಂಡರು. ಇದಾದ ಬಳಿಕ ಸಾಳ್ವೆ ಛತ್ರಪತಿ ಸಂಭಾಜಿನಗರದ ಮಹಿಳೆಯನ್ನು 2020 ರಲ್ಲಿ ವಿವಾಹವಾದರು.

ಇದೀಗ ಗಂಡು ಮಗುವಿಗೆ ತಂದೆಯಾಗಿದ್ದಾರೆ. “ಹೆಣ್ಣಿನಿಂದ ಪುರುಷನಾಗಿ ನನ್ನ ಪ್ರಯಾಣವು ಹೋರಾಟಗಳಿಂದ ತುಂಬಿತ್ತು. ಈ ಸಮಯದಲ್ಲಿ, ನನ್ನನ್ನು ಬೆಂಬಲಿಸಿದ್ದಾರೆ. ಅವರಿಗೆಲ್ಲ ನಾನು ಕೃತಜ್ಞನಾಗಿದ್ದೇನೆ. ನನ್ನ ಹೆಂಡತಿ ಸೀಮಾ ಮಗುವನ್ನು ಹೊಂದಲು ಬಯಸಿದ್ದಳು. ನಾನೀಗ ತಂದೆಯಾಗಿರುವುದು ಸಂತಸ ತಂದಿದೆ. ನನ್ನ ಕುಟುಂಬ ಥ್ರಿಲ್ ಆಗಿದೆ ಎಂದರು.

Leave a Reply

error: Content is protected !!