ಅಯೋಧ್ಯೆ ಪ್ರಾಣ ಪ್ರತಿಷ್ಠಾಪನೆಯಂದೇ ಗಂಡು ಮಗು ಜನನ

ಶೇರ್ ಮಾಡಿ

ಅಯೋಧ್ಯೆಯಲ್ಲಿ ಶ್ರೀ ರಾಮ ವಿರಾಜಮಾನನಾದ ದಿನದಂದೆ ಅಂದರೆ ಜ.22 ರಂದೇ ಬೆಳ್ತಂಗಡಿ ತಾಲೂಕಿನ ಉಜಿರೆ ಬೆನಕ ಆಸ್ಪತ್ರೆಯಲ್ಲಿ ತಾಯಿಯೊಬ್ಬರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ ಬಸನಬೆಟ್ಟು ನಿವಾಸಿ ಪವಿತ್ರ ಜ.22 ರಂದು ಉಜಿರೆ ಬೆನಕ ಆಸ್ಪತ್ರೆಯಲ್ಲಿ ಬೆಳಗ್ಗೆ 6:20 ಕ್ಕೆ ಗಂಡು ಮಗುವಿಗೆ ಜನ್ಮ ನೀಡಿದ್ದು, ತಾಯಿ-ಮಗು ಆರೋಗ್ಯವಾಗಿದ್ದಾರೆ.

ಮಗುವಿನ ತಂದೆ ಖುಷಿಯಿಂದ ಬೆಂಗಳೂರಿನಿಂದ ಆಸ್ಪತ್ರೆಗೆ ಬಂದಿದ್ದು, ಸಂತಸ ವ್ಯಕ್ತಪಡಿಸಿದ್ದಾರೆ. ಅದಲ್ಲದೆ ನಿನ್ನೆ ಅಯೋಧ್ಯೆಯಲ್ಲಿ ರಾಮನ‌ ಪ್ರಾಣಪ್ರತಿಷ್ಠಾಪನೆಯ ದಿನದಂದೇ ಗಂಡು ಮಗುವಿಗೆ ಜನನವಾಗಿರುವುದರಿಂದ ಮಗುವಿಗೆ ಶ್ರೀರಾಮ ಎಂದು ಹೆಸರಿಡಲು ಯೋಚಿಸುತ್ತೇವೆ ಎಂದಿದ್ದಾರೆ.

ಸುಳ್ಯದ ಸುರೇಶ್ ಮತ್ತು ಪಡಂಗಡಿಯ ಪವಿತ್ರ ದಂಪತಿಗೆ 6 ವರ್ಷದ ಹೆಣ್ಣು ಮಗು ಇದೆ. ಇದೀಗ ಎರಡನೇ ಮಗುವಿನ ಜನನಕ್ಕೆ ಉಜಿರೆಯ ಬೆನಕ ಆಸ್ಪತ್ರೆಯ ಡಾ.ಅಂಕಿತಾ ಭಟ್ ಫೆ.3 ರಂದು ಸಂಭವನೀಯ ದಿನಾಂಕ ನೀಡಿದ್ದರು. ಅದರೆ ಪವಿತ್ರಾ ಅವರಿಗೆ ಜ.21 ರಂದು ರಾತ್ರಿಯೇ ಹೆರಿಗೆ ನೋವು ಕಾಣಿಸಿದ್ದರಿಂದ ತಕ್ಷಣ ಉಜಿರೆ ಬೆನಕ ಆಸ್ಪತ್ರೆಗೆ ಬಂದು ದಾಖಲಾಗಿದ್ದರು. ಜ.22 ರಂದು ಬೆಳಗ್ಗೆ 6:20 ಕ್ಕೆ ನಾರ್ಮನ್ ಡೆಲಿವರಿ ಅಗಿದೆ.

Leave a Reply

error: Content is protected !!