ಸುಖಿ ಸಮಾಜ ನಿರ್ಮಾಣವಾಗಬೇಕಾದರೆ ಯುವಕರು ಸಂಘಟನೆಗಳಲ್ಲಿ ತೊಡಗಿಸಿಕೊಳ್ಳಬೇಕು- ಪುರಂದರ ರೈ ಮಿತ್ರಂಪಾಡಿ

ಶೇರ್ ಮಾಡಿ

ನೆಲ್ಯಾಡಿ ಜೆಸಿಐ 2024ನೇ ಸಾಲಿನ ಘಟಕಾಡಳಿತ ಮಂಡಳಿ ಪದಗ್ರಹಣ

ಜೆಸಿಐ ನೆಲ್ಯಾಡಿ ಇದರ 41ನೇ ಅಧ್ಯಕ್ಷೆ ಜೆಸಿಐ ಸುಚಿತ್ರಾ ಜೆ ಬಂಟ್ರಿಯಲ್ ಮತ್ತು ತಂಡದ ಘಟಕಾಡಳಿತ ಮಂಡಳಿಯ ಪದಗ್ರಹಣ ಸಮಾರಂಭ ಜ.29ರಂದು ನೆಲ್ಯಾಡಿಯ ಸಂತ ಜಾರ್ಜ್ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.

ಮುಖ್ಯ ಅತಿಥಿಯಾಗಿದ್ದ ಜೆಸಿಐ ಭಾರತದ ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷರಾದ ಜೆಸಿಐ ಸೆನೆಟರ್ ಪುರಂದರ ರೈ ಮಿತ್ರಂಪಾಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಹೃದಯದಿಂದ ಹೃದಯಕ್ಕೆ ಸಂಬಂಧಗಳು ಬೆಸೆದಾಗ ರಿಲೇಶನ್ ಶಿಪ್ ಹೆಚ್ಚಾಗುತ್ತದೆ, ಹಿರಿಯರ ಅನುಭವ, ತಿಳುವಳಿಕೆ, ನಡತೆಗಳನ್ನು ಅಳವಡಿಸಿಕೊಂಡು ಯುವಕರು ಜೆಸಿಐ ಸಂಸ್ಥೆಗಳಿಗೆ ಸೇರಿಕೊಂಡು ವ್ಯಕ್ತಿತ್ವ ವಿಕಸನ ಹೊಂದುವುದರ ಮೂಲಕ ಸುಖಿ ಜಾಗತಿಕರಣ ನಿರ್ಮಾಣಗೊಳ್ಳಲು ಸಾಧ್ಯವಾಗುತ್ತದೆ ಎಂದರು.

ಇನ್ನೋರ್ವ ಮುಖ್ಯ ಅತಿಥಿ ನೆಲ್ಯಾಡಿ ಸಂತ ಚಾರ್ಜ್ ವಿದ್ಯಾಸಂಸ್ಥೆಗಳ ಸಂಚಾಲಕರು & ಮ್ಯಾನೇಜರ್ ರೆ.ಫಾ.ನೋಮೀಸ್ ಪಿ.ಕುರಿಯ ಕೋಸ್ ಹಾಗೂ ಗೌರವ ಉಪಸ್ಥಿತಿಯಲ್ಲಿದ್ದ ವಲಯ ಉಪಾಧ್ಯಕ್ಷರಾದ ಜೆಎಫ್ಎಂ ಶಂಕರ್ ರಾವ್, ನೆಲ್ಯಾಡಿ ಸಂತ ಚಾರ್ಜ್ ವಿದ್ಯಾಸಂಸ್ಥೆಯ ಸ್ಥಾಪಕ ಕಾರ್ಯದರ್ಶಿ ಅಬ್ರಹಾಂ ವರ್ಗೀಸ್ ಸಂದರ್ಭೋಚಿತವಾಗಿ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಪೂರ್ವಾರ್ಧದಲ್ಲಿ ಸಭೆಯ ಅಧ್ಯಕ್ಷತೆ ವಹಿಸಿದ್ದ ದಯಾಕರ ಕೆ.ಎಂ ಗತಕಾಲದ ವರದಿಯನ್ನು ವಾಚಿಸಿ, ನೆಲ್ಯಾಡಿ ಘಟಕದ 40ನೇ ಅಧ್ಯಕ್ಷರಾಗಿ 1 ವರ್ಷದ ಅವಧಿಯಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿ. ಘಟಕದ ಪೂರ್ವ ಅಧ್ಯಕ್ಷರುಗಳಿಗೆ ಹಾಗೂ 2023ನೇ ಸಾಲಿನ ಘಟಕ ಆಡಳಿತ ಮಂಡಳಿ ಪದಾಧಿಕಾರಿಗಳಿಗೆ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.

ಸನ್ಮಾನ:
ಗಂಗಾಧರ ಶೆಟ್ಟಿ ಹೊಸಮನೆ, ಪ್ರಶಾಂತ್ ಸಿ.ಎಚ್, ಅಬ್ರಹಾಂ ವರ್ಗೀಸ್, ನಿಕಟ ಪೂರ್ವ ಅಧ್ಯಕ್ಷೆ ಜಯಂತಿ ಬಿ.ಎಂ., ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು

ಪದಗ್ರಹಣ:
2024ನೇ ಸಾಲಿನ ನೂತನ ಅಧ್ಯಕ್ಷೆ ಜೆಸಿಐ.ಸುಚಿತ್ರಾ ಜೆ.ಬಂಟ್ರಿಯಾಲ್ ರವರಿಗೆ ನಿರ್ಗಮನ ಅಧ್ಯಕ್ಷ ದಯಾಕರ ಕೆ.ಎಂ ಪ್ರಮಾಣವಚನ ಬೋಧಿಸಿ ಪಿನ್ ತೊಡಿಸಿ ಅಧಿಕಾರ ಹಸ್ತಾಂತರ ಮಾಡಿದರು. ನಿರ್ಗಮನ ಕಾರ್ಯದರ್ಶಿ ಸುಚಿತ್ರಾ ಜೆ.ಬಂಟ್ರಿಯಾಲ್ ಅವರು ನೂತನ ಕಾರ್ಯದರ್ಶಿ ಆನಂದ ಅಜಿಲ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದರು. ನಿರ್ಗಮನ ಜೇಸಿರೇಟ್ ಅಧ್ಯಕ್ಷೆ ಜೇಸಿ ರಶ್ಮಾ ರೈ ನೂತನ ಜೇಸಿರೇಟ್ ಅಧ್ಯಕ್ಷೆ ಎನ್ ಲೀಲಾ ಮೋಹನ್ ಹಾಗೂ ಜೆಜೆಸಿ ಅಧ್ಯಕ್ಷ ಗೌರವ್ ಅವರು ನೂತನವಾಗಿ ಆಯ್ಕೆಯಾದ ಜೆಜೆಸಿ ಅಧ್ಯಕ್ಷರಾದ ಶಮಂತ್, ವೈಷ್ಣವಿ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದರು ನೂತನವಾಗಿ ಆಯ್ಕೆಯಾದ ಘಟಕ ಆಡಳಿತ ಮಂಡಳಿ ಸದಸ್ಯರಿಗೆ ಅಧ್ಯಕ್ಷೆ ಸುಚಿತ್ರಾ ಜೆ. ಬಂಟ್ರಿಯಾಲ್ ಅವರು ಪ್ರಮಾಣ ವಚನ ಬೋಧಿಸಿದರು.
ಉತ್ತರಾರ್ಧದಲ್ಲಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ನೂತನ ಅಧ್ಯಕ್ಷೆ ಜೆಸಿಐ.ಸುಚಿತ್ರಾ ಜೆ.ಬಂಟ್ರಿಯಾಲ್ ಅವರು, ಪೂರ್ವ ಅಧ್ಯಕ್ಷರುಗಳ ಸಹಕಾರ, ಮಾರ್ಗದರ್ಶನದೊಂದಿಗೆ ನನ್ನಿಂದಾಗುವ ನ್ಯಾಯ ಒದಗಿಸಲು ಬದ್ಧನಾಗಿರುವುದಾಗಿ ಹೇಳಿದರು

ಸದಸ್ಯರ ಸೇರ್ಪಡೆ:
ಸತೀಶ್ ಕೆ ಎಸ್ ದುರ್ಗಾಶ್ರೀ, ಅನುಪಮ್, ಗೌರವ್ ಜಿ ಕೆ, ಶ್ಯಾರುಣ್, ಸುರಕ್ಷಾ ಶೆಟ್ಟಿ ರವರು ಈ ಸಂದರ್ಭದಲ್ಲಿ ಜೆಸಿಐ ನೆಲ್ಯಾಡಿ ಘಟಕಕ್ಕೆ ಸೇರ್ಪಡೆಗೊಂಡರು.

ಜೆಸಿಐ ಪೂರ್ವಾಧ್ಯಕ್ಷ ಡಾ.ಸದಾನಂದ ಕುಂದರ್ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು. ಜಾಹ್ನವಿ ಜೇಸಿ ವಾಣಿ ವಾಚಿಸಿದರು. ದಯಾಕರ ರೈ ಕೆ.ಯಂ ಸ್ವಾಗತಿಸಿದರು. ಆನಂದ ಅಜಿಲ ವಂದಿಸಿದರು.

Leave a Reply

error: Content is protected !!