ಕಾವುನಲ್ಲಿ ಶ್ರೀ ರಾಮನಿಗೆ ಹಣತೆದೀಪ

ಶೇರ್ ಮಾಡಿ

ಪುತ್ತಿಲ ಪರಿವಾರ ಕಾವು ಘಟಕದ ವತಿಯಿಂದ ಅಯೋಧ್ಯೆಯಲ್ಲಿ ನೆಲೆನಿಂತ ಶ್ರೀ ರಾಮನಿಗೆ ಕಾವು ಪಂಚವಟಿ ನಗರದ ಶ್ರೀ ಪಂಚಲಿಂಗೇಶ್ವರ ದೇವರ ಕಟ್ಟೆಯಲ್ಲಿ ಸಂಜೆ ಹಣತೆ ದೀಪಗಳನ್ನು ಹಚ್ಚುವ ಮೂಲಕ ಭಕ್ತಿಪೂರ್ವಕ ನಮನಗಳನ್ನು ಸಲ್ಲಿಸಲಾಯಿತು.

ಪುತ್ತಿಲ ಪರಿವಾರದ ಪದಾಧಿಕಾರಿಗಳು,ಸದಸ್ಯರು ಮತ್ತು ಸಾರ್ವಜನಿಕರೂ ಸೇರಿದಂತೆ ಅನೇಕ ಹಿರಿಯ ರಾಮಭಕ್ತರೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಸಂಭ್ರಮಾಚರಣೆಯ ಅಂಗವಾಗಿ ಕಾವುನ ಮೂರೂ ಪೇಟೆಯಲ್ಲಿ ಪಾಯಸ ಮತ್ತು ಲಾಡು ವಿತರಿಸಲಾಯಿತು.

Leave a Reply

error: Content is protected !!