ಗೋಳಿ ಅಂಗಡಿ ಸ್ಫೋಟ ಪ್ರಕರಣ: ಮೃತ ಕುಟುಂಬಕ್ಕೆ ಕೆ ಎಸ್ ಎಂ ಸಿ ಎ ಬೆಳ್ತಂಗಡಿ ಯಿಂದ ಸಹಾಯ ಹಸ್ತ

ಶೇರ್ ಮಾಡಿ

ಬೆಳ್ತಂಗಡಿ:ಜ 28 ರ ಕುಕ್ಕೇಡಿ ಗೋಳಿ ಅಂಗಡಿ ಸ್ಫೋಟ ಪ್ರಕರಣದಲ್ಲಿ ಹಾನಿಗೀಡಾದ ಮನೆಗಳಿಗೆ ಭೇಟಿ ನೀಡಿತು.
ಕೆ ಎಸ್ ಎಂ ಸಿ ಎ ತಂಡ ಮೃತ ಪಟ್ಟ ವರ್ಗೀಸ್ ಕುಟುಂಬಕ್ಕೆ ಬೇಕಾದ ಎಲ್ಲಾ ಸಹಾಯವನ್ನು ನೀಡಲು ಕೆ ಎಸ್ ಎಂ ಸಿ ಎ ಬೆಳ್ತಂಗಡಿಯಿಂದ ಸಹಾಯ ತಂಡವನ್ನು ರೆಜಿ ಜಾರ್ಜ್ ಪದಂಗಡಿ ಇವರ ನೇತೃತ್ವದಲ್ಲಿ ರಚಿಸಲಾಯಿತು. ಕೇರಳದ ಮನೆಯವರನ್ನು ಸಂಪರ್ಕಿಸಿ ಮೃತ ದೇಹದ ಗುರುತು ಹಾಗೂ ಊರಿಗೆ ದೇಹವನ್ನು ರವಾನಿಸುವ ವ್ಯವಸ್ಥೆಗೆ ಸಹಾಯ ಮಾಡಲಿದ್ದಾರೆ.
ಭೇಟಿ ತಂಡದಲ್ಲಿ ನಿರ್ದೇಶಕರಾದ ವಂದನಿಯ ಫಾ.ಶಾಜಿ ಮಾತ್ಯು ಪಿ ಆರ್ ಓ, ಸೆಬಾಸ್ಟಿನ್ ಪಿ ಸಿ. ಉಜಿರೆ ಘಟಕಾಧ್ಯಕ್ಷ ಜೋಬಿ ಬೆಳ್ತಂಗಡಿ ವಲಯ ಅಧ್ಯಕ್ಷರಾದ ರೆಜಿ ಜಾರ್ಜ್ ಹಾಗೂ ವೇಣೂರಿನ ಕೆ ಎಸ್ ಎಂ ಸಿ ಎ ಸದಸ್ಯರು ಜೊತೆಯಲ್ಲಿದ್ದರು.

Leave a Reply

error: Content is protected !!