ಯುವತಿ ನೇಣು ಬಿಗಿದು ಆತ್ಮಹತ್ಯೆ

ಶೇರ್ ಮಾಡಿ

ಕಳೆಂಜ ಇಲ್ಲಿಯ ಕಾಯರ್ತಡ್ಕ ಕುರುಂಬುಡೇಲು ನಿವಾಸಿ ಓಣಿಬಾಗಿಲು ಅವಿವಾಹಿತ ವನಿತಾ ಯಾನೆ ರೇವತಿ(30ವ)ರವರು ಡೆತ್ ನೋಟ್ ಬರೆದು ಮನೆಯ ಪಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಫೆ.8ರಂದು ಮುಂಜಾನೆ ನಡೆದಿದೆ.

ಮಂಗಳೂರು ಖಾಸಗಿ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದ ಯುವತಿ ಅನಾರೋಗ್ಯದ ಕಾರಣ ಒಂದು ತಿಂಗಳ ಹಿಂದೆ ಮನೆಗೆ ಬಂದಿದ್ದರು. ಡೆತ್ ನೋಟ್ ನಲ್ಲಿ ನನ್ನ ಸಾವಿಗೆ ನಾನೇ ಕಾರಣ ಎಂದು ಉಲ್ಲೇಖಿಸಿರುವ ಬಗ್ಗೆ ಮಾಹಿತಿ ದೊರೆತಿದ್ದು ಧರ್ಮಸ್ಥಳ ಠಾಣೆಯ ಪೊಲೀಸರು ಆಗಮಿಸಿ, ತನಿಖೆ ನಡೆಸುತ್ತಿದ್ದಾರೆ.

ಮೃತರು ತಂದೆ ಹೊನ್ನಪ್ಪ ಗೌಡ, ತಾಯಿ ವಾರಿಜಾ ಹಾಗೂ ಸಹೋದರರಾದ ಜನಾರ್ದನ ಗೌಡ, ಪದ್ಮನಾಭ ಗೌಡ ಮತ್ತು ಬಂಧು-ಬಳಗವನ್ನು ಅಗಲಿದ್ದಾರೆ.

Leave a Reply

error: Content is protected !!