ಮದುವೆಗೆ 13 ದಿನ ಇರುವ ವೇಳೆಯಲ್ಲಿ ಮನೆಯ ಸ್ನಾನದ ಕೊಠಡಿ ಪಕ್ಕದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಭಾನುವಾರ ಬೆಳಕಿಗೆ ಬಂದಿದೆ.
ತಾಲೂಕಿನ ಕಟ್ಟೆಹಕ್ಲು ಚೈತ್ರ (26 ವರ್ಷ) ಮೃತಪಟ್ಟ ದುರ್ದೈವಿ. ಫೆಬ್ರವರಿ 4 ರಂದು ಚೈತ್ರ ಅವರಿಗೆ ವಿವಾಹ ನಿಗದಿ ಪಡಿಸಲಾಗಿತ್ತು. ಮಾನಸಿಕ ಸ್ಥಿತಿಯಿಂದ ಹಾಗೂ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದು ಶನಿವಾರ ರಾತ್ರಿ ಮದುವೆ ಬೇಡ ಎಂದು ಹೇಳಿದ್ದರಂತೆ. ನಂತರ ರಾತ್ರಿ ನೇಣಿಗೆ ಕೊರಳು ಒಡ್ಡಿದ್ದಾರೆ.
ಎಂ ಕಾಂ ಪದವಿಧರೆ ಆಗಿರುವ ಚೈತ್ರ ಕಟ್ಟೆಹಕ್ಲಿನ ರಾಮಕೃಷ್ಣ ಮೆಡಿಕಲ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.