ಹಿಂದೂ ಮುಖಂಡ ಅವಿನಾಶ್ ಪುರುಷರಕಟ್ಟೆ ಗಡಿಪಾರಿಗೆ ಆದೇಶ: ನಾಳೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್

ಶೇರ್ ಮಾಡಿ

ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹಿಂದೂ ಮುಖಂಡ ಅವಿನಾಶ್ ಪುರುಷರಕಟ್ಟೆ ಗಡಿಪಾರಿಗೆ ಉಪ್ಪಿನಂಗಡಿ ಗ್ರಾಮಾಂತರ ಪೊಲೀಸ್ ಠಾಣೆಯಿಂದ ನೋಟಿಸ್ ನೀಡಲಾಗಿದೆ. ನಾಳೆ ಪುತ್ತೂರು ಸಹಾಯಕ ಆಯುಕ್ತರ ನ್ಯಾಯಾಲಯಕ್ಕೆ ಹಾಜರಾಗುವಂತೆ ತಿಳಿಸಲಾಗಿದೆ. ಅವಿನಾಶ್​ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ನರಿಮೊಗರು ಗ್ರಾಮದ ಪುರುಷರಕಟ್ಟೆ ನಿವಾಸಿ. ಒಂದು ವೇಳೆ ನಾಳೆ ಅವಿನಾಶ್ ವಿಚಾರಣೆಗೆ ಹಾಜರಾಗದಿದ್ದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಿಂದ ಬೀದರ್​ಗೆ ಗಡಿಪಾರು ಮಾಡುವುದಾಗಿ ನೋಟಿಸ್​ನಲ್ಲಿ ಈ ಬಗ್ಗೆ ಸಹಾಯಕ ಆಯುಕ್ತರ ಕಚೇರಿ ಉಲ್ಲೇಖ ಮಾಡಿದ್ದಾರೆ.

ನೋಟಿಸ್​​ನಲ್ಲಿ ಏನಿದೆ?
ಹಿಂದೂ ಮುಖಂಡ ಅವಿನಾಶ್ ಪುರುಷರಕಟ್ಟೆ ಇವರನ್ನು ದಕ್ಷಿಣ ಕನ್ನಡ ಕರ್ನಾಟಕ ಪೊಲೀಸ್ ಕಾಯ್ದೆ- 1963 ಕಲಂ 55(ಎ) ಮತ್ತು (ಬಿ) ರಂತೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಗಡಿಪಾರು ಕುರಿತು ಪುತ್ತೂರು ಸಹಾಯಕ ಆಯುಕ್ತರ ಕಚೇರಿಯ ನ್ಯಾಯಾಲಯದಲ್ಲಿ ಜ 24 ರಂದು ಪೂರ್ವಾಹ್ನ 11.00 ಘಂಟೆಗೆ ವಿಚಾರಣೆಗೆ ನಿಗದಿಪಡಿಸಲಾಗಿದೆ.

ಈ ಪ್ರಕರಣದಲ್ಲಿ ನೀವು ಸ್ವತಃ ನ್ಯಾಯವಾದಿಯವರ ಮೂಲಕ ವಿಚಾರಣೆಗೆ ಹಾಜರಾಗಿ ವಾದಿಸಬಹುದೆಂದು ತಿಳಿಸಲಾಗಿದೆ. ತಪ್ಪಿದಲ್ಲಿ ಸದರಿ ಪ್ರಕರಣದಲ್ಲಿ ನಿಮಗೆ ಆಸಕ್ತಿ ಇಲ್ಲವೆಂದು ಭಾವಿಸಿ, ಲಭ್ಯವಿರುವ ಮಾಹಿತಿಯ ಆಧಾರದಲ್ಲಿ ನ್ಯಾಯಾಲಯದ ಆದೇಶದ ಮೇರೆಗೆ ಏಕಪಕ್ಷಿಯವಾಗಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.

Leave a Reply

error: Content is protected !!