ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ನೇರ್ಲ-ಇಚ್ಲಂಪಾಡಿಯಲ್ಲಿ ಗಣರಾಜ್ಯೋತ್ಸವ ಸಂಭ್ರಮಾಚರಣೆ

ಶೇರ್ ಮಾಡಿ

ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ನೇರ್ಲ-ಇಚ್ಲಂಪಾಡಿಯಲ್ಲಿ ಗಣರಾಜ್ಯೋತ್ಸವ ಸಂಭ್ರಮಾಚರಣೆ ನಡೆಯಿತು.


ಧ್ವಜಾರೋಹಣವನ್ನು SDMC ಅಧ್ಯಕ್ಷರಾದ ವಸಂತ ಬಿಜೇರು ಇವರು ನೆರವೇರಿಸಿ ಗಣರಾಜ್ಯೋತ್ಸವದ ಸಂದೇಶವನ್ನು ನೀಡಿದರು.


ಈ ಸಂದರ್ಭದಲ್ಲಿ SDMC ಉಪಾಧ್ಯಕ್ಷರಾದ ಶ್ರೀಮತಿ ನಂದಕುಮಾರಿ, ಕೌಕ್ರಾಡಿ ಪಂಚಾಯತಿನ ಸದಸ್ಯರಾದ ಶ್ರೀಮತಿ ಡೈಸಿ ವರ್ಗೀಸ್, ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ಜಯಶ್ರೀ ಎಸ್, ಶಿಕ್ಷಕ ವೃಂದ, ಅಕ್ಷರ ದಾಸೋಹ ಸಿಬ್ಬಂದಿಗಳು, ಶಾಲಾ ವಿದ್ಯಾರ್ಥಿಗಳು , ಪೋಷಕರು ಮತ್ತು ಊರ ವಿದ್ಯಾಭಿಮಾನಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಂಗವಾಗಿ ಮಕ್ಕಳು ಗಣರಾಜ್ಯೋತ್ಸವದ ಕುರಿತಾಗಿ ಭಾಷಣವನ್ನು ಮಾಡಿದರು. ಶ್ರೀಮತಿ ಡೈಸಿ ವರ್ಗೀಸ್ ರವರು ಮಕ್ಕಳಿಗೆ ಸಿಹಿ ವಿತರಿಸಿದರು. ಹಿರಿಯ ಶಿಕ್ಷಕಿ ಶ್ರೀಮತಿ ಜಯ.ಕೆ ಅತಿಥಿಗಳನ್ನು ಸ್ವಾಗತಿಸಿದರು ಮತ್ತು ಶಿಕ್ಷಕ ಗಿರೀಶ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Leave a Reply

error: Content is protected !!