ಕಪಿಲ ಕೇಸರಿ ಯುವಕ ಮಂಡಲದ ವತಿಯಿಂದ ಶ್ರೀರಾಮೋತ್ಸವ ಮತ್ತು ಹೋಳಿಗೆ ಹಬ್ಬ

ಶೇರ್ ಮಾಡಿ

ಕುಂಟಲಪಾಲ್ಕೆ: ಅಯೋಧ್ಯ ಪ್ರಭು ಶ್ರೀರಾಮ ಮಂದಿರದ ಲೋಕಾರ್ಪಣೆ ಪ್ರಯುಕ್ತ ಕಪಿಲ ಕೇಸರಿ ಯುವಕ ಮಂಡಲದ ವತಿಯಿಂದ ಜ.22ರಂದು ರಾಮೋತ್ಸವ ಮತ್ತು ಹೋಳಿಗೆ ಹಬ್ಬ ಆಚರಿಸಲಾಯಿತು.

ಮುಖ್ಯ ಅತಿಥಿ ರಾಷ್ಟೀಯ ಸ್ವಯಂ ಸೇವಾ ಸಂಘದ ಹಿರಿಯ ಕಾರ್ಯಕರ್ತರಾದ ಕೃಷ್ಣ ಭಟ್ ಕೊಕ್ಕಡ ಇವರು ಮಾತನಾಡಿ ಅಯೋಧ್ಯಯ ಹೋರಾಟದ ಬಗ್ಗೆ ಸಂಘ ಶಕ್ತಿಯ ಮಹತ್ವ ತಿಳಿಸಿದರು. ಅರಿಕೆಗುಡ್ಡೆ ಬ್ರಹ್ಮಕಲಶದ ಅಧ್ಯಕ್ಷ ಪ್ರಕಾಶ್ ಪಿಲಿಕಬೆ ಶುಭ ಹಾರೈಸಿದರು, ಕಪಿಲ ಕೇಸರಿ ಹಿತೈಷಿಗಳಾದ ಅಶೋಕ್ ಭೀಡೆ, ಹತ್ಯಡ್ಕ ಸೇವಾ ಸಹಕಾರಿ ಸಂಘದ ಸದಸ್ಯರಾದ ಧರ್ಮರಾಜ ಗೌಡ ಅಡ್ಕಡಿ, ಹತ್ಯಡ್ಕ ಪಂಚಾಯತ್ ಸದಸ್ಯ ಪ್ರೆಮಚಂದ್ರ, ಕಪಿಲ ಕೇಸರಿ ಅಧ್ಯಕ್ಷ ರಾಜೇಶ್ ಗೌಡ ಬೊಳ್ಳೋಡಿ ಉಪಸ್ಥಿತರಿದ್ದರು.

ವ್ರಕ್ಷವರ್ಧನ್ ಗೋಖಲೆ ಪ್ರಸ್ತವಿಕ ನುಡಿಗಳಾಡಿದರು. ಸುಮಂತ್ ಗೌಡ ಅಳಕ್ಕೆ ಸ್ವಾಗತಿಸಿ ಅನ್ವಿತ್ ರೈ ವಂದಿಸಿದರು. ಶ್ರೀವತ್ಸ ಗೋಖಲೆ ಕಾರ್ಯಕ್ರಮ ನಿರೂಪಿಸಿದರು.
4 ತಂಡಗಳಿಂದ ಭಜನಾ ಕಾರ್ಯಕ್ರಮ, ಹೋಳಿಗೆ ಹಬ್ಬ ಮತ್ತು ದೀಪಾವಳಿ ಹಬ್ಬ ಆಚರಿಸಲಾಯಿತು

Leave a Reply

error: Content is protected !!