ಗುಂಡ್ಯ ಜೈ ಶ್ರೀ ರಾಮ್ ಗೆಳೆಯರ ಬಳಗದಿಂದ ಅಯೋಧ್ಯ ಶ್ರೀರಾಮ ಪ್ರಾಣ ಪ್ರತಿಷ್ಠೆ, ಲೋಕಾರ್ಪಣೆ ಅಂಗವಾಗಿ ಸಿಹಿ ತಿಂಡಿ ವಿತರಣೆ

ಶೇರ್ ಮಾಡಿ

ನೆಲ್ಯಾಡಿ: ಅಯೋಧ್ಯ ಶ್ರೀರಾಮ ಜನ್ಮಭೂಮಿಯಲ್ಲಿ ಪ್ರಾಣಪ್ರತಿಷ್ಠೆ ಹಾಗೂ ಲೋಕಾರ್ಪಣೆಯ ಸಂಭ್ರಮ ಆಚರಣೆಯ ಪ್ರಯುಕ್ತ ಗುಂಡ್ಯ ಜೈ ಶ್ರೀ ರಾಮ್ ಗೆಳೆಯ ಬಳಗದಿಂದ ವಾಹನ ಪ್ರಯಾಣಿಕರಿಗೆ, ಊರವರಿಗೆ ಸುಮಾರು 500 ಕ್ಕಿಂತ ಹೆಚ್ಚು ಜನರಿಗೆ ಲಾಡು, ಅವಲಕ್ಕಿ, ಪಾನಕಗಳನ್ನು ವಿತರಿಸಿ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಜೈ ಶ್ರೀ ರಾಮ್ ಗೆಳೆಯರ ಬಳಗದ ಸುಭಾಷ್ ಪರಶುರಾಮ ಕ್ರೈಂ ಮಾಲಕರು, ಸುರೇಶ್ ಗುಂಡ್ಯ, ತೀರ್ಥ ಕುಮಾರ್, ಸುರೇಶ್ ಮೆಕಾನಿಕ್, ಕೇಶವ ದೇರಣೆ, ಲವಕುಮಾರ್, ಮನು ಆಟೋರಿಕ್ಷಾ, ರವಿ, ಲೋಹಿತ್ ಅಡ್ಡ ಹೊಳೆ, ಜನಾರ್ದನ ಮೊದಲಾದವರು ಸಹಕರಿಸಿದರು.

Leave a Reply

error: Content is protected !!